ರಾಷ್ಟ್ರೀಯ ಚಾಲುಕ್ಯ ಉತ್ಸವ ರಾಜ್ಯ ಮಟ್ಟದ ಛಾಯಾಚಿತ್ರ ಪ್ರದರ್ಶನ

 ರಾಷ್ಟ್ರೀಯ ಚಾಲುಕ್ಯ ಉತ್ಸವದ ಅಂಗವಾಗಿ ಬಾಗಲಕೋಟ ಜಿಲ್ಲಾಡಳಿತದ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬಾದಾಮಿ ಚಾಲುಕ್ಯರ ಸ್ಮಾರಕಗಳು ಮತ್ತು ಭೂಪ್ರದೇಶದ ಕುರಿತು ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆಯೆಂದು ರಾಷ್ಟ್ರೀಯ ಚಾಲುಕ್ಯ ಉತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಬಾಗಲಕೋಟೆ ಜಿಲ್ಲಾಧಿಕಾರಿ ಮನೋಜ್ ಜೈನ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಆಸಕ್ತ ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಪ್ರಥಮ ೫೦ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ೩೦ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ತೃತೀಯ ೨೦ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ನಾಲ್ಕನೇ ಬಹುಮಾನ ೫ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ, ಐದನೇ ಬಹುಮಾನ ೩ ಸಾವಿರ ಮತ್ತು ಪ್ರಶಸ್ತಿ ಪತ್ರ ಹಾಗೂ ೫ ಸಮಾಧಾನಕರ ಬಹುಮಾನ ೨ ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಅಲ್ಲದೇ ಅತ್ಯುತ್ತಮ ನೆರಳು ಬೆಳಕಿನ ಕಲಾತ್ಮಕ ಚಿತ್ರ ಹಾಗೂ ಅತ್ಯುತ್ತಮ ಕಲಾತ್ಮಕ ಭೂಪ್ರದೇಶದ ಚಿತ್ರಗಳಿಗೆ ವಿಶೇಷ ಬಹುಮಾನ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಒಟ್ಟು ೮ ಛಾಯಾಚಿತ್ರಗಳನ್ನು ಮಾತ್ರ ಕಳುಹಿಸಬೇಕು. ಛಾಯಾಚಿತ್ರಗಳು ಕಡಿಮೆ ಅಂದರೆ ೮ x ೧೨ ಹಾಗೂ ಅತೀ ಹೆಚ್ಚು ಅಂದರೆ ೧೨ x ೧೮ ಅಳತೆಯಲ್ಲಿ ಇರಬೇಕು. ಛಾಯಾಚಿತ್ರದ ಹಿಂಬಾಗದಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಚಿತ್ರ ಸೆರೆಹಿಡಿದ ದಿನಾಂಕ, ಸ್ಥಳವನ್ನು ಸ್ಪಷ್ಟವಾಗಿ ನಮೂದಿಸಿರಬೇಕು (ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರತ್ಯೇಕ ಬಿಳಿ ಹಾಳೆಯಲ್ಲಿ ಬರೆಯಬೇಕು). ಸ್ಪರ್ಧೆಗೆ ಕಳುಹಿಸುವ ಛಾಯಾಚಿತ್ರಗಳು ಯಾವುದೇ ಪತ್ರಿಕೆ ಅಥವಾ ಮಾಧ್ಯಮದಲ್ಲಿ ಪ್ರಕಟಗೊಂಡಿರಬಾರದು. ಯಾವುದೇ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿರಬಾರದು. ಕಳೆದ ಒಂದು ವರ್ಷದ ಅವಧಿಯೊಳಗೆ ಸೆರೆಹಿಡಿದಂತಹ ಛಾಯಾಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. ಈ ಕುರಿತಂತೆ ಸ್ವ-ಪ್ರಮಾಣಿತ ಪತ್ರವನ್ನು ಲಗತ್ತಿಸಬೇಕು.
