೧೦ನೇ ವರ್ಷದ ಅಹೋರಾತ್ರಿ ಪುರಾಣ, ಸಂಗೀತೋತ್ಸವ ಕಾರ್ಯಕ್ರಮ ಯಶಸ್ವಿ.

 ಕೊಪ್ಪಳ,ಆ,೧೬ ಕಿನ್ನಾಳದ ಬೆಟ್ಟದಲಿಂಗೇಶ್ವರ ಕಲಾ ಸಾಂಸ್ಕೃತಿಕ ಮತ್ತು ಪುರಾಣ ಪ್ರವಚನ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಹಯೋಗದಲ್ಲಿ ಕಿನ್ನಾಳದ ಕೌಲಪೇಟೆಯ ಕಾಶಿವಿಶ್ವನಾಥ ದೇವಸ್ಥಾನದಲ್ಲಿ  ದಶಮಾನೋತ್ಸದ ಪ್ರಯುಕ್ತ ಶ್ರೀ ಬೆಟ್ಟದಲಿಂಗೇಶ್ವರ ಪುರಾಣ ವಿದ್ವಾಂಸರಿಂದ ಪುರಾಣ ಖ್ಯಾತ ಸಂಗೀತ ಕಲಾವಿದರುಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಭಕ್ತಿಸಂಗೀತ, ಗೊಂದಲಿಗರ ಪದ, ಜಾನಪದ ಅಹೋರಾತ್ರಿ ಪುರಾಣ ಮತ್ತು ಸಂಗೀತೋತ್ಸವ ಕಾರ್ಯಕ್ರಮ ಹನ್ನೊಂದು ದಿನಗಳಕಾಲ ಯಶಸ್ವಿಯಾಗಿ ಜರುಗಿದವು. 
    ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಪ್ರತಿದಿನವೂ ಖ್ಯಾತ ಕಲಾವಿದರುಗಳಿಂದ ಸಂಗೀತ ಕಚೇರಿ ಜರುಗಿತು ಮೊದಲಿಗೆ ಲಕ್ಷ್ಮೇಶ್ವರದ ಶಹನಾಯ್ ಕಲಾವಿದ ಕೃಷ್ಣ ವೆಂಕಪ್ಪ ಕ್ಷತ್ರಿ ಅವರಿಂದ ಶಹನಾಯ್,  ಬೆಂಗಳೂರಿನ ಗುರುರಾವ್ ದೇಶಪಾಂಡೆ ಸಂಗೀತ ಸಭಾ ಇವರ ಸಂಗೀತ ಯಾತ್ರಾ ಯೋಜನೆಅಡಿಯ ಖ್ಯಾತ ಯುವ ಗಾಯಕ ಸಿದ್ದಾರ್ಥ ಬೆಳ್ಳಮಣಿ ಅವರ ಮಾರೋಬಿಹಾರ್ ಮತ್ತು ಅಭಂಗ, ಭಕ್ತಿಗೀತೆಗಳು ಜನ-ಮನ ಸೂರೆಗೊಂಡವು, ಹೊಸಪೇಟೆಯ  ಬಾನ್ಸುರಿ ಕಲಾವಿದ ಭಾರ್ಗವರಾವ್ ದೇಶ್‌ರಾಗದಲ್ಲಿ ಠುಮರಿ ನುಡಿಸಿ ನೆರದ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು.  ಜನಪದ ಸಿರಿ ಕಾರ್ಯಕ್ರಮದಲ್ಲಿ  ಜಾನಪದ ಅಕ್ಯಾಡಮಿ ಪ್ರಶಸ್ತಿ ಪುರಸ್ಕೃತ ವಾಲ್ಮೀಕಪ್ಪ ಯಕರನಾಳ ಅವರು ಮೂಲ ಸೋಬಾನೆ ಪದ, ಬೀsಸುವ ಪದ, ಹಂತಿಪದ ಅದ್ಭತವಾಗಿಹಾಡಿದರು, ಗೊಂದಲಿಗರ ಪದವನ್ನು ತಿಪ್ಪಣ್ಣ ಅಂಬಜಿ ಸುಗತ್ಕರ್ ಹಾಡಿದರು.
