ಡಿ.ಎಸ್. ವೀರಯ್ಯ ಬಿ.ಜೆ.ಪಿ ಪರ ಬಿರುಸಿನ ಪ್ರಚಾರ

ಕೊಪ್ಪಳ : ದಿ:  ೨೨, ಬಿಜೆಪಿ ಅಬ್ಯರ್ಥಿಯಾದ ಸಂಗಣ್ಣ್ಣ ಕರಡಿಯವರ ಪರವಾಗಿ ನಗರದ  ಅಬೇಡ್ಕರ ನಗರ & ಸಿದ್ದೇಶ್ವರ ನಗರದಲ್ಲಿ  ಡಿ.ಎಸ್. ವೀರಯ್ಯ ವಿದಾನಪರಿಷತ್ ಸದಸ್ಯರು ಇವರಿಂದ ಅಬ್ಬರದ ಪ್ರಚಾರ ನಡೆಯಿತು. ಅಂಬೇಡ್ಕರ ಅಬಿವೃದ್ದಿನಿಗಮದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪರಿಸಿಷ್ಟಜಾತಿಯ ಸಮಾಜದವರಿಗೆ ಅನೇಕ ಯೋಜನೆಗಳನ್ನು ತಲುಪಿಸಿದ್ದೇನೆ. ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದಂತ ಬಿ.ಎಸ್. ಯಡಿಯೂರಪ್ಪನವರು ಸಾಕಷ್ಟು ಯೋಜನೆಗಳ ಮುಖಾಂತರ ನಮ್ಮ ಸಮಾಜಕ್ಕೆ ಸಹಾಯ ಮಾಡಿದ್ದಾರೆ. ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್  ಸರಕಾರಗಳೂ ನಮ್ಮ ಸಮಜಕ್ಕೆ ಯಾವುದೇರಿತಿಯ ಅನುಕೂಲತೆಗಳನ್ನು ಮಾಡದೇ ವಂಚನೆಮಾಡಿದ್ದಾರೆ.  ಇವರು ಕೇವಲ ನಮ್ಮನ್ನು ಓಟಬ್ಯಾಂಕ ಎಂದು ಪರಿಗಣಿಸಿ ಚುನಾವಣೆ ಬಂದ ಸಮಯದಲ್ಲಿ ಸುಳ್ಳು ಬರವಸೆಗಳನ್ನು ಕೊಡುತ್ತಾ ನಮಗೆ ನಮ್ಮ ಸಮಾಜಕ್ಕೆ ಮೋಸವೆಸಗಿದ್ದಾರೆ ಆದ್ದರಿಂದ ಅಭಿವೃದ್ದಿಯ ಹರಿಕಾರರಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಮತ್ತು ಮಾನ್ಯ ಮುಖ್ಯಮಂತ್ರಿಗಳಾದಂತ ಡಿ.ವಿ.ಸದಾನಂದಗೌಡರ ಕೈ ಬಲಪಡಿಸಲು ಮತ್ತು ನಮ್ಮ ಪರಿಸಿಷ್ಟಜಾತಿಯ ಮತ್ತು ಪರಿಸಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಸಮಾಜಕ್ಕೆ ಅನೂಕೂಲ ಮಾಡಿಕೊಡಲು ಬಿಜೆಪಿಯ ಅಭ್ಯರ್ಥಿಯಾದ    ಕರಡಿ ಸಂಗಣ್ಣ ನವರಿಗೆ ಕಮಲದ ಗುರ್ತಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕಿ ಪ್ರಚಂಡ ಭಹುಮತದಿಂದ ಆರಿಸಿತರುವಂತೆ ಬೇಲ್ದಾರ ಕಾಲೂನಿ ಮತ್ತು ಅಂಬೇಡ್ಕರ ನಗರದಲ್ಲಿ ಅಂಬೇಡ್ಕರ ಭಾವ ಚಿತ್ರಕ್ಕೆ ಮಾಲಾಪ್ರಣೆ ಮಾಡುವ ಮುಖಾಂತರ ಬಿರುಸಿನ ಪ್ರಚಾರವನ್ನು ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಯಾದ ನಂದೀಶ, ನಗರಾಬಿವೃದ್ದಿ ಪ್ರಾಧೀಕಾರದ ಅಧ್ಯಕ್ಷರಾದ ಕಳಕಪ್ಪ ಜಾದವ್, ನಗರಸಭಾ ಸದಸ್ಯರಾದ ಹೇಮಂತ ತುಪ್ಪದ, ಜಾಪರಸಾಬ ಮತ್ತು ಮಲ್ಲಿಕಾರ್ಜುನ ಹಗೂ ಇನ್ನು ಅನೇಕ ಬಿಜೆಪಿ ಕಾರ್ಯಕತ್ರರು ಪ್ರಚಾರದಲ್ಲಿ ಭಾಗವಹಿಸಿದ್ದರೆಂದು ಪತ್ರಿಕಾ ಪ್ರಕಟಣೆ ಮೂಲಕ ಬಿ.ಜೆ.ಪಿ ವಕ್ತಾರರಾದ ಹಾಲೇಶ ತಿಳಿಸಿದ್ದಾರೆ.  
Please follow and like us:
error