fbpx

ಶಿಕ್ಷಣದ ಜೊತೆಗೆ ಸ್ವಚ್ಛತೆಯ ಅರಿವು ಮೂಡಿಸುವುದು ಅವಶ್ಯಕ – ಅಮರೇಶ ಕುಳಗಿ.

ಕೊಪ್ಪಳ, ಸೆ.೨೨ (ಕ ವಾ) ಸಾಕ್ಷರ ಭಾರತ ಯೋಜನೆಯಡಿ ಪ್ರೇರಕರು, ಮುಖ್ಯಗುರುಗಳು ಮತ್ತು ಗ್ರಾಮ ಪಂಚಾಯತ್ ಅಧಿಕಾರಿಗಳು ಅನಕ್ಷರಸ್ಥರಿಗೆ ಶಿಕ್ಷಣದ ಜೊತೆ ಜೊತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಹೇಳಿದರು.
      ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸಾಕ್ಷರತಾ ಭಾರತ ಯೋಜನೆಯಡಿ ಸಾಕ್ಷರ ಭಾರತ ಕಾರ್ಯಕ್ರಮದ ಅಂಗವಾಗಿ ಪ್ರೇರಕರು, ಮುಖ್ಯಗುರುಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
     ಅನಕ್ಷರತೆ ಇರುವೆಡೆಯಲ್ಲಿ ಕ
       ಸಾಕ್ಷರ ಭಾರತ ಯೋಜನೆ, ಬೆಂಗಳೂರಿನ ರಾಮಚಂದ್ರ ಬಡಿಗೇರ ಮಾತನಾಡಿ, ಅನಕ್ಷರತೆ ದೇಶಕ್ಕಂಟಿದ ಶಾಪವಾಗಿದ್ದು, ಇದರಿಂದ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಮಹಾತ್ಮಾ ಗಾಂಧೀಜಿ ಕೂಡಾ ಹೇಳಿದ್ದರು. ಈ ನಿಟ್ಟಿನಲ್ಲಿ ಸರ್ಕಾರವು ಹಲವಾರು ಸಾಕ್ಷರತಾ ಯೋಜನೆಗಳನ್ನು ಹಮ್ಮಿಕೊಂಡು, ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವತ್ತ ಹೊರಟಿದೆ.  ಸಾಕ್ಷರ ಭಾರತ ಕಾರ್ಯಕ್ರಮ ಇಂದು ಕೇವಲ ಕಾರ್ಯಕ್ರಮವಾಗಿರದೇ, ಜನಾಂದೋಲನವಾಗಿ ಮಾರ್ಪಟ್ಟಿದೆ. ಅಲ್ಲದೆ, ಅರಿವಿನೊಂದಿಗೆ ಅಕ್ಷರದ ಮೂಲಕ ಕ್ರಿಯಾತ್ಮಕ ಸಾಕ್ಷರತೆಯನ್ನು ಸಾಧ್ಯವಾಗಿಸಿದೆ. ಅನಕ್ಷರತೆ ಹೆಚ್ಚಾಗಿರುವ ದೇಶದ ೨೬ ರಾಜ್ಯಗಳ ೩೬೫ ಜಿಲ್ಲೆಗಳಲ್ಲಿ ಸಾಕ್ಷರ ಭಾರತ ಯೋಜನೆ ಇಂದು ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳಾ ಸಾಕ್ಷರರನ್ನು ಹೆಚ್ಚುಗೊಳಿಸುವುದು ಸಾಕ್ಷರ ಭಾರತ ಯೋಜನೆಯ ಗುರಿಯಾಗಿದೆ. ೧೯೭೧ ರಲ್ಲಿ ಕೇವಲ ಶೇ. ೩೮ ರಷ್ಟಿದ್ದ ದೇಶದ ಸಾಕ್ಷರತೆ ಪ್ರಮಾಣ ಇಂದು ಶೇ. ೬೮ ರಷ್ಟಾಗಿರುವುದು ಸಾಕ್ಷರತೆಯಲ್ಲಿನ ಪ್ರಗತಿಗೆ ಸಾಕ್ಷಿಯಾಗಿದೆ. ಕೊಪ್ಪಳ ತಾಲೂಕು ಶೇ. ೫೮.೫೩ ರಷ್ಟು ಸಾಕ್ಷರತೆ ಹೊಂದಿದ್ದು, ಗಂಗಾವತಿ -೫೩.೫೩, ಕುಷ್ಟಗಿ-೫೧.೬೨ ಹಾಗೂ ಯಲಬುರ್ಗಾ ತಾಲೂಕು ಶೇ. ೫೫.೬೩ ರಷ್ಟು ಸಾಕ್ಷರತೆ ಪ್ರಮಾಣವನ್ನು ಹೊಂದಿವೆ ಎಂದು ಮಾಹಿತಿ ನೀಡಿದ ಅವರು, ನವಸಾಕ್ಷರರನ್ನು ಸಮಾಜಕ್ಕೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಲೋಕ ಶಿಕ್ಷಣ ಕೇಂದ್ರಗಳ ಪ್ರೇರಕರು, ಮುಖ್ಯ ಗುರುಗಳು, ಪಂಚಾಯತ್ ಅಧಿಕಾರಿಗಳು ಸಾಮರಸ್ಯ, ಸಹಕಾರ, ಹೃದಯವಂತಿಕೆಯನ್ನು ಮೈಗೂಡಿಸಿಕೊಂಡು ಕಲಿಕಾ ವಾತಾವರಣ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
     ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್.ಕೆ. ತೊರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಭೀಮಯ್ಯ ದಾಸರ, ಸೋಮಶೇಖರ ತುಪ್ಪದ್ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್‌ಗಳ ಅಧಿಕಾರಿಗಳು, ಮುಖ್ಯಗುರುಗಳು, ಪ್ರೇರಕರು, ನವಸಾಕ್ಷರರು ಉಪಸ್ಥಿತರಿದ್ದರು.

ಲಿಕಾ ವಾತಾವರಣ ನಿರ್ಮಾಣ ಮಾಡಲು ಸ್ವಚ್ಛತೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರೇರಕರು, ಮುಖ್ಯಗುರುಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಮೊದಲು ಅನಕ್ಷರಸ್ಥರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವಂತಾಗಬೇಕು. ಸ್ವಚ್ಛತೆ ಕೂಡಾ ಸಾಕ್ಷರತೆಯ ಒಂದು ಭಾಗವೇ ಆಗಿರುವುದರಿಂದ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಕಲಿಕೆಯನ್ನು ಸುಲಭಗೊಳಿಸುತ್ತದೆ. ಸಾಕ್ಷರ ಭಾರತ ಯೋಜನೆಯಡಿ ಪ್ರತಿಯೊಬ್ಬ ಅನಕ್ಷರಸ್ಥನನ್ನು ಸಾಕ್ಷರರನ್ನಾಗಿಸಲು ಸರ್ಕಾರವು ಮಾಸಿಕ ೬೦೦ ರೂ.ಗಳನ್ನು ವ್ಯಯಿಸುತ್ತಿದೆ. ಸಾಕ್ಷರತಾ ಯೋಜನೆಯಡಿ ಜಿಲ್ಲೆಯಲ್ಲಿ ೭೭,೦೦೦ ಜನರನ್ನು ಸಾಕ್ಷರರನ್ನಾಗಿಸುವ ಗುರಿ ಹೊಂದಲಾಗಿತ್ತು. ಇದರಲ್ಲಿ ೭೩,೦೦೦ ಜನರನ್ನು ಅಕ್ಷರಸ್ಥರನ್ನಾಗಿಸಿ ಪ್ರಗತಿ ಸಾಧಿಸಲಾಗಿದೆ. ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ೧,೫೩,೫೯೮ ಗಂಡು, ೨,೧೩,೨೦೯ ಹೆಣ್ಣು ಸೇರಿದಂತೆ ಒಟ್ಟಾರೆ ೩,೬೬,೮೦೭ ಜನ ಅನಕ್ಷರಸ್ಥರಿದ್ದು, ಇವರನ್ನು ಸಾಕ್ಷರರನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.

Please follow and like us:
error

Leave a Reply

ಖಾಲಿ ಉಳಿದಿರುವ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ : ವೇಳಾಪಟ್ಟಿ ಪ್ರಕಟ


ಕೊಪ್ಪಳ,
ಜು.೧೫ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ಗ್ರಾಮ ಪಂಚಾಯತಿ
ಸಾರ್ವತ್ರಿಕ ಚುನಾವಣೆಗಳು ಮುಗಿದ ನಂತರ, ಆಯ್ಕೆಯಾಗದೇ ಖಾಲಿ ಉಳಿದಿರುವ ಗ್ರಾಮ ಪಂಚಾಯತಿ
ಸದಸ್ಯ ಸ್ಥಾನಗಳನ್ನು ತುಂಬಲು ಇದೀಗ ಚುನಾವಣಾ ವೇಳಾಪಟ್ಟಿಯೊಂದಿಗೆ ಅಧಿಸೂಚನೆ
ಹೊರಡಿಸಲಾಗಿದೆ.
