ಸೆ.೨೭ ರಿಂದ ಧಾರವಾಡದಲ್ಲಿ ಕೃಷಿ ಮೇಳ.

ಕೊಪ್ಪಳ, ಸೆ.೧೯ (ಕ ವಾ)
ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಕೃಷಿ
ಇಲಾಖೆ ಹಾಗೂ ಧಾರವಾಡದ ಕೃಷಿ ವಿದ್ಯಾಲಯದ ವತಿಯಿಂದ ‘ಕೃಷಿಕರ ಆತ್ಮಸ್ಥೈರ್ಯ ವೃದ್ಧಿ –
ಕೃಷಿ ಕ್ಷೇತ್ರದ ಅಭಿವೃದ್ಧಿ’ ಎಂಬ ಶೀರ್ಷಿಕೆಯೊಂದಿಗೆ ಕೃಷಿ ಮೇಳ-೨೦೧೫ ನ್ನು ಸೆ.೨೭
ರಿಂದ ಸೆ.೩೦ ರವರೆಗೆ ಆಯೋಜಿಸಲಾಗಿದೆ.
        ಕೃಷಿ ಮೇಳದಲ್ಲಿ ಕೃಷಿಕರ
ಆತ್ಮಸ್ಥೈರ್ಯ ವೃದ್ಧಿಸಲು ವಿಜ್ಞಾನಿಗಳು, ಹಣಕಾಸು ಸಂಸ್ಥೆಗಳು ಹಾಗೂ ವಿಮಾ
ಕಂಪನಿಗಳೊಂದಿಗೆ ಸಂವಾದ, ಕಬ್ಬು ಉತ್ಪಾದನೆಗಾಗಿ ಕಡಿಮೆ ಖರ್ಚಿನ ತಾಂತ್ರಿಕತೆಗಳು,
ಮಣ್ಣಿನ ಫಲವತ್ತತೆ ಹಾಗೂ ಆರೋಗ್ಯ ಸಂರಕ್ಷಣೆ, ಸವಳು ಮತ್ತು ಜವಳು ಭೂಮಿಗಳ ಸುಧಾರಣೆ, ಒಣ
ಬೇಸಾಯ ತಾಂತ್ರಿಕತೆಗಳಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಕೃಷಿಯಲ್ಲಿ ಜೈವಿಕ
ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ಸಮಗ್ರ ಬೆಳೆ, ಪೋಷಕಾಂಶ ಹಾಗೂ ಪೀಡೆಗಳ
ನಿರ್ವಹಣೆ, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಧಿಕ ಇಳುವರಿ ಮತ್ತು ನೀರಿನ
ಉಳಿತಾಯಕ್ಕಾಗಿ ಸುಧಾರಿತ ನೀರಾವರಿ ಪದ್ಧತಿಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ರೈತರ ಸಬಲೀಕರಣಕ್ಕೆ ಸಮಗ್ರ
ಕೃಷಿ ಪದ್ಧತಿ, ಸಾವಯವ ಕೃಷಿ ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡೆ ನಾಶಕಗಳು, ಸುಧಾರಿತ
ತಳಿ ಬೀಜ, ಸಸಿ ಹಾಗೂ ಕೃಷಿ ಪ್ರಕಟಣೆಗಳ ಮಾರಾಟ, ಸುಧಾರಿತ ಕೃಷಿ ಯಂತ್ರೋಪಕರಣ ಹಾಗೂ
ಸಲಕರಣೆಗಳ ಬಳಕೆ, ರೈತರ ಆವಿಷ್ಕಾರಗಳು ಮತ್ತು ಕೃಷಿ ತಂತ್ರಜ್ಞರೊಂದಿಗೆ ಸಂವಾದ
ಕಾರ್ಯಕ್ರಮಗಳು ನಡೆಯಲಿವೆ.  ಅಲ್ಲದೆ ಹೈಟೆಕ್ ತೋಟಗಾರಿಕೆ, ಸುಗಂಧ ಮತ್ತು ಔಷಧಿ
ಸಸ್ಯಗಳು ಹಾಗೂ ಫಲ ಪುಷ್ಪಗಳ ಪ್ರದರ್ಶನ, ಕೃಷಿ ಅರಣ್ಯ, ಜೈವಿಕ ಇಂಧನದ ಬೆಳೆಗಳು ಹಾಗೂ
ಜೈವಿಕ ಇಂಧನ ಸಂಸ್ಕರಣೆ, ಪಶು ಸಂಗೋಪನೆ, ಜಾನುವಾರುಗಳ ಪ್ರದರ್ಶನ ಹಾಗೂ ಮೇವಿನ ಬೆಳೆಗಳ
ತಾಂತ್ರಿಕತೆ, ಕೃಷಿ ಕ್ಲಿನಿಕ್, ಕೃಷಿ ವ್ಯವಹಾರ, ರಫ್ತು ಹಾಗೂ ಕೃಷಿ ಅಂತರ್ಜಾಲದ ಮೂಲಕ
ಹುಟ್ಟುವಳಿ ಮಾರಾಟ, ಗೃಹ ವಿಜ್ಞಾನ ತಾಂತ್ರಿಕತೆಗಳು ಮತ್ತು ತೃಣ ಧಾನ್ಯಗಳ