  ಭಕ್ತಿಸುಧೆ ಕಾರ್ಯಕ್ರಮದಲ್ಲಿ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ಪ್ರಾಚಾರ್ಯ ರಾಮಚಂದ್ರಪ್ಪ ಉಪ್ಪಾರ ಮತು ಸಂಗಡಿಗರಿಂದ ದಾಸರ ಪದ, ವಚನ ಸಾಹಿತ್ಯ ಪ್ರಸ್ತುತಪಡಿಸಿದರು, ಕು.ಚೈತ್ರಾ ಹುಲಗೇರಿ, ಪ್ರೇಮಾ ಬಸಪ್ಪ ದೇಸಾಯಿ, ಗಂಗಾಧರ ಅರಳಿಕಟ್ಟಿ, ಶ್ರೀಶೈಲಪ್ಪ ಹಲ್ಳಿಕೇರಿ, ಬಸವರಾಜ್ ಹಳ್ಳಿಕೇರಿ ಅವರುಗಳು ಮತ್ತು ಶ್ರೀಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಭಕ್ತಿಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಲಚ್ಚಣ್ಣ
 ಕೊಪ್ಪಳ ರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮಿಜಿ ಮತ್ತು ಶ್ರೀಷಡಕ್ಷರಯ್ಯ ಈಶಯ್ಯ  ಸ್ವಾಮಿಗಳು  ಕಿನ್ನಾಳ ಹಿರೇಮಠ ರವರುಗಳು ಕಾರ್ಯಕ್ರಮದ ದಿವ್ಯ  ಸಾನಿಧ್ಯವಹಿಸಿದ್ದರು. ಮಲ್ಲಿಕಾರ್ಜುನಯ್ಯ ಶಿವಲಿಂಗಪ್ಪಯ್ಯ ನಾಯ್ಕಲ್ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು ಅಧ್ಯಕ್ಷತೆಯನ್ನು ಬಸಪ್ಪ ಜೀರಗಿವಹಿಸಿದ್ದರು.
 ಮುಖ್ಯಅತಿಥಿಗಳಾಗಿ ವೀರಣ್ಣ ಬಡ್ಡೊಡಿ, ಶ್ರೀಶೈಲಪ್ಪ ಬೆಲ್ಲಮಕೊಂಡಿ. ಭೋಜಪ್ಪ ಕುಂಬಾರ್ ಇಂದ್ರಗಿ, ಶಂಕರಪ್ಪ ಶಿರಿಗೇರಿ, ಚಂದ್ರಪ್ಪ ಶಿರಿಗೇರಿ, ಲಿಂಗಜ್ಜ ಜಾಗೀರದಾರ, ನಿಂಗಜ್ಜ ಕಿನ್ನಾಳ, ಸುಭಾನಸಾಬ್ ಹಿರ್‍ಯಾಳ, ಗ್ರಾಪಂ ಸದಸ್ಯ ಬೆಟ್ಟದೇಶ ಲಿಂಗಣ್ಣ ಭಂಡಾರಿ, ನರಸಪ್ಪ ತಾವರಗೇರಿ  ಇನ್ನು ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು   ಈ ಸಂದರ್ಭದಲ್ಲಿ ಶ್ರೀಬೆಟ್ಟದಲಿಂಗೇಶ್ವರ ಪುರಾಣ ಭಾವಾನುವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.

ಹಳಪೇಟ್ ಹಾರ್‍ಮೋನಿಯಂ, ಶ್ರೀನಿವಾಸ್ ಜೋಶಿ, ಶಿವಲಿಂಗ ಕಿನ್ನಾಳ, ಪರಶುರಾಮ್ ಬಿನ್ನಾಳ ತಬಲಾ ಸಾಥ್ ನೀಡಿದರೆ,  ನಾಗರಾಜ್ ಶ್ಯಾವಿ ಬಾನ್ಸುರಿ, ಚಿದಾನಂದಪ್ಪ ಕಿನ್ನಾಳ ತಾಳ, ಗೋವಿಂದರಾಜ್, ರಂಗಪ್ಪ ಮುಂತಾದವರುಗಳು ವಿವಿಧ ವಾದ್ಯಗಳ ಸಾಥ್ ನೀಡಿದರು.

Please follow and like us:
error