ಅಂತರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಪುರಸ್ಕಾರ ಕಾರ್ಯಕ್ರಮ

ಕೊಪ್ಪಳ ಜಿಲ್ಲಾ ಕಾನ್ಫೆಡರೇಶನ್ ಆಫ್ ಇಂಡಸ್ಟ್ರೀ ಅಂಡ್ ಕಾಮರ್ಸ್ (ಕೆ.ಡಿ.ಸಿ.ಆಯ್.ಸಿ) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಮಹಿಳೆಯರನ್ನು ಮಹಿಳಾ ದಿನದ ಅಂಗವಾಗಿ (೦೮-೦೩-೨೦೧೩) ಆಯ್ಕೆ ಮಾಡಿ ಪುರಸ್ಕರಿಸಲು ಉದ್ದೇಶಿಸಿದೆ. ಸಾಹಿತ್ಯ-ಕಲೆ-ಸ್ವಯಂ ಉದ್ಯೋಗ ಸಮಾಜ ಸೇವೆ ಮತ್ತು ಶಿಕ್ಷಣ ರಂಗಗಳಲ್ಲಿ ಉತ್ತಮ ಸಾಧನೆಗೈದ ಜಿಲ್ಲೆಯ ಮಹಿಳೆಯರು ತಮ್ಮ ಸಾಧನೆಯ ವಿವರ ಈ ಹಿಂದೆ ಪಡೆದ ಪುರಸ್ಕಾರಗಲ ಜೊತೆ ವೈಯಕ್ತಿಕ ವಿವರ ಮತ್ತು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸಂಸ್ಥೆಯ ಕಛೇರಿಗೆ ದಿನಾಂಕ : ೨೦-೦೨-೨೦೧೩ ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ. 
ತೀರ್ಪುಗಾರರ ಆಯ್ಕೆ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ (ಕೆ.ಡಿ.ಸಿ.ಆಯ್.ಸಿ) ಸಿಂಡಿಕೇಟ್ ಬ್ಯಾಂಕ್ ಕೆಳಗೆ, ಕ್ಲಬ್ ರಸ್ತೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದು
ದೂರವಾಣಿ : ೦೮೫೩೯-೨೩೧೪೦೨
ಮೊಬೈಲ್ : ೯೯೧೬೧೩೬೨೯೪.
Please follow and like us:
error