     ಜಿಲ್ಲೆಯಲ್ಲಿ ಖಾಲಿ ಉಳಿದಿರುವ ಗ್ರಾಮ ಪಂಚಾಯತಿ ಸದಸ್ಯ
ಸ್ಥಾನಗಳನ್ನು ತುಂಬಲು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ) ನಿಯಮಗಳು, ೧೯೯೩ ರ ೧೨ನೇ
ನಿಯಮಕ್ಕನುಸಾರವಾಗಿ ಜಿಲ್ಲಾಧಿಕಾರಿ ಆರ್.ಆರ್.ಜನ್ನು ಅವರು ಜು.೧೫ ರಂದು ಚುನಾವಣಾ
ವೇಳಾಪಟ್ಟಿಯನ್ನು ನಿಗದಿಗೊಳಿಸಿ, ಅಧಿಸೂಚನೆ ಹೊರಡಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ
ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಜು.೨೨ ನಾಮಪತ್ರಗಳನ್ನು ಸಲ್ಲಿಸಲು ಕೊನೆ
ದಿನಾಂಕವಾಗಿದೆ. ಜು.೨೩ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ
ಹಿಂತೆಗೆದುಕೊಳ್ಳಲು ಜು.೨೫ ಕೊನೆ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದಲ್ಲಿ ಆಗಸ್ಟ್ ೦೨
ರಂದು ಮತದಾನ ನಡೆಯಲಿದ್ದು, ಒಟ್ಟಾರೆಯಾಗಿ ಆಗಸ್ಟ್ ೦೫ ರೊಳಗಾಗಿ ಈ ಚುನಾವಣೆ
ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.
     ವೇಳಾಪಟ್ಟಿಯನ್ವಯ ಗ್ರಾಮ ಪಂಚಾಯತಿ
ಸಾರ್ವತ್ರಿಕ ಚುನಾವಣೆಗಳು ಮುಗಿದ ನಂತರ ಆಯ್ಕೆಯಾಗದೇ ಖಾಲಿ ಉಳಿದಿರುವ ಹಾಗೂ ಸದ್ಯ
ಚುನಾವಣೆ ಪ್ರಕ್ರಿಯೆ ನಡೆಯಲಿರುವ ಗ್ರಾ.ಪಂ. ಕ್ಷೇತ್ರಗಳ ವಿವರ ಇಂತಿದೆ.
    
ಕೊಪ್ಪಳ ತಾಲೂಕಿನ ತಾವರಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಕನಪಳ್ಳಿ-೧ ಕ್ಷೇತ್ರದಲ್ಲಿ
೦೪ ಸ್ಥಾನಗಳಿದ್ದು ಪ.ಜಾತಿ(ಮಹಿಳೆ), ಪ.ಪಂಗಡ(ಮಹಿಳೆ), ಸಾಮಾನ್ಯ(ಮಹಿಳೆ) ಹಾಗೂ
ಸಾಮಾನ್ಯ ವರ್ಗಕ್ಕೆ ಮೀಸಲಿವೆ. ಕೂಕನಪಳ್ಳಿ-೨ ರಲ್ಲಿ ೦೩ ಸ್ಥಾನಗಳಿದ್ದು ಪ.ಜಾತಿ,
ಹಿಂ.ವರ್ಗ-ಅ(ಮಹಿಳೆ) ಹಾಗೂ ಸಾಮಾನ್ಯ(ಮಹಿಳೆ) ವರ್ಗಕ್ಕೆ ಮೀಸಲಿರಿಸಲಾಗಿದೆ.  ಹಾಲವರ್ತಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲವರ್ತಿ-೨ ರಲ್ಲಿ ೦೧ ಸ್ಥಾನಕ್ಕೆ ಚುನಾವಣೆ
ನಡೆಯಲಿದ್ದು ಸಾಮಾನ್ಯ(ಮಹಿಳೆ)ಗೆ ಮೀಸಲಿದೆ.
      ಯಲಬುರ್ಗಾ ತಾಲೂಕಿನ
ಮಾಟಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡ್ಡೋಣಿ-೧ ರಲ್ಲಿ ೦೩ ಸ್ಥಾನಗಳಿಗೆ
ಚುನಾವಣೆ ನಡೆಯಲಿದ್ದು ಪ.ಜಾತಿ, ಸಾಮಾನ್ಯ, ಸಾಮಾನ್ಯ(ಮಹಿಳೆ) ವರ್ಗಕ್ಕೆ ಮೀಸಲಾತಿ ಇದೆ.
