fbpx

ಕೊಪ್ಪಳ ನಗರಸಭೆ ವತಿಯಿಂದ ವಿವಿಧ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ನ.೦೭
(ಕ ವಾ) ಕೊಪ್ಪಳ ನಗರಸಭೆ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ
ಅಭಿಯಾನದಡಿ ಪ್ರಸಕ್ತ ಸಾಲಿನಲ್ಲಿ ವಿವಿಧ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
    
ಯೋಜನೆಯಡಿ ಕೊಪ್ಪಳ ನಗರ ಪ್ರದೇಶದಲ್ಲಿರುವ ೧೮ ವರ್ಷ ಮೇಲ್ಪಟ್ಟ ವಯೋಮಿತಿ ಹೊಂದಿರುವ
ಬಡತನ ರೇಖೆಗಿಂತ ಕೆಳಗಿರುವ ಅಭ್ಯರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆ, ಕೈಗಾರಿಕಾ
ತರಬೇತಿ ಸಂಸ್ಥೆ, ಆರ್‌ಸೆಟಿ, ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕಟ್ಟಡ ನಿರ್ಮಾಣ
ಕಾರ್ಮಿಕರ ತರಬೇತಿ ಅಕಾಡೆಮಿ ಇವರ ಮೂಲಕ ಬೇಸಿಕ್ ಕಾರ್ಪೆಂಟರ್, ಬಾರ್ ಬೆಂಡರ್,
ಫ್ಲಂಬರ್, ಹೌಸ್‌ವೈರಿಂಗ್, ಮೊಬೈಲ್ ಫೋನ್ ರಿಪೇರಿ, ಬೇಸಿಕ್ ಬುಕ್ ಬೈಂಡಿಂಗ್, ಪೇಪರ್
ಪ್ಲೇಟ್ಸ್ ಮೇಕಿಂಗ್, ವಾಲ್ ಸ್ಪ್ರೇ, ವೆಲ್ಡಿಂಗ್, ಫಿಟ್ಟರ್ ಸೇರಿದಂತೆ ವಿವಿಧ ಕೌಶಲ್ಯ
ಅಭಿವೃದ್ಧಿ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು.
     ತರಬೇತಿ
ಪಡೆಲಿಚ್ಛಿಸುವ ಆಸಕ್ತ ಬಿಪಿಎಲ್ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪಡೆದು
ಭರ್ತಿ ಮಾಡಿ, ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ೦೩ ವರ್ಷ ನಗರದ
ನಿವಾಸಿಯಾಗಿರುವುದಕ್ಕೆ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ವಿದ್ಯಾರ್ಹತೆ
ದಾಖಲೆಗಳನ್ನು ಲಗತ್ತಿಸಿ, ದ್ವಿಪ್ರತಿಯಲ್ಲಿ ನ.೨೦ ರೊಳಗಾಗಿ ನಗರಸಭೆಯ ರಾಷ್ಟ್ರೀಯ ನಗರ
ಜೀವನೋಪಾಯ ಅಭಿಯಾನದ ವಿಭಾಗದಲ್ಲಿ ಖುದ್ದಾಗಿ ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ನಗರಸಭೆ
ಪೌರಾಯುಕ್ತ ರಮೇಶ ಪಟ್ಟೇದಾರ ತಿಳಿಸಿದ್ದಾರೆ.  

ಹೈಕೋರ್ಟ್ ನ್ಯಾಯಾಧಿಶರ ಕೊಪ್ಪಳ ಜಿಲ್ಲಾ ಪ್ರವಾಸ.
ಕೊಪ್ಪಳ
ನ. ೦೭ (ಕ ವಾ)  ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಎಸ್. ಸುಜಾತಾ ಅವರು
ನ. ೦೮ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
    
ನ್ಯಾಯಾಧೀಶರು, ನ. ೦೮ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕುಷ್ಟಗಿಯ ನ್ಯಾಯಾಲಯ
ಆವರಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ನ್ಯಾಯವಾದಿಗಳ ಸಂಘದ ಕಟ್ಟಡ ಹಾಗೂ ಸಭಾಂಗಣದ
ಉದ್ಘಾಟನೆ ನೆರವೇರಿಸುವರು.  ನಂತರ ಮಧ್ಯಾಹ್ನ ಗಂಗಾವತಿಯ ಹೊಸ ನ್ಯಾಯಾಲಯದ ತಪಾಸಣೆ
ಕೈಗೊಳ್ಳುವರು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ.
ಕೊಪ್ಪಳ
ನ. ೦೭ (ಕ ವಾ) ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ
ಸಚಿವ ಶಿವರಾಜ ಎಸ್ ತಂಗಡಗಿ ಅವರು ನ. ೦೮, ೦೯ ಮತ್ತು ೧೦ ರಂದು ಮೂರು ದಿನಗಳ ಕೊಪ್ಪಳ
ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
     ಸಚಿವರು ನ. ೦೮ ರಂದು ಸಂಜೆ
೦೪ ಗಂಟೆಗೆ ಕಾರಟಗಿಗೆ ಆಗಮಿಸಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಕೈಗೊಂಡು ವಾಸ್ತವ್ಯ
ಮಾಡುವರು.  ನ. ೦೯ ರಂದು ಕಾರಟಗಿಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ನಡೆಸಿ
ವಾಸ್ತವ್ಯ ನಡೆಸುವರು.  ನ. ೧೦ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಕೊಪ್ಪಳ ನಗರಕ್ಕೆ
ಆಗಮಿಸಿ, ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿರುವ ಹಜರತ್ ಟಿಪ್ಪುಸುಲ್ತಾನ್ ಜಯಂತಿ
ಕಾರ್ಯಕ್ರಮದಲ್ಲಿ ಭಾಗವಹಿಸುವರು.  ಮಧ್ಯಾಹ್ನ ೨ ಗಂಟೆಗೆ ಕಾರಟಗಿಗೆ ತೆರಳಿ ಸಾರ್ವಜನಿಕ
ಕುಂದುಕೊರತೆ ವಿಚಾರಣೆ ಕೈಗೊಂಡು ವಾಸ್ತವ್ಯ ಮಾಡುವರು ಎಂದು ಸಚಿವರ ಆಪ್ತ
ಕಾರ್ಯದರ್ಶಿಗಳು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!