ಮೌಲ್ಯವರ್ಧನೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಸ್ವಸಹಾಯ ಗುಂಪುಗಳ ಸಬಲೀಕರಣ,
ಕೃಷಿ ಸಮುದಾಯ ಬಾನುಲಿ ಕೇಂದ್ರ ಎಫ್‌ಎಮ್-೯೦.೪ ಎಮ್‌ಹೆಚ್‌ಝಡ್ ನಲ್ಲಿ ಕೃಷಿ ಮಾಹಿತಿ
ಪ್ರಸಾರ ಸೇರಿದಂತೆ ವಿವಿಧ ವಿಷಯಗಳ ಮಾಹಿತಿ ಕೃಷಿ ಮೇಳದಲ್ಲಿ ದೊರೆಯಲಿದೆ.
    
ಮೇಳದಲ್ಲಿ ಅಂದಾಜು ೧೦ ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ
ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದ್ದು, ವಿವಿಧ ಅಭಿವೃದ್ಧಿ
ಇಲಾಖೆಗಳು, ಬೀಜ, ಗೊಬ್ಬರ, ಕೀಟನಾಶಕ ಉತ್ಪಾದಿಸುವ ಘಟಕಗಳು ಮತ್ತು ಅನೇಕ ಸರ್ಕಾರಿ ಹಾಗೂ
ಸರ್ಕಾರೇತರ ಸಂಘ ಸಂಸ್ಥೆಗಳು ೪೦೦ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿವೆ. 
ರೈತ ಬಂಧುಗಳು ಕೃಷಿ ಮೇಳದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ
ಮೇಳ-೨೦೧೫ ರ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಎಮ್.ಮಂಟೂರ ತಿಳಿಸಿದ್ದಾರೆ.  

ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾಂಪ್ರದಾಯಿಕ ವೃತ್ತಿದಾರರಿಂದ ಅರ್ಜಿ ಆಹ್ವಾನ.
ಕೊಪ್ಪಳ,
ಸೆ.೧೯ (ಕ ವಾ) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ನಿಯಮಿತ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿಗೆ ಹಿಂದುಳಿದ ವರ್ಗಗಳ ಸಾಂಪ್ರದಾಯಿಕ
ವೃತ್ತಿದಾರರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಹಾಗೂ ಜಾಲ ಏರ್ಪಡಿಸಲು ಗ್ರಾಮ
ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಮಾರುಕಟ್ಟೆ ಮಳಿಗೆ ಸ್ಥಾಪನೆಗೆ
ವಾರ್ಷಿಕ ಶೇಕಡಾ.೨ ರ ಬಡ್ಡಿ ದರದಲ್ಲಿ ೧.೫೦ ಲಕ್ಷ ರೂ.ಗಳ ಸಾಲ ಒದಗಿಸಲು ಆಸಕ್ತ
ಸಾಂಪ್ರದಾಯಿಕ ವೃತ್ತಿದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
     ಅರ್ಜಿ
ಸಲ್ಲಿಸಲಿಚ್ಛಿಸುವವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ
ಸಮುದಾಯಗಳು ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ) ಸಾಂಪ್ರದಾಯಿಕ ವೃತ್ತಿಗಳಾದ ದೋಬಿ,
ಕ್ಷೌರಿಕ, ಕುಂಬಾರಿಕೆ, ನೇಕಾರಿಕೆ, ಟೇಲರಿಂಗ್ ಮುಂತಾದ ವೃತ್ತಿಗಳನ್ನು
ನಿರ್ವಹಿಸುತ್ತಿರಬೇಕು. ಕುಟುಂಬದ ವಾರ್ಷಿಕ ಆದಾಯ ಮೀತಿ ಗ್ರಾಮೀಣ ಪ್ರದೇಶದವರಿಗೆ