ಯಡ್ಡೋಣಿ-೨ ರಲ್ಲಿ ೦೨ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಪ.ಪಂಗಡ ಮತ್ತು
ಸಾಮಾನ್ಯ(ಮಹಿಳೆ)ಗೆ ಮೀಸಲಿದೆ.  ಬೋದುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಚಿಕ್ಕಮನ್ನಾಪುರದಲ್ಲಿ ೦೩ ಸ್ಥಾನಗಳಿದ್ದು ಪ.ಪಂಗಡ, ಸಾಮಾನ್ಯ(ಮಹಿಳೆ) ಮತ್ತು ಸಾಮಾನ್ಯ
ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗಿದೆ. ವನಜಭಾವಿ-೦೧ ಕ್ಷೇತ್ರ ಸಾಮಾನ್ಯ (ಮಹಿಳೆ)ಗೆ
ಮೀಸಲಿದೆ. ಚೌಡಾಪೂರ-೦೨ ಸ್ಥಾನಗಳಿದ್ದು ಹಿಂ.ವರ್ಗ-ಅ ಮತ್ತು ಸಾಮಾನ್ಯ(ಮಹಿಳೆ) ಗೆ
ಮೀಸಲಿದೆ.
     ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ವಾರಿಕಲ್‌ನ ೦೧ ಸ್ಥಾನ ಹಿಂ.ವರ್ಗ-ಅ(ಮಹಿಳೆ) ಮತ್ತು ಚಿಕ್ಕಗೊಣ್ಣಾಗರದ ೦೧ ಸ್ಥಾನ
ಸಾಮಾನ್ಯ ವರ್ಗಕ್ಕೆ ಮೀಸಲಾತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಸೂಚನೆಯಲ್ಲಿ
ತಿಳಿಸಿದ್ದಾರೆ.
ಮಳೆ ಅನಿಶ್ಚಿತತೆ : ಪರ್ಯಾಯ ಬೆಳೆ ಪದ್ದತಿ ಅಳವಡಿಸಲು ರೈತರಿಗೆ ಸಲಹೆ
ಕೊಪ್ಪಳ
ಜು. ೧೫ (ಕರ್ನಾಟಕ ವಾರ್ತೆ): ಮಳೆಯ ಅನಿಶ್ಚಿತತೆಯನ್ನು ರೈತರು ಸಮರ್ಥವಾಗಿ ಎದುರಿಸಲು
ಪರ್ಯಾಯ ಬೆಳೆ ಪದ್ಧತಿ ಅಳವಡಿಸುವುದು ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಕೊಪ್ಪಳದ ಕೃಷಿ
ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
     ಮಳೆ
ಅನಿಶ್ಚಿತತೆಯನ್ನು ಎದುರಿಸಲು ರೈತರು ೩ ವಿಧದ ಬೆಳೆ ಯೋಜನೆಗಳಿಗೆ ಮಹತ್ವ
ಕೊಡಬೇಕಾಗುತ್ತದೆ.  ೧) ಶಾಶ್ವತ ಬೆಳೆ ಯೋಜನೆ – ಅರಣ್ಯ, ತೋಟಗಾರಿಕೆ, ಮೇವಿನ ಹಾಗೂ
ವಾರ್ಷಿಕ ಬೆಳೆಗಳು. ೨) ವಾರ್ಷಿಕ ಬೆಳೆ ಯೋಜನೆ – ವಾರ್ಷಿಕ ಬೆಳೆಗಳು ಮಾತ್ರ ಹಾಗೂ ೩)
ಪರ್ಯಾಯ ಬೆಳೆ ಯೋಜನೆ – ಬದಲಿ ಬೆಳೆ ಪದ್ಧತಿ.
     ‘ಪರ್ಯಾಯ ಬೆಳೆ ಯೋಜನೆ’ ಎಂದರೆ
ಹವಾಮಾನ ವೈಪರೀತ್ಯಕ್ಕೆ ಅನುಗುಣವಾಗಿ ಮಣ್ಣಿನಲ್ಲಿ ಲಭ್ಯವಿರುವ ತೇವಾಂಶ ಹಾಗೂ
ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಮ ಆಯ್ಕೆಯ ಬೆಳೆ ಹಾಗೂ ನಾವು ಅನುಸರಿಸುವ
ಬೆಳೆ ಪದ್ಧತಿಗಳನ್ನು ಬದಲಾಯಿಸಿ ಕೈಗೊಳ್ಳಬಹುದಾದ ಯೋಜನೆಯಾಗಿದೆ.
