ಕೊಪ್ಪಳದಲ್ಲಿ ಫೆ. ೧೨ ರಂದು ಕಾಲೇಜು ರಂಗೋತ್ಸವ

  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಹಾಗೂ ರಂಗ ಚಟುವಟಿಯಲ್ಲಿ ಆಸಕ್ತಿಯನ್ನು ಮೂಡಿಸಿ, ಪ್ರತಿಭೆಯ ಅನಾವರಣಕ್ಕೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಕಾಲೇಜು ರಂಗೋತ್ಸವ ಕಾರ್ಯಕ್ರಮವನ್ನು ಫೆ. ೧೨ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದೆ.
  ಯಲಬುರ್ಗಾ ತಾಲೂಕು ಕುಕನೂರಿನ ಹಿರಿಯ ರಂಗಕಲಾವಿದ ಬಾಬಣ್ಣ ಕಲ್ಮನಿ ಅವರು ಕಾಲೇಜು ರಂಗೋತ್ಸವದ ಉದ್ಘಾಟನೆ ನೆರವೇರಿಸುವರು.  ನಾಟಕ ಅಕಾಡೆಮಿ ಸದಸ್ಯ ಶಿವಶಂಕರ ಹಾಲ್ಕುರ್ಕಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಗಂಗಾವತಿಯ ರಂಗ ಕಲಾವಿದೆ ಜಿ. ವಂದನಾ, ರಂಗ ಸಂಘಟಕರಾದ ಅರಳಿಹಳ್ಳಿಯ ರೇವಣಸಿದ್ದಯ್ಯ, ಹುಲಿಗಿಯ ಕೊಟ್ರಯ್ಯ ಸ್ವಾಮಿ, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಹಾಗೂ ಡಿಡಿಪಿಐ ಎ. ಶ್ಯಾಮಸುಂದರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೧೧ ಗಂಟೆಗೆ ಕಾಲೇಜು ತಂಡಗಳ ನಾಟಕ ಹಾಗೂ ಜಾನಪದ ಕಲಾ ಪ್ರದರ್ಶನದ ಸ್ಪರ್ಧೆಗಳು ಜರುಗಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ   ತಿಳಿಸಿದ್ದಾರೆ.
Please follow and like us:
error