ಭಗವದ್ಗೀತೆ ಬೋಧನೆ ನಿಲ್ಲಿಸಿ;.ಎಫ್.ಐ ಒತ್ತಾಯ

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಭಗವದ್ಗೀತೆ ಬೋದನೆ ಮಾಡಬೇಕು ಎಂದು ರಾಜ್ಯ ಸರಕಾರ ಶಾಲೆಗಳಿಗೆ ಆದೇಶ ಮಾಡುವ ಮೂಲಕ ಶಿಕ್ಷಣ ಕ್ಷೆತ್ರವನ್ನು ಕೇಸರಿಕರಣ ಮಾಡುವ ಹುನ್ನಾರ ನಡೆದಿದೆ. ಶಾಲೆಗಲಲ್ಲಿ ಭಗವದ್ಗೀತೆ ಬೋಧಿಸಿದರೆ ನಮ್ಮ ಪ್ರಾಥಮಿಕ ಶಿಕ್ಷಣ ಉದ್ದಾರವಾಗುತ್ತುದೆ ಎಂದು ಆದೇಶ ಹೊರಡಿಸಿರುವುದು ಎಷ್ಟೋಂದು ಅವೈಜ್ಞಾನಿಕ. ಮೊನ್ನೆ(ಜುಲೈ೦೬) ಕೋಲಾರದಲ್ಲಿ ಈ ಅಭಿಯಾನಕ್ಕೆ ರಾಜ್ಯ ಸರಕಾರ ಅಧಿಕೃತ ಚಾಲನೆ ನೀಡಿದೆ. ಇಂತಹ ಕಾರ್ಯಕ್ರಮ ಮಾಡುವ ಬದಲು ಶಲೆಗಳನ್ನು ಅಭಿವೃದ್ದಿ ಮಾಡಿ ಎಂದು ಹೇಳಿದ ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ನ್ನು ನಿಶೇದ ಮಾಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಬಿ.ಜೆ.ಪಿ ಮತ್ತು ಸ್ವಾಮಿಜಿಗಳು ನಡೆಸುತ್ತಿರುದು ಶಿಕ್ಷಣ ವಿರೋಧಿ ನೀತಿಯಾಗಿದೆ.
ಸ್ವಾಮಿಜಿಗಳ ಹೋರಾಟ ಸರಿಯೇ?: ಭಗವದ್ಗೀತೆ ಬೋಧನೆ ಬೇಡ ಶಾಲೆಗಳಿಗೆ ಮೂಲ ಸೌಲಭ್ಯ ನೀಡಿ ಎಂದು ಪ್ರತಿಭಟಿಸಿ ಎಸ್.ಎಫ್.ಐ ಸಂಘಟನೆಯನ್ನು ನಿಷೇದಿಸಬೇಕು ಎಂದು ಸ್ವಾಮಿಜಿಗಳು ಬೀದಿಗಿಳಿದಿದ್ದಾರೆ. .ಎಸ್.ಎಫ್.ಐ ಸಂಘಟನೆಯವರು ಕೇಳಿದ್ದು ತಪ್ಪು ಎನ್ನುತ್ತಿರುವ ಸ್ವಾಮಿಜಿಗಳಿಗೆ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ ಎಂಬುದು ಎತ್ತಿ ತೋರಿಸುತ್ತಿದೆ. ಕಳೆದ ೪೧ ವರ್ಷಗಳಿಂದ ವಿದ್ಯಾಥಿಗಳ ಏಳ್ಗೆಗಾಗಿ, ಶಿಕ್ಷಣದ ಖಾಸಗಿಕರಣ, ಕೇಸರಿಕರಣವನ್ನು ವಿರೋಧಿಸುತ್ತ, ವೈಜ್ಞಾನಿಕ ಶಿಕ್ಷಣ ಪದ್ದತಿ ಜಾರಿಗಗಿ ತ್ಯಾಗ ಬಲಿದಾನದ ಮೂಲಕ ನಿರಂತರ ಹೋರಾಟವನ್ನು ಇಡಿ ದೇಶಾದ್ಯಂತ ನಡೆಸುತ್ತಿದೆ. ಇದನ್ನು ಸ್ವಾಮಿಜಿಗಳ ಗುಂಪು ಅರಿಯಬೇಕಿದೆ. ಎಸ್.ಎಫ್.ಐ ವರ್ತನೆ ಕ್ರೂರ ಎನ್ನುತ್ತಿರುವ ಸ್ವಾಮಿಜಿಗಳು ತಾವು ಮಾಡಿದ್ದಾದರು ಏನು? ಪರಿಕ್ಷೆ ಇರುವ ಕಾರಣ ಸೆಕ್ಷನ್ ೧೪೪ ಜಾರಿ ಮಧ್ಯೆಯು ಕಾರ್ಯಕ್ರಮ ಮಾಡಿರುವುದು ಕಾನುನು ಉಲ್ಲಂಘನೆಯಲ್ಲವೆ? ಸ್ವಾಮಿಜಿಗಳ ದೂರಿನ ಮೇರೆಗೆ ಎಸ್.ಎಫ್.ಐ ನಾಯಕರನ್ನು ಬಂದಿಸಿರುವ ಪೋಲಿಸರು, ಎಸ್.ಎಫ್.ಐ ನಾಯಕರು ದೂರು ನೀಡಿದರು, ತಪ್ಪು ಮಾಡಿರುವ ಸ್ವಾಮಿಜಿಯನ್ನು ಏಕೆ ಬಂದಿಸಲಿಲ್ಲಾ? ಸರಕಾರದ ತಪ್ಪು ಎಲ್ಲರಿಗೂ ಅರ್ಥವಾಗುತ್ತದೆ. ಇನ್ನಾದರು ಸರಕಾರ ಎಚ್ಚತ್ತು ಈ ಅಭಿಯಾನವನ್ನು ನಿಲ್ಲಿಸಬೇಕು. ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ, ಮಾರುತಿ ಮ್ಯಾಗಳಮನಿ, ಗಂಗಾದರ ಗದಗ, ದಾದಾಸಾಹೆಬ್, ಸುಬಾನ್ ಸೈಯದ್, ಯಮನೂರ ಒತ್ತಾಯಿಸಿದ್ದಾರೆ
Please follow and like us:
error