fbpx

ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯುವುದಿಲ್ಲ-ರಾಘವೇಂದ್ರ ಹಿಟ್ನಾಳ

 ನಗರದ ಗೌರಿ ಅಂಗಳ ಓಣಿಯಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಹಾಗೂ ಅಶೋಕರ ವೃತ್ತದ ವರೆಗೆ ಕೊಪ್ಪಳ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಮಾಡಿ ಮಾತನಾಡಿದ ಕೊಪ್ಪಳ ಜನಪ್ರಿಯ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ರಾಜ್ಯ ದ ಬಿ.ಜೆ.ಪಿ ನಾಯಕರು ಮೋದಿ ಭ್ರಮೆಯಲ್ಲಿ ಮುಳುಗಿ ತಮ್ಮ ಪಕ್ಷದ ಇಲ್ಲವೇ ತಮ್ಮ ಸ್ವತಹ ವರ್ಚಸ್ಸಿನ ಮೇಲಾಗಲಿ ಅಥವಾ ತಮ್ಮ ಅಭಿವೃದ್ಧಿ ಪರ ಕಾರ್ಯಗಳ ಬಗ್ಗೆಯಾಗಲಿ ಮತಯಾಚನೆ ಮಾಡಲು ಹಿಂದೇಟಯ ಹಾಕುತ್ತಿದ್ದು ಕೇವಲ ಮೋದಿ ಬಿಂಬಿಸುತ್ತಿರುವುದು ಇವರ ಶೂನ್ಯ ಸಾಧನೆಯಾಗಿದೆ. ಕಾಂಗ್ರೆಸ್ ಪಕ್ಷವು ಬಡವರ ದೀನದಲಿತರ, ರೈತರ, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಣೆಯ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯ, ದೇಶದ ಅಭಿವೃದ್ಧಿಯ ವಿಷಯಗಳ ಮೇಲೆ ಚರ್ಚೆ ಮಾಡುವ ಪಕ್ಷವಾಗಿದೆ ಆದರೆ ಬಿ.ಜೆ.ಪಿ ನಾಯಕರು ಯಾವುದೇ ಸಾಧನೆಗಳನ್ನು ಮಾಡದೇ ಕೇವಲ ಚಹಾದ ಮೇಲೆ ಚರ್ಚೆ ಮಾಡಲು ಹೊರಟಿರುವುದು ಬಿ.ಜೆ.ಪಿಯ ಅಸಹಾಯಕತೆಯ ನಿರ್ದೇಶನವಾಗಿದೆ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈ ೧೦ ತಿಂಗಳು ಮಾಡಿದ ಸಾಧನೆಗಳ ಮೇಲೆ ನಾವು ಪ್ರಭುದ್ದ ಮತದಾರರಲ್ಲಿ ಮತಯಾಚನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮತ್ತೇ ಕಾಂಗ್ರೆಸ ಪಕ್ಷವು ಭರ್ಜರಿ ಜಯ ಭಾರಿಸಲು ಸನ್ನಧ್ದರಾಗಿದ್ದೇವೆ, ರಾಜ್ಯದ ಜನಪ್ರಿಯ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪುತ್ತಿದ್ದು ರಾಜ್ಯದ ಜನತೆ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ ಭಾರಿ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಹೇಳಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅಂದಣ್ಣ ಅಗಡಿ, ಎಸ್.ಬಿ ನಾಗರಳ್ಳಿ, ಶಾಂತಣ್ಣ ಮುದಗಲ್, ಜುಲ್ಲು ಖಾದ್ರಿ, ಮರ್ದಾನಲಿ ಅಡ್ಡೇವಾಲೆ, ಅಮಜದ್ ಪಟೇಲ, ಬಾಷುಸಾಬ ಖತೀಬ, ಜುಬೇರ ಹುಸೇನ, ಮುತ್ತುರಾಜ ಕುಷ್ಟಗಿ, ಕಾಟನ್ ಪಾಷಾ, ಅಶ್ವಿನ್ ಜಾಂಗಡಾ, ಮೌಲಾ ಹುಸೇನ ಜಮಾದಾರ, ಬಾಳಪ್ಪ ಬಾರಕೇರ, ರಾಮಣ್ಣ ಹದ್ದಿನ್, ವಾಹೀದ ಸೋಂಪೂರು, ಶರಣಪ್ಪ ಚಂದನಕಟ್ಟಿ, ಹಳ್ಳಿಗುಡಿ ರಾಮಣ್ಣ, ವಿಜಯ ಕವಲೂರು, ರಾಮಣ್ಣ ಕಲ್ಲಣ್ಣನವರ್, ಶಿವಕುಮಾರ ಶೆಟ್ಟರ್, ಅಜ್ಜಪ್ಪ ಸ್ವಾಮಿ, ಶರಣಪ್ಪ ನಿಟ್ಟಾಲಿ, ಕೊಟ್ರಪ್ಪ ಕೋರಿ, ನಿಸಾರ ಕೋಲ್ಕಾರ, ಸಾಬೇರ ಹುಸೇನ, ಮಂಜುನಾಥ ಗಾಳಿ, ಮಾನ್ವಿ ಪಾಷಾ, ಮೆಹೆಬೂಬ ಅರಗಂಜಿ, ಶಕುಂತಲಮ್ಮ ಹುಡೇಜಾಲಿ, ನೂರಜಹಾಂ ಬೇಗಂ, ಪರವೀನ್ ಬೇಗಂ, ಚನ್ನಮ್ಮ, ಖಾದ್ರಿ, ಧಾರವಾಡ ರಫೀ, ಯಮನೂರಪ್ಪ ನಾಯಕ, ಅಖ್ತರ ಫಾರೂಖ್, ಆರೂನ್‌ಖಾನ್, ನಜೀರ ಆಧೋನಿ, ವಿಷ್ಣು ಗುಬ್ಬಿ, ಮಖಬೂಲ್ ಮನಿಯಾರ, ಇಬ್ರಾಂ ಅಡ್ಡೇವಾಲೆ, ಸಾದೀಕ್ ಅತ್ತಾರ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ರ‍ರು ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
Please follow and like us:
error

Leave a Reply

error: Content is protected !!