ತಿರುಳಗನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ಎಚ್.ನಾರಿನಾಳ ಆಯ್ಕೆ.

ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಮುಖಾಂತರ ಪ್ರತಿವರ್ಷ ಜರುಗುವ ಜಿಲ್ಲಾ ಉತ್ಸವವು ಈ ಬಾರಿ ಆಗಸ್ಟ್ ೨೨, ೨೩, ೨೪ ರಂದು ಜರುಗಲಿದ್ದು, ಭಾನುವಾರು ೨೩ ರಂದು ೭ನೇ ತಿರುಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಸಮಾಜ ಚಿಂತಕ ಸುದ್ದಿ ಚಿಂತನ ಪತ್ರಿಕೆ ಸಂಪಾದಕರಾದ ಸಿ.ಹೆಚ್.ನಾರಿನಾಳ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ನಾಗರಿಕರ ವೇದಿಕೆ ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಹಾಗೂ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇತ್ತೀಚಿಗೆ ಜರುಗುವ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಸಿ.ಹೆಚ್.ನಾರಿನಾಳ, ಇವರನ್ನು ಆಯ್ಕೆ ಮಾಡಲಾಯಿತು. ಆ.೨೩ ರ ಭಾನುವಾರದಂದು ಜರುಗುವ ತಿರುಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿ.ಹೆಚ್.ನಾರಿನಾಳರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಉಪನ್ಯಾಸ, ಮಹಿಳೆ ಮಕ್ಕಳ ಗೋಷ್ಠಿ, ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ರಾಜ್ಯಾಧ್ಯಕ್ಷ ಮಹೇಶಬಾಬು ಸುರ್ವೆ ಹಾಗೂ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಅವರು ತಿಳಿಸಿದ್ದಾರೆ.
ಸಿ.ಹೆಚ್.ನಾರಿನಾಳ ಆಯ್ಕೆ ಹರ್ಷ : ಜಿಲ್ಲಾ ಉತ್ಸವವು ಈ ಬಾರಿ ಆಗಸ್ಟ್ ೨೨, ೨೩, ೨೪ ರಂದು ಜರುಗಲಿದ್ದು, ಭಾನುವಾರು ೨೩ ರಂದು ೭ನೇ ತಿರುಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಸಮಾಜ ಚಿಂತಕ ಸುದ್ದಿ ಚಿಂತನ ಪತ್ರಿಕೆ ಸಂಪಾದಕರಾದ ಸಿ.ಹೆಚ್.ನಾರಿನಾಳ ಇವರನ್ನು ಸರ್ವಾನುಮತದಿಂದ ಆಯ್ಕೆ ಯಾಗಿದ್ದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ನಾಗರಿಕರ ವೇದಿಕೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ: ಮಹಾಂತೇಶ ಮಲ್ಲನಗೌಡರ, ಎಂ.ಸಾದಿಕ್ ಅಲಿ, ಸಿದ್ದಪ್ಪ ಹಂಚಿನಾಳ, ಎನ್.ಎಂ.ದೊಡ್ಡಮನಿ, ಹರೀಶ್ ಹೆಚ್.ಎಸ್., ಹನುಮಂತ ಹಳ್ಳಿಕೇರಿ, ಎಚ್.ಕೆ.ಸುರ್ವೆ, ಬದರಿಪುರೋಹಿತ, ರವಿಚಂದ್ರ ಬಡಿಗೇರ, ರಾಕೇಶ ಕಾಂಬ್ಳೇಕರ್, ಮಂಜುನಾಥ ಗೊಂಡಬಾಳ ಮೊದಲಾದವರು ಆಯ್ಕೆ ಸಭೆಯಲ್ಲಿ ಹಾಜರಿದ್ದರು ಎಂದು ಪ್ರಕಟಣೆಯಲ್ಲಿ ನಾಗರಿಕರ ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ತಿಳಿಸಿದ್ದಾರೆ.

Leave a Reply