ಜಾಗೃತಿಯಿಂದ ಮಹಿಳೆಯರ ದೌರ್ಜನ್ಯೆವನ್ನು ತಡೆಯಲು ಸಾಧ್ಯ:ಶಾಂತಶ್ರೀ

 ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯೆವನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಶಾಂತಶ್ರೀ ಹೇಳಿದರು.
  ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘ ಮತ್ತು ಶಾಲಾ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ,ಇಂದಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಮಹಿಳೆಯರ ಮೇಲೆ ಅನೇಕ ರೀತಿಯಲ್ಲಿ ದೌರ್ಜನ್ಯೆದಂತ ಪ್ರಕರಣಗಳು ಜರುಗುತ್ತಿದ್ದು,ಇಂತಹ ಪ್ರಕರಣಗಳು ಕಡಿಮೆಯಾಗಬೇಕಾದರೆ ಪ್ರತಿಯೊಬ್ಬ ನಾಗರಿಕರಲ್ಲಿ ಈ ವಿಚಾರದ ಕುರಿತಾದ ಜಾಗೃತಿಯನ್ನು ಮೂಡಿಸುವುದರಿಂದ ಜೊತೆಗೆ ಮಹಿಳಾ ದೌರ್ಜನ್ಯೆ ಕಾಯ್ದೆಯ ಸಮರ್ಪಕವಾದ ಅನುಷ್ಠಾನದಿಂದ ದೌರ್ಜನ್ಯೆವನ್ನು ತಡೆಯಲು ಸಾಧ್ಯವಾಗುತ್ತದೆ.ಇಂದಿನ ದಿನ ಬಹಳ ಸ್ಪರ್ಧಾತ್ಮಕವಾದ ಯುಗವಾಗಿದೆ.ಸ್ಪರ್ಧಾತ್ಮಕವಾದ ಯುಗಕ್ಕೆ ತಕ್ಕಂತೆ ನಾವೂ ಕೂಡಾ ವಿಭಿನ್ನವಾದ,ವಿಶೇಷವಾದ ತಂತ್ರಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಸ್ಪರ್ಧೆಯನ್ನು ಎದುರಿಸುವ ಶಕ್ತಿ ಬೆಳೆಯುತ್ತದೆ.ವಿದ್ಯಾರ್ಥಿಯ ಜೀವನಲ್ಲಿ ಗುರಿಯನ್ನು ಉನ್ನತ ಮಟ್ಟದಲ್ಲಿರಬೇಕು ಆ ಗುರಿಯನ್ನು ತಲುಪಲು ಕಠಿಣವಾದ ಪರಿಶ್ರಮ ಪಟ್ಟಾಗ ಮಾತ್ರ ಗುರಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.ಪ್ರಾಚೀನ ಕಾಲದಲ್ಲಿ ವಿವಿಧ ವಿಷಯಗಳ ಕುರಿತಾದ ವ್ಯಾಪಕವಾದ ಪ್ರಚಾರದ ಕೊರತೆಯಿತು.ಆದರೆ ಇಂದಿನ ದಿನಗಳಲ್ಲಿ ಕ್ಷೇಣ ಮಾತ್ರದಲ್ಲಿ ಪ್ರಪಂಚದಲ್ಲಿ ಆಗು-ಹೊಗುಗಳ ಕುರಿತಾದ ಮಾಹಿತಿ ಪಡೆಯಬಹುದಾಗಿದೆ.ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಕೂಡಾ ಪಡೆದುಕೊಳ್ಳಬೇಕು ಎಂದು ಹೇಳಿದರು.
  ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಪ್ರಾಚೀನ ಕಾಲದ ಮಹಿಳೆಯ ಸ್ಥಿತಿಗೂ ಹಾಗೂ ಆಧುನಿಕ ಕಾಲದಲ್ಲಿನ ಮಹಿಳೆಯರ ಸ್ಥಿತಿಗೂ ಬಹಳ ವ್ಯತ್ಯಾಸವಿದೆ.ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆ ಪ್ರತಿಯೊಬ್ಬ ಮಹಿಳೆಯ ಶಕ್ತಿ ಅಡಗಿದೆ.ಸರ್ಕಾರವು ಕೂಡಾ ಇಂದು ಪುರುಷರಿಗೆ ಸರಿಸಮಾ ರೀತಿಯಲ್ಲಿ ಪರಿಗಣಿಸಿ ಪ್ರತಿಯೊಂದು ಕ್ಷೇತ್ರದಲ್ಲಿ ಮಿಸಲಾತಿ ಕಲ್ಪಸಿಕೊಡಲಾಗಿದೆ ಎಂದು ಹೇಳಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಮನಿ ಮಾತನಾಡುತ್ತ,ಮಹಿಳೆಯರಲ್ಲಿ ತಾಳ್ಮೇಯ ಶಕ್ತಿಯು ಹೆಚ್ಚಿರುವುದರಿಂದ ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಮಹಿಳೆರನ್ನೆ ಸರ್ಕಾರ ನೇಮಕಮಾಡಿದೆ.ಪ್ರತಿಯೊಂದು ಕ್ಷೇತ್ರದಲ್ಲಿ ಅನೇಕ ಮಹಿಳೆರು ಸಾಧನೆಯನ್ನು ಮಾಡಿದ್ದಾರೆ.ಶಿಕ್ಷಣ ಇಲಾಖೆಯು ವಿಶೇಷವಾಗಿ ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಗಾಗಿ ಪ್ರೌಢ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರಿಗೆ ಕರಾಟೆಯ ತರಬೇತಿಯನ್ನು ನೀಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯೆರಾದ ಭಾರತಿ ಕೊಡ್ಲಿ,ಸರ್ಕಾರಿ ಅಂಗವಿಕಲ ನೌಕರರ ಸಂಘದ ಕೊಪ್ಪಳ ತಾಲೂಕ ಅಧ್ಯಕ್ಷರಾದ ಶಂಕ್ರಮ್ಮ ಬಂಗಾರಶೆಟ್ಟರ್,ಶಿಕ್ಷಕರಾದ ಶ್ರೀನಿವಾಸರಾವ್ ಕುಲಕರ್ಣಿ, ಸಾವಿತ್ರಿದಾಸ್,ಅಂಬಕ್ಕ,ಗೌಸೀಯಾಬೇಗಂ,ವಿಜಯಲಕ್ಷ್ಮೀ, ಮೋಹಿನ್‌ಪಾಷಾಬಿ,ರತ್ನಾ,ಗಂಗಮ್ಮ,ವಿಜಯಾ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ಗುರರಾಜ ಕಟ್ಟಿ ನಿರೂಪಿಸಿದರು.ಶಿಕ್ಷಕರಾದ ನಾಗಪ್ಪ ನರಿ ಸ್ವಾಗತಿಸಿ.ವಿರುಪಾಕ್ಷಪ್ಪ ಬಾಗೋಡಿ ಎಲ್ಲಿರಿಗೂ ವಂದಿಸಿದರು.
Please follow and like us:
error