ಪರ್ಯಾಯ ಬೆಳೆ
ಯೋಜನೆಯಲ್ಲಿ ಅನುಸರಿಸಬಹುದಾದ ಬೇಸಾಯ ಕ್ರಮಗಳು ಇಂತಿದೆ. ಕಡಿಮೆ ಅವಧಿಯ ಬೆಳೆಗಳ ಮತ್ತು
ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ (೬೦-೭೫ ದಿನಗಳ ಅವಧಿಯ ಬೆಳೆ/ತಳಿ). 
ಬಿತ್ತನೆ ಬೀಜಕ್ಕೆ ಬರ ನಿರೋಧಕ ಶಕ್ತಿ ಒದಗಿಸಲು ಶೇ. ೨ ರ ಕ್ಯಾಲ್ಸಿಯಂ ಕ್ಲೋರೈಡ್‌ನಿಂದ
ಬೀಜೋಪಚಾರ ಮಾಡುವುದು ಸೂಕ್ತ.  ಜೋಳ, ಸಜ್ಜೆ, ತೊಗರಿ, ಉದ್ದು, ಹೆಸರು ಮತ್ತು ಕಡಲೆ
ಬೆಳೆಗಳಲ್ಲಿ ಶೇ. ೨ ರ ಕ್ಯಾಲ್ಸಿಯಂ ಕ್ಲೋರೈಡ್ ಬಳಸಿ, ಬಿತ್ತನೆ ಬೀಜಗಳನ್ನು ೬ ರಿಂದ ೮
ಗಂಟೆಗಳ ಕಾಲ ಈ ದ್ರಾವಣದಲ್ಲಿ ನೆನೆಸಿ ಹಾಗೂ ಶೇಂಗಾ ಬೆಳೆಯಲ್ಲಿ ಶೇ. ೧ ರ ಕ್ಯಾಲ್ಸಿಯಂ
ಕ್ಲೋರೈಡ್ ಬಳಸಿ ಬಿತ್ತನೆ ಬೀಜಗಳನ್ನು ೧ ರಿಂದ ೨ ಗಂಟೆಗಳ ಕಾಲ ಈ ದ್ರಾವಣದಲ್ಲಿ ನೆನೆಸಿ
ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು.  ಮಳೆಯಾಧಾರಿಸಿ ಸಸಿಗಳ ಸಂಖ್ಯೆಯನ್ನು ಶೇ.
೩೩ ರಿಂದ ೫೦ ರಷ್ಟು ಕಡಿಮೆ ಮಾಡಬೇಕು. ಸಾಲಿನ ಅಂತರ ಹೆಚ್ಚಿಸಿ ಸಸಿಗಳ ಮಧ್ಯದ ಅಂತರ
ಕಡಿಮೆ ಮಾಡುವುದು ಸೂಕ್ತ.  ಮೆಕ್ಕೆಜೋಳ ಸಾಲುಗಳ ಅಂತರವನ್ನು ಹೆಚ್ಚಿಸಬೇಕು (೬೦-೯೦
ಸೆಂ.ಮೀ.). ಪ್ರತಿ ಎಕರೆಗೆ ೪ ಕೆ.ಜಿ ಸತುವಿನ ಸಲ್ಫೇಟನ್ನು ಕಾಂಪೋಸ್ಟನೊಂದಿಗೆ ಬೆರೆಸಿ
ಮಣ್ಣಿಗೆ ಸೇರಿಸಬೇಕು. ಸೋಯಾ ಅವರೆ, ತೊಗರಿ, ಅಲಸಂದೆ ಅಥವಾ ಸೆಣಬನ್ನು ಅಂತರ ಬೆಳೆಯಾಗಿ
ಬೆಳೆಯುವುದು ಉತ್ತಮ.  ತೊಗರಿಯನ್ನು ಸೋಯಾ ಅವರೆ, ಮೆಕ್ಕೆಜೋಳ ಮತ್ತು ಸಜ್ಜೆಯೊಂದಿಗೆ
ಅಂತರ ಬೆಳೆಯಾಗಿ ಬೆಳೆಯುವುದು ಮತ್ತು ಬಿತ್ತನೆ ಸಮಯದಲ್ಲಿ ಪ್ರತಿ ಎಕರೆಗೆ ೮ ಕೆ. ಜಿ
ಗಂಧಕ ಬಳಸಬೇಕು.  ಶೇಂಗಾವನ್ನು ಜುಲೈ ಎರಡನೇ ಪಾಕ್ಷಿಕದಲ್ಲಿ ಬಿತ್ತನೆ ಮಾಡುವುದುದಾದರೆ
ಗೆಜ್ಜೆ ಶೇಂಗಾದ ಬದಲಾಗಿ ಹಬ್ಬು ಶೇಂಗಾ ಬೆಳೆಯುವುದು. ಹಾಗೂ ಪ್ರತಿ ಎಕರೆಗೆ ೨೦೦ ಕೆ.
