ಬಾಬಾ ಸಾಹೇಬ ಅಂಬೇಡ್ಕರ ಮಹಾ ಮಾನವತಾವಾದಿ

  ಕೆ. ರಾಘವೇಂದ್ರ ಹಿಟ್ನಾಳ  
ಕೊಪ್ಪಳ : ಜಿಲ್ಲಾ ಕಂಗ್ರೇಸ ಕಾರ್ಯಾಲಯದಲ್ಲಿ ಅಂಬೇಡ್ಕರ ರವರ ೧೨೧ ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಹಿಟ್ನಾಳ ಕಡುಬಡತನದಲ್ಲಿ ಉನ್ನತ ವ್ಯಾಸಂಗ ಮಾಡಿದ ಅಂಬೇಡ್ಕರರವರು ಭಾರತದಲ್ಲಿ ತಾಂಡವಾಡುತ್ತಿದ್ದ ಅಸ್ಪೃಶ್ಯತೆ  ವಿರುದ್ದ ದ್ವನಿ ಎತ್ತಿದ ಮೊದಲ ರಾಷ್ಟ್ರನಾಯಕರಾಗಿದ್ದು, ಏಕತೆ, ಸಮಾನತೆ, ಸೌಹಾರ್ದತೆಯ ತತ್ವವನ್ನು ದೇಶದಲ್ಲಿ ಅನುಷ್ಠಾನ ಗೊಳಿಸಿದರು. ಭಾರತವನ್ನು ಜಾತ್ಯಾತೀತ ರಾಷ್ಟ್ರವನ್ನಾಗಿ ಮಾಡಿದ ಹೆಮ್ಮೆ ಅಂಬೇಡ್ಕರವರಿಗೆ ಸಲ್ಲುತ್ತದೆ. ಮನುಕುಲದ ಏಳಿಗೆಯ ಮಹಾನ್ ಪುರುಷ ಅಂಬೇಡ್ಕರರಾಗಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೇಸ ಅಧ್ಯಕ್ಷರಾದ ಇಂದಿರಾ ಬಾವಿಕಟ್ಟಿ, ಹಾಗೂ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಜಾಕೀರ ಹುಸೇನ್ ಕಿಲ್ಲೆದಾರ, ಅಂಬೇಡ್ಕರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬ ಭಾರತೀಯ ನಾಗರಿಕನು ಜೀವನದಲ್ಲಿ ಅಳವಡಿಸಿಕೊಳ್ಳಬೆಕೆಂದು ಕರೆನೀಡಿದರು. ಎಸ್.ಬಿ. ನಾಗರಳ್ಳಿ, ಶಾಂತಣ್ಣ ಮುದಗಲ್, ಜುಲ್ಲು ಖಾದರಿ, ಮರ್ದಾನಲಿ ಅಡ್ಡೆವಾಲಿ, ಗವಿಸಿದ್ದಪ್ಪ ಕಂದಾರಿ,  ಕ್ರಷ್ಣಾ ಇಟ್ಟಂಗಿ, ಶಂಕುತಲಾ ಹುಡೇಜಲಿ, ಕಾಟನ ಪಾಷಾ, ದೇವಮ್ಮ,  ಅಪ್ಸರಸಾಬ್, ನಾಗರಾಜ ಬಳ್ಳಾರಿ, ಶಿವಾನಂದ ಹೊದ್ಲೂರ, ನೂರಜಾನ್ ಬೇಗಂ, ಚನ್ನಮ್ಮ, ಬಡಿಯಮ್ಮ, ಸಾಧೀಕ ಅತ್ತಾರ ಮುಂತಾದವರು ಉಪಸ್ಥಿತರಿದ್ದರು.
Please follow and like us:
error