Breaking News
Home / Koppal News / ಮೋಚಿಗಾರ ಮಹಾಸಭಾದಿಂದ ಡಾ.ಅಂಬೇಡ್ಕರ್ ಅವರ ೧೨೪ನೇ ಜಯಂತಿ

ಮೋಚಿಗಾರ ಮಹಾಸಭಾದಿಂದ ಡಾ.ಅಂಬೇಡ್ಕರ್ ಅವರ ೧೨೪ನೇ ಜಯಂತಿ

ಕೊಪ್ಪಳ:ಅಖಿಲ ಕರ್ನಾಟಕ ಮೋಚಿಗಾರ ಮಹಾಸಭಾದಿಂದ ಡಾ.ಅಂಬೇಡ್ಕರ್ ಅವರ ೧೨೪ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ಬೆಂಗಳೂರಿನ ವಿಧಾನ ಸೌದದs ಮುಂಭಾಗದಲ್ಲಿ  ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಮೋಚಿಗಾರ ಸಮಾಜ ಆರ್ಥಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದ ಜನಾಂಗವಾಗಿದ್ದು ಸಮಾಜ ಇನ್ನು ಹಲವಾರು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು, ಸಿದ್ದರಾಮಯ್ಯ ನೇತೃತ್ವದ ಸರಕಾರವು ಹಿಂದುಳಿದ ಸಮಾಜಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದು, ಹಿಂದುಳಿದ ಸಮಾಜದ ಶ್ರೋಯಭಿವೃಧ್ದಿಗೆ ಬದ್ದವಾಗಿದೆ ಎಂದರು.
ಮೋಚಿಗಾರ ಮಹಾಸಭಾದ ರಾಜ್ಯಾಧ್ಯಕ್ಷ ಟಿ.ಆರ್.ಧನಂಜಯ್,ಉಪಾಧ್ಯಕ್ಷೆ ವೇದಾ ಪುಷ್ಪ,ಉಪಾಧ್ಯಕ್ಷರಾದ ರಾಮಚಂದ್ರ ಗಾರವಾಡ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೋಳೂರು ಕೊಪ್ಪಳ,ಸಹಕಾರ್ಯದರ್ಶಿ ಹನುಮಂತಪ್ಪ ಅಳವಂಡಿ,ರಾಜ್ಯ ಸಮಿತಿ ಸದಸ್ಯರಾದ ಯಮನೂರಪ್ಪ ಸೂಡಿ,ಹೊನ್ನಪ್ಪ ಸಂಶಿ,ಸಮಾಜದ ಹಿರಿಯರು ಹಾಗೂ ಮುಖಂಡರು ಭಾಗವಹಿಸಿದ್ದರು.

About admin

Leave a Reply

Scroll To Top