ಜಿ ಯಂತೆ ಜಿಪ್ಸಂನ ಬಳಕೆ. ಮೆಕ್ಕೆಜೋಳ ಮತ್ತು ಹತ್ತಿಯೊಂದಿಗೆ ಅಂತರ ಬೆಳೆಯಾಗಿ
ಬೆಳೆಯುವುದು ಸೂಕ್ತ.
      ಔಡಲ ಬಹು ಮುಖ್ಯ ಮತ್ತು ಅತ್ಯುತ್ತಮ ಪರ್ಯಾಯ ಬೆಳೆ
ಎಲ್ಲಾ ರೀತಿಯ ಕೃಷಿ ಪದ್ಧತಿಗಳಲ್ಲೂ ಅಳವಡಿಸಬಹುದು. ಹಿಂಗಾರಿನಲ್ಲಿ ಬೆಳೆಯುವುದರಿಂದ
ಕೀಟ ಬಾದೆಯಿಂದ ತಪ್ಪಿಸಿಕೊಳ್ಳಬಹುದು. ಹೆಚ್ಚು ಸಾಲಿನ ಅಂತರದಲ್ಲಿ ಬೆಳೆದು ಅಂತರ
ಬೇಸಾಯಕ್ಕೆ ಅನುಕೂಲ ಮಾಡಿಕೊಳ್ಳಬಹುದು. ತೊಗರಿಯೊಂದಿಗೆ ೧:೧ ಅನುಪಾತದಲ್ಲಿ ಅಂತರ
ಬೆಳೆಯಾಗಿ ಬೆಳೆಯುವುದು ಉತ್ತಮ. ತಡವಾದ ಮುಂಗಾರಿಗೆ ಹುರುಳಿ, ಸೆಣಬು ಮತ್ತು ಕಿರು
ಧಾನ್ಯಗಳನ್ನು ಬೆಳೆಯುವುದು. ಬರ ತಡೆಯುವ ತರಕಾರಿ ಬೆಳೆಗಳು ಚವಳಿಕಾಯಿ (ಪಿ.ಎನ್.ಬಿ.),
ಅವರೆ (ಹೆಬ್ಬಾಳ ಅವರೆ), ಟೊಮೆಟೊ (ಮೇಘ, ಆರ್ಕಾ ಮೇಘಲಿ), ಸವತೆ (ಬೆಳಗಾಂ ಲೋಕಲ್),
ಹೀರೇಕಾಯಿ (ಜೈಪುರ ಲಾಂಗ್ ಮತ್ತು ಮಾಲಾಪುರ ಲೋಕಲ್), ಸೋರೆಕಾಯಿ (ಆರ್ಕಾ ಬಾಹರ್),
ನುಗ್ಗೆಕಾಯಿ (ಧನರಾಜ್), ಪುಂಡಿ, ಈರುಳ್ಳಿ (ಬಳ್ಳಾರಿ ರೆಡ್) ಬೆಳೆಯಬಹುದು. 
