ಜ.೫ ರಂದು ಜಿಲ್ಲಾ ಪಂಚಾಯತ್ ಕೆ.ಡಿ.ಪಿ ತ್ರೈಮಾಸಿಕ ಸಭೆ.

ಕೊಪ್ಪಳ, ಡಿ.೩೦ (ಕ ವಾ) ಕೊಪ್ಪಳ ಜಿಲ್ಲಾ ಪಂಚಾಯತ್‌ನ  ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ
ಸಭೆ ಜ.೦೫ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ
ಏರ್ಪಡಿಸಲಾಗಿದೆ.
     ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಶಿವರಾಜ್ ಎಸ್.ತಂಗಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಸಂಬಂಧಪಟ್ಟ
ಅನುಷ್ಠಾನಾಧಿಕಾರಿಗಳು ತಮ್ಮ ಇಲಾಖೆಯ ೨೦೧೫ರ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಭೌತಿಕ
ಗುರಿ ಮತ್ತು ಸಾಧನೆಗಳ ಪ್ರಗತಿ ವರದಿಗಳನ್ನು ಜ.೦೧ ರೊಳಗಾಗಿ ಜಿಲ್ಲಾ ಪಂಚಾಯತ್
ಕಾರ್ಯಾಲಯಕ್ಕೆ ಸಲ್ಲಿಸಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಮತ್ತು
ವೈಯಕ್ತಿಕ ಫಲಾನುಭವಿಗಳ ಪಟ್ಟಿ ಇದ್ದಲ್ಲಿ ಅದನ್ನು ಪ್ರತ್ಯೇಕವಾಗಿ ಸಲ್ಲಿಸಬೇಕು.
ಅಲ್ಲದೆ, ಎಲ್ಲ ವಿವರವಾದ ಮಾಹಿತಿಯೊಂದಿಗೆ ಸಮಯಕ್ಕೆ ಸರಿಯಾಗಿ ಸಭೆಗೆ ಖುದ್ದಾಗಿ
ಹಾಜರಾಗುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ತಿಳಿಸಿದ್ದಾರೆ. 

Related posts

Leave a Comment