ಕಮಲಾಪುರ ಕರೆಕಟ್ಟೆ ಬಳಿ ಬೀಕರ ರಸ್ತೆ ಅಪಘಾತ ದಂಪತಿಗಳ ಸಾವು

ಹೊಸಪೇಟೆ: ಕಮಲಾಪುರದ ಕೆರೆಕಟ್ಟೆ ಹತ್ತಿರ ಸೋಮವಾರ ನಡೆದ ಭೀಕರ ಅಪಘಾತದಲ್ಲಿ ದಂಪತಿಗಳಿಬ್ಬರು ಸಾವನಪ್ಪಿದ ಘಟನೆ ನಡೆದಿದೆ. 
ಕಮಲಾಪುರ ಕೆರೆಯ ಕಟ್ಟೆಯ ತಿರುವಿನಲ್ಲಿ ಬೆಳಿಗ್ಗೆ ೮-೩೦ರ ಸುಮಾರಿಗೆ ಹೊಸಪೇಟೆಯಿಂದ ಕಂಪ್ಲಿ ಕಡೆಗೆ ದ್ವಿಚಕ್ರವಾಹನದಲ್ಲಿ ದಂಪತಿಗಳು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಟಾಟಾ ಎಸಿ ವಾಹನಕ್ಕೆ ಢಿಕ್ಕಿ ಸಂಭವಿಸಿ, ಕಂಪ್ಲಿಯ ಶಿಬಿರದೆನ್ನಿ ನಿವಾಸ ರೆಹಮಾನ್ ಸಾಬ್(೩೫) ಆತನ ಪತ್ನಿ ಹೊನ್ನೂರುಬೀ(೨೮) ಸ್ಥಳದಲ್ಲಿಯೇ ಸಾವನಪ್ಪಿದ್ದು, ೧೧ವರ್ಷದ ಮಗ ಅಸೀಫ್‌ಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ, ಅಪಘಾತ ಸುದ್ಧಿ ತಿಳಿಯುತ್ತಿದ್ದಂತೆ ಕಮಲಾಪುರ ಠಾಣೆಯ ಪಿಎಸ್‌ಐ ಹನುಮಂತಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ, ಟಾಟಾ ಎಸಿ ವಾಹನದ ಚಾಲಕ ಸಂತೋಷನನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

Leave a Reply