    
ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದು ಮತ್ತು ಪೂರ್ತಿ
ಗೊಬ್ಬರವನ್ನು ಮೂಲ ಗೊಬ್ಬರವಾಗಿ ಕೊಡುವುದು ಒಳ್ಳೆಯದು.  ರಾಸಾಯನಿಕ ಗೊಬ್ಬರಗಳ ಬದಲಾಗಿ
ಲಭ್ಯವಿರುವೆಡೆ ಸ್ವತ: ತಯಾರಿಸಲ್ಪಟ್ಟ ಸಾವಯವ ಗೊಬ್ಬರಗಳ ಬಳಕೆಯಿಂದ ದೀರ್ಘಕಾಲದವರೆಗೆ
ತೇವಾಂಶ ಕಾಯ್ದುಕೊಳ್ಳಬಹುದು.  ತೇವಾಂಶ ಕಾಯ್ದುಕೊಳ್ಳಲು ಪದೇ ಪದೇ (ಕನಿಷ್ಟ ೧೫
ದಿನಗಳಿಗೊಮ್ಮೆ) ಎಡೆ ಕುಂಟೆ ಹೊಡೆಯುವುದು ಉತ್ತಮ.  ಸೂರ್ಯಕಾಂತಿ ಮತ್ತು ಶೇಂಗಾ (೧೨
ಇಂಚಿನ ಕೂರಿಗೆ ಬಳಕೆ ಮತ್ತು ಒಂದು ಹುಸಿ ಸಾಲು) ಬೆಳೆಗಳಲ್ಲಿ ಜೋಡು ಸಾಲು ಪದ್ಧತಿ
ಅನುಸರಿಸಬೇಕು.  ಬೆಳವಣಿಗೆ ತಡೆಯುವ, ಬಾಷ್ಪೀಭವನ ನಿಯಂತ್ರಿಸುವ ವಸ್ತುಗಳ ಬಳಕೆ.
ಬಿತ್ತನೆಯಾದ ೪೫ ದಿನಗಳ ನಂತರ ೧೫ ದಿನಗಳ ಅಂತರದಲ್ಲಿ ಶೇ. ೮ ರ ಕೆಯೋಲಿನ್‌ನನ್ನು
ಸಿಂಪಡಿಸಬಹುದು.  ಕಪ್ಪು ಮಣ್ಣು ಮತ್ತು ಆಳವಾದ ಕೆಂಪು ಮಣ್ಣಿನ ಜಮೀನುಗಳಲ್ಲಿ ದಪ್ಪ
ಮರಳಿನ ಅಥವಾ ಸಣ್ಣ ಕಲ್ಲುಗಳ ಹೊದಿಕೆ, ಚೌಕುಮಡಿ, ಸಂರಕ್ಷಣಾ ಬೋದುಸಾಲು ಮಾಡುವುದು,
ಬೋದು ಮತ್ತು ಹರಿ, ಕುಣಿ ಮಾಡುವುದು, ಇಳುಕಲಿಗೆ ಅಡ್ಡಲಾಗಿ ಸಾಗುವಳಿ ಮಾಡುವುದರಿಂದ
ಮಣ್ಣು ಮತ್ತು ನೀರನ್ನು ಸಂರಕ್ಷಿಸಬಹುದು.  ಶುಷ್ಕ ಪರಿಸ್ಥಿತಿ ಮುಂದುವರೆದಲ್ಲಿ ನಿಶಕ್ತ
ಹಾಗೂ ಬಾಧೆಗೊಳಗಾದ ಸಸಿಗಳನ್ನು ಕಿತ್ತು ಭೂಮಿಯಲ್ಲಿ ಹರಡುವುದು.  ಬೆಳೆಗಳ ಕೂಳೆ ಮತ್ತು
ಇತರೆ ಸಾವಯವ ವಸ್ತುಗಳನ್ನು ಭೂಮಿಯ ಮೇಲೆ ಹರಡಬೇಕು.  ತೇವಾಂಶದ ಕೊರತೆಯಿಂದ ಬೆಳೆಗಳು
ಸಂಪೂರ್ಣ ಹಾಳಾಗುವಂತಿದ್ದರೆ, ಸಾಧ್ಯವಿದ್ದಲ್ಲಿ ನೀರನ್ನು ಒದಗಿಸಿ ಅಥವಾ ಬೆಳೆಗಳನ್ನು
ಮೇವಿಗಾಗಿ ಕೊಯ್ಲು ಮಾಡಬಹುದು.  ಬೆಳೆಗಳು ಪೂರ್ತಿ ಹಾಳಾದಲ್ಲಿ ಹರಗಿ ಮುಂದೆ ಮಳೆ ಬಂದಾಗ
ಸೂಕ್ತ ಬೆಳೆ ಅಥವಾ ಮೇವಿನ ಬೆಳೆ ಬೆಳೆಯುವುದು ಸೂಕ್ತ.  ಒಂದು ವೇಳೆ ಬೆಳೆ ಅವಧಿಯಲ್ಲಿ
ಸಕಾಲಕ್ಕೆ ಮಳೆ ಬಂದರೆ ಖುಷ್ಕಿ ಬೆಳೆಗಳಿಗೂ ಕೂಡ ಮೇಲು ಗೊಬ್ಬರ ಕೊಡುವುದು ಮತ್ತು
ಯೂರಿಯಾ ಗೊಬ್ಬರದ ಸಿಂಪರಣೆಯನ್ನು ಅನುಸರಿಸುವುದು ಸೂಕ್ತ.
