ಉತ್ತರ ಕರ್ನಾಟಕಕ್ಕೆ ನಿರಾಶಾದಾಯಕ ಬಜೆಟ್- ಸಂಸದ ಶಿವರಾಮಗೌಡ

  ಕೇಂದ್ರ ರೈಲ್ವೆ ಸಚಿವ ಬನ್ಸಲ್ ಅವರು ಮಂಡಿಸಿದ ೨೦೧೩-೧೪ನೇ ಸಾಲಿನ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದಂತೆ ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.
  ರೈಲ್ವೆ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಶಿವರಾಮಗೌಡ ಅವರು, ಈ ಬಾರಿಯ ರೈಲ್ವೆ ಬಜೆಟ್ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ತೀರಾ ನಿರಾಸೆಯನ್ನುಂಟುಮಾಡಿದೆ.  ಈ ಭಾಗಕ್ಕೆ ಹೊಸ ರೈಲು ಹಾಗೂ ಪ್ಯಾಸೆಂಜರ್ ರೈಲುಗಳ ಮಂಜೂರಾತಿ ನೀಡುವಂತೆ ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗ್ಯೂ, ಕೇಂದ್ರ ಸಚಿವರು ಯಾವುದೇ ರೀತಿಯಲ್ಲಿ ಸ್ಪಂದಿಸದೆ, ಈ ಭಾಗದ ಜನರಿಗೆ ನಿರಾಸೆ ಮೂಡಿಸಿದ್ದಾರೆ.  ಮೆಹಬೂಬ್‌ನಗರ-ಮುನಿರಾಬಾದ್ ನೂತನ ರೈಲ್ವೆ ಕಾಮಗಾರಿ ತ್ವರಿತವಾಗಲು ಕನಿಷ್ಟ ೧೩೦ ಕೋಟಿ ರೂ. ಒದಗಿಸುವಂತೆ ವಿನಂತಿಸಿದ್ದರೂ, ಕೇವಲ ೩೦ ಕೋಟಿ ರೂ. ಅನುದಾನ ಒದಗಿಸುವದರಿಂದ, ಕಾಮಗಾರಿ ವಿಳಂಬವಾಗಲಿದೆ ಎಂದು ಸಂಸದ ಶಿವರಾಮಗೌಡ ಅವರು   ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Please follow and like us:
error

Related posts

Leave a Comment