೪೦,೦೦೦ ರೂ. ಮತ್ತು ನಗರ ಪ್ರದೇಶದವರಿಗೆ ೫೦,೦೦೦ ರೂ.ಮೀರಿರಬಾರದು. ಅಲ್ಲದೆ,
ಅರ್ಜಿದಾರರು ೧೮ ರಿಂದ ೫೫ ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ಗ್ರಾಮ ಪಂಚಾಯತ್ ಹಾಗೂ
ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ೧೨*೧೦ ಅಡಿ ಅಳತೆಯ ಮಳಿಗೆ ಸ್ಥಾಪಿಸಲು ಗರಿಷ್ಠ
ರೂ.೧.೫೦ ಲಕ್ಷಗಳನ್ನು ಶೇಕಡಾ ೨ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ
ಸಾಲವನ್ನು ವಾರ್ಷಿಕ ಶೇಕಡಾ ೨ ರ ಬಡ್ಡಿ ದರದಲ್ಲಿ ೩೬ ಮಾಸಿಕ ಕಂತುಗಳಲ್ಲಿ
ಮರುಪಾವತಿಸಬೇಕು. ಇದರಲ್ಲಿ ೨ ಕಂತುಗಳ ವಿರಾಮಾವಧಿ ಇರುತ್ತದೆ. ಮಳಿಗೆ ಸ್ಥಾಪಿಸಲು
ಒದಗಿಸಿರುವ ನಿವೇಶನದ ಮೇಲೆ ಸಾಲ ತೀರುವಳಿಯಾಗುವವರೆಗೂ ನಿಗಮದ ಹಕ್ಕು ದಾಖಲಿಸಬೇಕು.
    
ಆಸಕ್ತರು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ
ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಸಾಂಪ್ರದಾಯಿಕ
ವೃತ್ತಿದಾರರು ಯೋಜನೆಯ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ,
ಅಕ್ಟೋಬರ್.೦೯ ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ ೦೮೫೩೯-೨೨೧೮೪೫, ಸಹಾಯಕ ಪ್ರಧಾನ
ವ್ಯವಸ್ಥಾಪಕರ ಕಛೇರಿ, ಕಲಬುರಗಿ ವಿಭಾಗ, ಕಲಬುರಗಿ ಹಾಗೂ ನಿಗಮದ ಕೇಂದ್ರ ಕಛೇರಿಯನ್ನು
ಸಂಪರ್ಕಿಸಬಹುದಾಗಿದೆ.
ಸೆ.೨೩ ರಂದು ಜಿಲ್ಲಾ ಪಂಚಾಯತ್ ಕೆಡಿಪಿ ಸಭೆ.
ಕೊಪ್ಪಳ,
ಸೆ.೧೯ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಸಿಕ ಕೆ.ಡಿ.ಪಿ ಹಾಗೂ
ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಸೆ.೨೩ ರಂದು ಬೆಳಿಗ್ಗೆ ೧೧.೩೦
ಗಂಟೆಗೆ ಜಿಲ್ಲಾ ಪಂಚಾಯತ್‌ನ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆಯಲಿದೆ.
    
ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ
ಇಲಾಖೆಗಳ ಅಧಿಕಾರಿಗಳು ೨೦೧೫ ರ ಆಗಸ್ಟ್ ಅಂತ್ಯಕ್ಕೆ ತಮ್ಮ ಇಲಾಖೆ ಸಾಧಿಸಿದ ಪ್ರಗತಿ
ಮಾಹಿತಿಯೊಂದಿಗೆ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ. 

ಸಾರಾಯಿ ನಿಷೇಧದಿಂದಾದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅರ್ಜಿ ಆಹ್ವಾನ.