      ಪರ್ಯಾಯ ಬೆಳೆ
ಯೋಜನೆಯ ಅಂಶಗಳನ್ನು ರೈತ ಬಾಂಧವರು ಅನುಸರಿಸಲು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ
ರೈತರು ಸಮೀಪದ  ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.
ಎಮ್.ಬಿ ಪಾಟೀಲ- ೦೮೫೩೯-೨೨೦೨೦೫ ಹಾಗೂ ವಿಷಯ ತಜ್ಞರನ್ನು ಸಂಪರ್ಕಿಸುವಂತೆ ಪ್ರಕಟಣೆ
ತಿಳಿಸಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಷ್ಯವೇತನ : ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಕೊಪ್ಪಳ,
ಜು.೧೫ (ಕರ್ನಾಟಕ ವಾರ್ತೆ): ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ
ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ
ಶಿಷ್ಯವೇತನ ಮಂಜೂರಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
    
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧರು,
ಪಾರ್ಸಿ ಜನಾಂಗದ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನವನ್ನು ಪಡೆಯಬಹುದಾಗಿದೆ.
ಯಾವುದೇ ತಾಂತ್ರಿಕ ಕಾಲೇಜುಗಳಲ್ಲಿ ಪ್ರವೇಶ ಪಡೆದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ
ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿದ್ದು, ಆನ್‌ಲೈನ್
ಮೂಲಕ ಅರ್ಜಿ ಸಲ್ಲಿಸಲು ಹೊಸ ವಿದ್ಯಾರ್ಥಿಗಳಿಗೆ ಸೆಪ್ಟಂಬರ್.೩೦ ಹಾಗೂ ನವೀಕರಣ
ವಿದ್ಯಾರ್ಥಿಗಳಿಗೆ ನವಂಬರ್.೧೫ ಕೊನೆ ದಿನಾಂಕವಾಗಿದೆ. ಮೆಟ್ರಿಕ್ ನಂತರದ
ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿದ್ದು, ಆನ್‌ಲೈನ್
ಮೂಲಕ ಅರ್ಜಿ ಸಲ್ಲಿಸಲು ಹೊಸ ವಿದ್ಯಾರ್ಥಿಗಳಿಗೆ ಸೆಪ್ಟಂಬರ್.೧೫ ಹಾಗೂ ನವೀಕರಣ
ವಿದ್ಯಾರ್ಥಿಗಳಿಗೆ ಅಕ್ಟೋಬರ್.೧೦ ಕೊನೆ ದಿನಾಂಕವಾಗಿದೆ.
     ಅರ್ಜಿ
ಸಲ್ಲಿಸಲಿಚ್ಛಿಸುವ ವಿದ್ಯಾರ್ಥಿಗಳು ಮೂಲ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ
ಪತ್ರ, ಪದವಿ ಪ್ರಮಾಣ ಪತ್ರ, ಅಂಕಪಟ್ಟಿ, ಆಯಾ ಕಾಲೇಜುಗಳ ಶುಲ್ಕ ತುಂಬಿದ ರಶೀದಿ, ಆಧಾರ್
ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ, ವಿದ್ಯಾರ್ಥಿಯ ಭಾವಚಿತ್ರ ಮತ್ತು ಸಹಿ
ಇತ್ಯಾದಿ ದಾಖಲೆಗಳನ್ನು ಲಗತ್ತಿಸಿ, ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರಿಂದ
ದೃಢೀಕರಿಸಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರ, ಜಿಲ್ಲಾ
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಛೇರಿ, ಕೊಪ್ಪಳ
ಇಲ್ಲಿಗೆ ಸಲ್ಲಿಸಬಹುದಾಗಿದೆ. ಆನ್‌ಲೈನ್ ಅರ್ಜಿಗಳನ್ನು
ತಿತಿತಿ.sಛಿhoಟಚಿಡಿshiಠಿ.gov.iಟಿ
ಮೂಲಕ ಸಲ್ಲಿಸಬಹುದಾಗಿದ್ದು,
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ತಿತಿತಿ.goಞಜom.gov.iಟಿ
ಗೆ ಭೇಟಿ ನೀಡಬಹುದಾಗಿದೆ ಎಂದು ಹಿಂದುಳಿದ
ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ. 

Please follow and like us:
error

Leave a Reply

error: Content is protected !!