ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.

ಕೊಪ್ಪಳ, ಅ.೧೩ (ಕ ವಾ) ಸಣ್ಣ ನೀರಾವರಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ೧೪
ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು
ಕಾರಟಗಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣೆ ನಡೆಸಿ, ವಾಸ್ತವ್ಯ ನಡೆಸುವರು
ಎಂದು ಸಚಿವರು ಆಪ್ತಕಾರ್ಯದರ್ಶಿ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಅ.೧೪ ರಂದು ಪೂರ್ವಾಭಾವಿ ಸಭೆ.
ಕೊಪ್ಪಳ,
ಅ.೧೩ (ಕ ವಾ)  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನವೆಂಬರ್ ೦೧ ರಂದು
ಜರುಗಲಿರುವ ಕನ್ನಡ ರಾಜ್ಯೋತ್ಸವ -೨೦೧೫ ರ ಆಚರಣೆ ಕುರಿತು ಪೂರ್ವಾಭಾವಿ ಸಭೆ ಅ.೧೪ ರಂದು
ಸಂಜೆ ೦೪.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
    
ಜಿಲ್ಲಾಧಿಕಾರಿಗಳು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆಗಳ
ಮುಖ್ಯಸ್ಥರು  ಕನ್ನಡ ರಾಜ್ಯೋತ್ಸವ ಭಾಷಣಕ್ಕಾಗಿ ತಮ್ಮ ಇಲಾಖೆಯ ಅಭಿವೃದ್ಧಿ ಮಾಹಿತಿ
ಟಿಪ್ಪಣಿಯ (ಒಂದು ಪುಟಕ್ಕೆ ಮೀರದಂತೆ)  ಹಾರ್ಡ್ ಮತ್ತು ಸಾಫ್ಟ್ ಕಾಪಿಯೊಂದಿಗೆ ಸಭೆಗೆ
ಹಾಜರಾಗುವಂತೆ ಅಪರ ಜಿಲ್ಲಾಧಿಕಾರಿ ಡಾ|| ಪ್ರವೀಣ ಕುಮಾರ ತಿಳಿಸಿದ್ದಾರೆ.
Please follow and like us:
error