ಸ್ಪರ್ಧೆಗೆ ಬಂದಂತಹ ಛಾಯಾಚಿತ್ರಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ. ಸ್ಪರ್ಧೆಯಲ್ಲಿ ಬಹುಮಾನ ಪಡೆದ ಚಿತ್ರಗಳನ್ನು ಮಾತ್ರ ಪ್ರಚಾರದ ಹಿತದೃಷ್ಟಿಯಿಂದ ಪ್ರಕಟಣೆಗೆ ಬಳಸಿಕೊಳ್ಳಲಾಗುವುದು. ಅಂತಾರಾಷ್ಟ್ರಿಯ ಛಾಯಾಗ್ರಾಹಕರಿಂದ ಛಾಯಾಚಿತ್ರಗಳ ಆಯ್ಕೆ ನಡೆಯಲಿದ್ದು, ಅವರ ನಿರ್ಣಯವೇ ಅಂತಿಮವಾಗಿರುತ್ತದೆ. 
ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಚಿತ್ರಗಳನ್ನು ಹಾಗೂ ಪ್ರದರ್ಶನಕ್ಕೆ ಆಯ್ಕೆಗೊಂಡ ಆಯ್ದ ಕಲಾತ್ಮಕ ಚಿತ್ರಗಳನ್ನು ಜಿಲ್ಲಾಡಳಿತ, ಬಾಗಲಕೋಟ ಸ್ಮರಣ ಸಂಚಿಕೆಯಲ್ಲಿ ಮುದ್ರಿಸಿ ಪ್ರಕಟಿಸಲಾಗುವುದು. ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಎಂದು ಅವರು ತಿಳಿಸಿದ್ದಾರೆ.
ಸ್ಪರ್ಧೆಗೆ ಛಾಯಾಚಿತ್ರವನ್ನು ಕಳುಹಿಸಲು ಪ್ರವೇಶ ಧನ ೫೦೦ ರೂ.ಗಳಾಗಿದ್ದು, ಪ್ರವೇಶದ ಹಣವನ್ನು ಡಿ.ಡಿ ಅಥವಾ ಎಂ.ಓ ಮೂಲಕ ಜಿಲ್ಲಾಧಿಕಾರಿಗಳು, ಬಾಗಲಕೋಟ ಇವರಿಗೆ ಸಂದಾಯವಾಗುವಂತೆ ಕಳುಹಿಸಬೇಕು. ತೀರ್ಪುಗಾರರು ಫಲಿತಾಂಶವನ್ನು ಅಂತಿಮಗೊಳಿಸುವ ಮುನ್ನ ಪ್ರವೇಶ ಧನವನ್ನು ಸಂದಾಯ ಮಾಡದಂತಹ ಸ್ಪರ್ಧಿಗಳ ಛಾಯಾಚಿತ್ರಗಳನ್ನು ಆಯ್ಕೆ ಸಮಿತಿ ಪರಿಗಣಿಸುವದಿಲ್ಲ.
ಛಾಯಾಚಿತ್ರ ಕಳುಹಿಸಲು ಅಂತಿಮ ದಿನ ೨೦೧೪, ಜನವರಿ ೨೪ ಆಗಿದ್ದು, ಛಾಯತಾಚಿತ್ರಗಳನ್ನು ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟ ಇವರಿಗೆ ಸಲ್ಲಿಸತಕ್ಕದ್ದು. ಫಲಿತಾಂಶ ಜನವರಿ ೩೧ ಈ ಮೇಲ್ ಮೂಲಕ ನೀಡಲಾಗುತ್ತಿದೆ. ಛಾಯಾಚಿತ್ರ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣೆಯನ್ನು ೨೦೧೪, ಫೆಬ್ರವರಿ ೭ ರಂದು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.chalukyaustava.com,
¥Éøï§ÄPï www.facebook.com/chalukyaustav.badami  ಹಾಗೂ ಜಿಲ್ಲಾ ವಾರ್ತಾಧಿಕಾರಿಗಳು ಮಂಜುನಾಥ ಸುಳ್ಳೊಳ್ಳಿ ಮೊನಂ.೯೬೩೨೫೧೧೪೩೭ ಇವರನ್ನು ಸಂಪರ್ಕಿಸಬಹುದಾಗಿದೆ.
Please follow and like us:
error

Related posts

Leave a Comment