You are here
Home > Koppal News > ಖಾಸಗೀಕರಣ ವಿರೋಧಿಸಿ ಅಂಗನವಾಡಿ ಉದ್ಯೋಗಿಗಳಿಂದ ರಸ್ತೆ ತಡೆ ಚಳುವಳಿ

ಖಾಸಗೀಕರಣ ವಿರೋಧಿಸಿ ಅಂಗನವಾಡಿ ಉದ್ಯೋಗಿಗಳಿಂದ ರಸ್ತೆ ತಡೆ ಚಳುವಳಿ

 ಸುಮಾರು ೩೫ ವರ್ಷಗಳಿಂದ ಅಂಗನವಾಡಿ ಉದ್ಯೋಗಿಗಳಾದ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಉದ್ಯೋಗಿಗಳ ಬೇಡಿಕೆಗಳನ್ನು ಸರಕಾರವು ಈವರೆಗೂ ಈಡೇರಿಸಿಲ್ಲ. ಸರಕಾರವು ಐ.ಸಿ.ಡಿ.ಸಿ. ಯೋಜನೆಯನ್ನು ಖಾಸಗಿಯವರಿಗೆ ನೀಡುವ ಸಂಚು ನಡೆಸಿದ್ದು, ಇದರಿಂದ ದೇಶದಲ್ಲಿಯನ ಅಂಗನವಾಡಿ ಉದ್ಯೋಗಿಗಳು ಕೆಲಸವನ್ನು ಕಳೆದುಕೊಂಡು ಬೀದಿ ಪಾಲಾಗುವ ಸಾಧ್ಯತೆ ಇದೆ. ಸರಕಾರದ ಮಹಿಳಾ ವಿರೋಧಿ ಈ ಅಪಾಯಕಾರಿ ನೀತಿಯನ್ನು ವಿರೋಧಿಸಿ ರಾಜ್ಯಮಟ್ಟದ ಹೋರಾಟಕ್ಕೆ ಬೆಂಬಲಿಸಿ ಕೊಪ್ಪಳದ ಅಂಗನವಾಡಿ ಉದ್ಯೋಗಿಗಳು ರಸ್ತೆ ತಡೆ ಚಳುವಳಿಯನ್ನು ನಡೆಸಲು ನಿರ್ಧರಿಸಿದ್ದಾರೆ.   ಖಾಸಗೀಕರಣ ವಿರೋಧಿಸಿ ಅಂಗನವಾಡಿ ಉದ್ಯೋಗಿಗಳಿಂದ ರಸ್ತೆ ತಡೆ ಚಳುವಳಿ
೧೦-೦೧-೨೦೧೪ ರ ಬೆಳಿಗ್ಗೆ ೧೨-೩೦ಕ್ಕೆ ಸಚಿವೆ

ಉಮಾಶ್ರೀ ಇವರಿಗೆ ಮನವಿ ಅರ್ಪಿಸಿದ ಅಂಗನವಾಡಿ ಉದ್ಯೋಗಿಗಳು ನಂತರ ತಹಶೀಲ್ದಾರ ಕಛೇರಿಯಿಂದ ಪ್ರತಿಭಟನೆ ಹೊರಟು ಕೊಪ್ಪಳದ ಅಶೋಕ ಸ್ತಂಭದ ಹತ್ತಿರ ರಸ್ತೆ ತಡೆ ನಡೆಸಿ (ಜೈಲ್ ಭರೋ) ಬಂಧನಕ್ಕೊಳಗಾದರು. ಈ ಹೋರಾಟದ ನೇತೃತ್ವವನ್ನು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಸವರಾಜ ಶೀಲವಂತರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್, ಮುಖಂಡರುಗಳಾದ ವಿಠ್ಠಪ್ಪ ಗೋರಂಟ್ಲಿ, ಶರಣಪ್ಪ ಕೊತಬಾಳ್, ನನ್ನುಸಾಬ ನೀಲಿ, ಮಕಬೂಲ್ ರಾಯಚೂರ, ಶಿವಪ್ಪ ಹಡಪದ, ರಮೇಶ ಪಿ. ಚಿಕೇನಕೊಪ್ಪ, ಈರಪ್ಪ ಡೊಳ್ಳಿನ, ಶಿವಮ್ಮ ಕಾಮನೂರ, ಮಮತಾಜ್ ಕಂದಗಲ್, ಶಿವಮ್ಮ, ಮರಿಬಸಮ್ಮ, ಅಕ್ಕನಾಗಮ್ಮ, ಸುಲೋಚನಾ, ರಜಿಯಾಬೇಗಂ, ಗಂಗಮ್ಮ, ಹನುಮಕ್ಕ, ವಿಜಯಲಕ್ಷ್ಮೀ ಹಾಗೂ ಮುಂತಾದವರು ಭಾಗವಹಿಸಿದ್ದು. 

Leave a Reply

Top