ಸೆಮಿಸ್ಟರ್ ಪದ್ಧತಿಯನ್ನು ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

: ಐ.ಟಿ.ಐ. ಕಾಲೇಜುಗಳಿಗೆ ಪ್ರಸಕ್ತ ವರ್ಷದಿಂದ ಸರ್ಕಾರವು ಜಾರಿಗೊಳಿಸುತ್ತಿರುವ ಸೆಮಿಸ್ಟರ್ ಪದ್ಧತಿಯನ್ನು ಕೈಬಿಡಲು ಒತ್ತಾಯಿಸಿ ಪ್ರತಿಭಟನೆ
ಇದೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವಂತೆ ಐ.ಟಿ.ಐ. ವಿದ್ಯಾರ್ಥಿಗಳಿಗೆ ಡಿ.ಜಿ.ಇ.ಟಿ. ಯಿಂದ ಜಾರಿಮಾಡಲು ಹೊರಟಿರುವ ಸೆಮಿಸ್ಟರ್ ಪದ್ಧತಿಯು ಅತ್ಯಂತ ಅಪ್ರಜಾತಾಂತ್ರಿಕ ಹಾಗೂ ವಿದ್ಯಾರ್ಥಿ ವಿರೋಧಿ ಕ್ರಮವಾಗಿದ್ದು ಇದನ್ನು ಈ ಕೂಡಲೇ ಕೈ ಬಿಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಸೇಷನ್ (ಎ.ಐ.ಡಿ.ವೈ.ಓ.) ಕೊಪ್ಪಳ ಜಿಲ್ಲಾ ಸಮಿತಿಯು ಆಗ್ರಹಿಸಿ ದಿನಾಂಕ ೧೩.೧೨.೨೦೧೩ರಂದು ಕೊಪ್ಪಳ ನಗರದಲ್ಲಿ  ಪ್ರತಿಭಟನಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಡಿ.ಸಿ.ಕಛೇರಿಗೆ ತೆರಳಿ ಅವರ ಮೂಲಕ ಡೈರೆಕ್ಟೊರೇಟ್ ಜನರಲ್ ಆಫ್ ಎಂಪ್ಲಾಯಿಮೆಂಟ್ ಆಂಡ್ ಟ್ರೇನಿಂಗ್, ಬೆಂಗಳೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ   ಮಾರುತಿ ಹೊಸಮನಿಯವರು  ಮಾತನಾಡುತ್ತಾ – ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಯಾವುದೇ ಒಂದು ಹೊಸ ಶಿಕ್ಷಣಪದ್ಧತಿಯನ್ನು ಜಾರಿಗೊಳಿಸುವ ಮೊದಲು ಎಲ್ಲಾ ಕಡೆಗಳಿಂದಲೂ ಅಂದರೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಕಾಲೇಜು ಉಪನ್ಯಾಸಕರ ಮಧ್ಯೆ ವ್ಯಾಪಕ ಚರ್ಚೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಆದರೆ ಇದೀಗ ಸರ್ಕಾರ ಇವೆಲ್ಲವನ್ನೂ ಗಾಳಿಗೆ ತೂರಿ ಏಕಾಏಕಿ ಐ.ಟಿ.ಐ. ವಿದ್ಯಾರ್ಥಿಗಳ ಮೇಲೆ ಸೆಮಿಸ್ಟರ್‌ಗಳನ್ನು ತಂದು ಹೇರಿದೆ. ಇದರಿಂದ ಒಂದೆಡೆ ವಿದ್ಯಾರ್ಥಿಗಳನ್ನು ಪರೀಕ್ಷೆಯ ಗುಂಗಿನಲ್ಲಿ ಇರಿಸಿ ಅವರಲ್ಲಿ ಸೃಜನಶೀಲತೆ, ಜ್ಞಾನಕ್ಕಾಗಿನ ಹಂಬಲ, ವಿಷಯವನ್ನು ಆಳವಾಗಿ ಅರಿತುಕೊಳ್ಳುವಿಕೆಯು ಕುಗ್ಗಿ ಹೋಗುತ್ತದೆ. ಇನ್ನೊಂದೆಡೆ ತರಬೆತಿ ಅಧಿಕಾರಿಗಳನ್ನು ಪರೀಕ್ಷೆ, ಮೌಲ್ಯಮಾಪನದ ಒತ್ತಡದಲ್ಲಿ ಸಿಲುಕಿಸಿ ಉತ್ತಮವಾದ ತರಬೇತಿ ನೀಡಲು ಕಷ್ಟಸಾಧ್ಯವಾಗಿ ಬರೀ ಸೆಲೆಬಸ್ ಮುಗಿಸಬೇಕೆಂಬ ಶಾಸ್ತ್ರದ ಬೋಧನೆಯಾಗಿ ಮಾರ್ಪಡುತ್ತದೆ. ಇಂತಹ ವಿದ್ಯಾರ್ಥಿ ವಿರೋಧಿ ಪದ್ಧತಿಯನ್ನು ಎ.ಐ.ಡಿ.ವೈ.ಓ. ಜಿಲ್ಲಾ ಸಮಿತಿಯು ಖಂಡಿಸುತ್ತದೆ ಎಂದರು.
ನಂತರ ಎ ಐ ಡಿ ವೈ ಜಿಲಾ ಕಾರ್ಯದರ್ಶಿಗಳಾದ  ರಮೇಶ್ ವಂಕಲಕುಂಟಿಯವರು ಮಾತನಾಡುತ್ತಾ -ರಾಜ್ಯದಲ್ಲಿ ಒಟ್ಟು ೧೪೭೨ ಕ್ಕಿಂತ ಹೆಚ್ಚು ಕಾಲೇಜುಗಳಿದ್ದು ಪ್ರತಿ ವರ್ಷ ಸುಮಾರು ೩೦,೦೦೦ ವಿದ್ಯಾರ್ಥಿಗಳು ತರಬೇತಿ ಪಡೆದು ಹೊರಬರುತ್ತಾರೆ. ಇವರೆಲ್ಲ ಉತ್ತಮ ತರಬೇತಿ ಹೊಂದಿದವರೇ ಆಗಿರುತ್ತಾರೆ. ಆದರೆ ಈಗ ಸರಕಾರ ಸೆಮಿಸ್ಟರ್ ಪದ್ಧತಿಯನ್ನು ಜಾರಿಗೊಳಿಸಿರುವುದರಿಂದ ವಿದ್ಯಾರ್ಥಿಗಳು ಕೇವಲ ಅಂಕಗಳಿಸಿದ ತರಬೇತಿದಾರರಾಗುತ್ತಾರೆಯೇ ವಿನಃ ಉತ್ತಮ ತರಬೇತಿ ಪಡೆದವರಾಗಲಾರರು. ಅಲ್ಲದೆ ಸೆಮಿಸ್ಟರ್ ಪದ್ಧತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕಾರಣ ಸರಕಾರ ಈ ಕೂಡಲೇ ಸೆಮಿಸ್ಟರ್ ಪದ್ಧತಿಯನ್ನು ಕೈಬಿಟ್ಟು ಮುಂಚೆ ಇರುವಂತೆ ಮುಂದುವರೆಸಬೇಕು ಅಲ್ಲದೆ ನಿರುದ್ಯೋಗಿ ತರಬೇತಿದಾರರಿಗೆ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿದರು. 
ನಗರದ  

ಐ ಟಿ ಐ ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts

Leave a Comment