ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ೨೦೧೪ರ ಮಾಹಿತಿ ಮೊಬೈಲ್‌ನಲ್ಲಿ

ಕಳೆದ ಕೆಲವು ವರ್ಷಗಳಿಂದ ಜಾತ್ರೆಯ ಕಾರ್ಯಕ್ರಮಗಳ ವಿವರಣೆ ಮೊಬೈಲ್‌ನಲ್ಲಿ ಪಡೆಯಲು ಗವಿಮಠ ಎಂದು ಟೈಪ್ ಮಾಡಿ ನಿಗದಿತ ಮೊಬೈಲ್ ಸಂಖ್ಯೆಗೆ ಎಸ್.ಎಮ್.ಎಸ್ ಕಳುಹಿಸಿದಾಗ ಮರು ಎಸ್.ಎಮ್.ಎಸ್ ಮೂಲಕ ಜಾತ್ರೆಯ ಮಾಹಿತಿ ಲಭ್ಯವಾಗುತ್ತಿತ್ತು. ಪ್ರಸ್ತುತ ಈ ವರ್ಷದಲ್ಲಿ ಎಸ್.ಎಮ್.ಎಸ್ ಮಾಡುವ ಬದಲಾಗಿ ೦೪೦೭೧೦೧೨೦೩೬ ಸಂಖ್ಯೆಗೆ ದೂರವಾಣಿ ಕರೆ ಮಾಡಿದಾಗ ಜಾತ್ರೆಯ ದಿನವಹಿ ಕಾರ್ಯಕ್ರಮ ಮಾಹಿತಿ ಎಸ್.ಎಮ್.ಎಸ್ ರೂಪದಲ್ಲಿ ಲಭ್ಯವಾಗುತ್ತದೆ. ಸದರಿ ಸಂಖ್ಯೆಯುwww.gavimathkoppal.com ವೆಬ್‌ಸೈಟಿನದಾಗಿದ್ದು, ಈ ಸಂಖ್ಯೆಗೆ ಮಾಡುವ ಕರೆಯು ಉಚಿತವಾಗಿರುತ್ತದೆ. ಈ ಸಂಖ್ಯೆಗೆ ಕರೆ ಮಾಡಿದಾಗ ಕರೆ ಕಡಿತಗೊಂಡು ನಂತರ ಕರೆ ಮಾಡಿದ ಮೊಬೈಲ್ ಸಂಖ್ಯೆಗೆ ಜಾತ್ರೆಯ ಮಾಹಿತಿ ಎಸ್.ಎಮ್.ಎಸ್ ಮೂಲಕ ಲಭ್ಯವಾಗುತ್ತದೆ. 

Related posts

Leave a Comment