ಕೊಪ್ಪಳ,
ಸೆ.೧೯ (ಕ ವಾ) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ನಿಯಮಿತ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿಗೆ ಸಾರಾಯಿ ಮಾರಾಟ ನಿಷೇದದಿಂದ
ನಿರುದ್ಯೋಗಿಗಳಾಗಿರುವ ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮತ್ತು
ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಅರ್ಜಿ
ಸಲ್ಲಿಸಲಿಚ್ಛಿಸುವವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು (ವಿಶ್ವಕರ್ಮ
ಸಮುದಾಯಗಳು ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ).  ಕುಟುಂಬದ ವಾರ್ಷಿಕ ಆದಾಯ ಮೀತಿ
ಗ್ರಾಮೀಣ ಪ್ರದೇಶದವರಿಗೆ ೪೦,೦೦೦ ರೂ. ಮತ್ತು ನಗರ ಪ್ರದೇಶದವರಿಗೆ ೫೦,೦೦೦
ರೂ.ಮೀರಿರಬಾರದು. ಅಲ್ಲದೆ, ಅರ್ಜಿದಾರರು ೧೮ ರಿಂದ ೫೫ ವರ್ಷದೊಳಗಿನ
ವಯೋಮಿತಿಯಲ್ಲಿರಬೇಕು. ಸಾರಾಯಿ ಮಾರಾಟ ನಿಷೇದದಿಂದ ನಿರುದ್ಯೋಗಿಗಳಾದ ಬಗ್ಗೆ ಅಬಕಾರಿ
ಇಲಾಖೆಯಿಂದ ನೌಕರನಾಮ ಅಥವಾ ದೃಢೀಕರಣ ಪತ್ರ ನೀಡಬೇಕು.
     ಅರ್ಜಿದಾರರು
ಕೈಗೊಳ್ಳುವ ಆರ್ಥಿಕ ಚಟುವಟಿಕೆಗೆ ಅನುಗುಣವಾಗಿ ಗರಿಷ್ಠ ರೂ.೧ ಲಕ್ಷಗಳ ಸಾಲ
ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ ಶೇಕಡಾ ೩೦ ರಷ್ಟು ಅಂದರೆ ಗರಿಷ್ಠ
ರೂ.೧೦,೦೦೦ ಗಳ ಸಹಾಯಧನ, ಉಳಿದ ರೂ.೯೦,೦೦೦ ಗಳನ್ನು ಶೇಕಡಾ ೪ ರ ಬಡ್ಡಿ ದರದಲ್ಲಿ ಸಾಲ
ಮಂಜೂರು ಮಾಡಲಾಗುವುದು. ಈ ಸಾಲವನ್ನು ವಾರ್ಷಿಕ ಶೇಕಡಾ ೪ ರ ಬಡ್ಡಿ ದರದಲ್ಲಿ ೩೬ ಮಾಸಿಕ
ಕಂತುಗಳಲ್ಲಿ ಮರುಪಾವತಿಸಬೇಕು. ಇದರಲ್ಲಿ ೨ ಕಂತುಗಳ ವಿರಾಮಾವಧಿ ಇರುತ್ತದೆ. ಸಾಲದ
ಭದ್ರತೆಗೆ ಒದಗಿಸುವ ರೂ. ೫೦,೦೦೦ ಗಳಿಗಿಂತ ಹೆಚ್ಚಿನ ಮೊತ್ತದ ಸ್ಥಿರಾಸ್ತಿಯ ಮೇಲೆ, ಸಾಲ
ತೀರುವಳಿಯಾಗುವವರೆಗೂ ನಿಗಮದ ಹಕ್ಕು ದಾಖಲಿಸಬೇಕು.
     ಆಸಕ್ತರು ನಿಗಮದ ಜಿಲ್ಲಾ
ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ನಿಯಮಿತ, ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ
ಯೋಜನೆಯ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ, ಅಕ್ಟೋಬರ್.೦೯ ರೊಳಗಾಗಿ
ಅಗತ್ಯ ದಾಖಲೆಗಳೊಂದಿಗೆ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ವ್ಯವಸ್ಥಾಪಕರ ಕಛೇರಿ, ೦೮೫೩೯-೨೨೧೮೪೫, ಸಹಾಯಕ ಪ್ರಧಾನ ವ್ಯವಸ್ಥಾಪಕರ ಕಛೇರಿ,
ಕಲಬುರಗಿ ವಿಭಾಗ, ಕಲಬುರಗಿ ಹಾಗೂ ನಿಗಮದ ಕೇಂದ್ರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಕುರಿ, ಮೇಕೆ ಸಾಕಾಣಿಕಾ ಘಟಕ ಸ್ಥಾಪಿಸಲು ಸಹಾಯಧನ ಅರ್ಜಿ ಆಹ್ವಾನ.
