ಘರ್‌ವಾಪಸಿ ಹಾಸ್ಯಾಸ್ಪದ ಕಾರ‍್ಯಕ್ರಮ- ಮಾವಳ್ಳಿ ಶಂಕರ್

ಕೊಪ್ಪಳ : ದಲಿತ,ಶೋಷಿತ ಜನಾಂಗಗಳು ಯಾವ ಕಾರಣಕ್ಕಾಗಿ ಮತಾಂತರಗೊಳ್ಳುತ್ತಿವೆ ಇದಕ್ಕೆ ಪರಿಹಾರ ಹುಡುಕುವದನ್ನು ಬಿಟ್ಟು ಘರ್‌ವಾಪಸಿಯಂತಹ ಕಾರ‍್ಯಕ್ರಮ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿ

ದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅಸ್ಪೃಶ್ಯತೆಯ ಅವಮಾನ,ಅಪಮಾನಗಳಿಂದಾಗಿ ಮತಾಂತರಕ್ಕೊಳಗಾಗುತ್ತಿರುವ ಜನರನ್ನು ಘರವಾಪಸಿಯಿಂದ ಮರುಮತಾಂತರ ಮಾಡುವುದು ಎಷ್ಟು ಸಮಂಜಸ ಎಂದರು.

ನಗರದಲ್ಲಿ  ಜಿಲ್ಲಾ ಸಮಿತಿಯ ಸಭೆ ನಡೆಯಲಿದ್ದು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು. ಸರಕಾರ ನಡೆಸುವ ಜಾತಿಗಣತಿಗೆ ಬೆಂಬಲಿಸುತ್ತೇವೆ. ಈ ಮೂಲಕವಾದರೂ ರಾಜ್ಯದಲ್ಲಿರುವ ವಿವಿಧ ಜಾತಿ,ಜನಾಂಗಗಳ ನಿಖರ ಮಾಹಿತಿ ದೊರೆಯುತ್ತದೆ. ರಾಜ್ಯದಲ್ಲಿ ವಿವಿಧ ಜಾತಿ,ಸಮುದಾಯಗಳು ತಮ್ಮ ಸಂಖ್ಯೆಯನ್ನು ಉತ್ಪ್ರೇಕ್ಷೆಯಿಂದ ಹೇಳಿಕೊಳ್ಳುತ್ತವೆ. ಸರಿಯಾದ ಮಾಹಿತಿಯಿಂದ ಸರಕಾರದ ಸವಲತ್ತುಗಳನ್ನು ಪಡೆಯಲು ಮತ್ತು ತಲುಪಿಸಲು ಸಾಧ್ಯ ಎಂದರು. ಮೌಢ್ಯಪ್ರತಿಭಂದಕ ಕಾಯ್ದೆಯ ಕುರಿತು ಚರ್ಚೆಯಾಗಬೇಕಾದ ಅವಶ್ಯಕತೆಯಿದೆ. ಅಮಾಯಕ ಜನರನ್ನು ಸುಲಿಗೆ ಮಾಡುವುದು ತಪ್ಪಬೇಕು ಎಂದರು. ಈ ಸಂದರ್ಭದಲ್ಲಿ ನಾಗಣ್ಣ ಬಡಿಗೇರ ಸೇರಿದಂತೆ ಜಿಲ್ಲೆಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Leave a Reply