ಕೊಪ್ಪಳ,
ಸೆ.೧೯ (ಕ ವಾ)  ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ನಿಯಮಿತ, ಕೊಪ್ಪಳ ಇವರಿಂದ ಪ್ರಸಕ್ತ ಸಾಲಿಗೆ ಕುರಿ, ಮೇಕೆ ಸಾಕಾಣಿಕೆಯನ್ನು ಮುಖ್ಯ
ಕಸುಬನ್ನಾಗಿಸಿಕೊಂಡಿರುವ ಹಿಂದುಳಿದ ವರ್ಗಗಳ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಲು
ಕುರಿ, ಮೇಕೆ ಸಾಕಾಣಿಕೆಗೆ (೨೩ ಕುರಿ+೨ ಟಗರು) ಘಟಕ ವೆಚ್ಚ ೧.೦೦ ಲಕ್ಷ ರೂ.ಗಳ ಸಾಲ
ಮತ್ತು ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
     ಅರ್ಜಿ
ಸಲ್ಲಿಸಲಿಚ್ಛಿಸುವವರು ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ-೧, ೨ಎ, ೩ಎ, ಮತ್ತು ೩ಬಿ
ಗೆ (ವಿಶ್ವಕರ್ಮ ಸಮುದಾಯಗಳು ಹಾಗೂ ಅಲ್ಪಸಂಖ್ಯಾತರನ್ನು ಹೊರತುಪಡಿಸಿ)
ಸೇರಿದವರಾಗಿರಬೇಕು. ಕುರಿ, ಮೇಕೆ ಸಾಕುವುದನ್ನು ಮುಖ್ಯ ಕಸುಬಾಗಿ
ನಿರ್ವಹಿಸುತ್ತಿರಬೇಕು. ಕುಟುಂಬದ ವಾರ್ಷಿಕ ಆದಾಯ ಮೀತಿ ಗ್ರಾಮೀಣ ಪ್ರದೇಶದವರಿಗೆ
೪೦,೦೦೦ ರೂ. ಮತ್ತು ನಗರ ಪ್ರದೇಶದವರಿಗೆ ೫೦,೦೦೦ ರೂ. ಮೀರಿರಬಾರದು. ಅಲ್ಲದೆ,
ಅರ್ಜಿದಾರರು ೧೮ ರಿಂದ ೫೫ ವರ್ಷದೊಳಗಿನ ವಯೋಮಿತಿಯಲ್ಲಿರಬೇಕು. ೨೩ ಕುರಿ+೨ ಟಗರು ಕೊಂಡು
ಸಾಕಲು ಗರಿಷ್ಠ ರೂ.೧.೦೦ ಲಕ್ಷಗಳ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ
ಶೇಕಡಾ ೩೦ ರಷ್ಟು ಅಂದರೆ ಗರಿಷ್ಠ ರೂ.೧೦,೦೦೦ ಗಳ ಸಹಾಯಧನ, ಉಳಿದ ರೂ.೯೦,೦೦೦ ಗಳನ್ನು
ವಾರ್ಷಿಕ ಶೇಕಡಾ ೪ ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ
ಪಡೆದ ಸಾಲವನ್ನು ವಾರ್ಷಿಕ ಶೇಕಡಾ ೪ ರ ಬಡ್ಡಿ ದರದಲ್ಲಿ ೩ ವರ್ಷಗಳ ೧೨ ತ್ರೈಮಾಸಿಕ
ಕಂತುಗಳಲ್ಲಿ ಮರುಪಾವತಿಸಬೇಕು. ಸಾಲದ ಭದ್ರತೆಗೆ ಒದಗಿಸುವ ಸ್ಥಿರಾಸ್ತಿಯ ಮೇಲೆ, ಸಾಲ
ತೀರುವಳಿಯಾಗುವವರೆಗೂ ನಿಗಮದ ಹಕ್ಕು ದಾಖಲಿಸಬೇಕು.
     ಆಸಕ್ತರು ನಿಗಮದ ಜಿಲ್ಲಾ
ವ್ಯವಸ್ಥಾಪಕರ ಕಛೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,
ಜಿಲ್ಲಾಡಳಿತ ಭವನ, ಕೊಪ್ಪಳ ಕಛೇರಿಯಲ್ಲಿ ಚೈತನ್ಯ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ
ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು, ಭರ್ತಿ ಮಾಡಿ, ಅಕ್ಟೋಬರ್.೦೯ ರೊಳಗಾಗಿ ಅಗತ್ಯ
ದಾಖಲೆಗಳೊಂದಿಗೆ ಮರಳಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ
ವ್ಯವಸ್ಥಾಪಕರ ಕಛೇರಿ, ಸಹಾಯಕ ಪ್ರಧಾನ ವ್ಯವಸ್ಥಾಪಕರ ಕಛೇರಿ, ಕಲಬುರಗಿ ವಿಭಾಗ,
ಕಲಬುರಗಿ ಹಾಗೂ ನಿಗಮದ ಕೇಂದ್ರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

Please follow and like us:
error