ಹಳ್ಳಿಯಿಂದ ಡೆಲ್ಲಿಗೆ ದೆಹಲಿ ಕಾರ್ಯಾಗಾರದಲ್ಲಿ ಮಿಂಚಿದ ಕೊಪ್ಪಳದ ಅಂಗವಿಕಲ ಮಹಿಳೆ.

ಕೊಪ್ಪಳ -18- ಮನುಷ್ಯನಾದ ನಮಗೆ ಎಲ್ಲಾ ಆವಯವಗಳನ್ನು ಆ ದೇವರು ಕೊಟ್ಟರೂ ಅವುಗಳನ್ನು ಸಮರ್ಪಕವಾಗಿ
ನಾವು ಬಳಸದೆ ವಿನಾ ಕಾರಣ ಸಬೂಬುಗಳನ್ನು ಹೇಳಿ ಜಾಣ ಕುರುಡರಾಗುತ್ತಿದ್ದೇವೆ. ಆದರೆ
ಅಂಗವಿಕಲ ಮಹಿಳೆಯಾದರೂ ತಾನೂ ಯಾರಿಗೇನು ಕಮ್ಮಿ ಇಲ್ಲ  ಎಂಬಂತೆ ಅಭಿವೃದ್ದಿಯ ಪಥದಲ್ಲಿ
ಸಾಗಲು ತನ್ನ ನೆರೆಹೊರೆಯವರು ಮತ್ತು ಗ್ರಾಮದ ಸ್ವಸಹಾಯ ಸಂಘಗಳ ಮಹಿಳೆಯರಿಗೆ
ಇಲಾಖೆಗಳಲ್ಲಿ ಲಭ್ಯವಾಗುವ ಸೌಲಭ್ಯಗಳ ಕುರಿತ  ಸೂಕ್ತ ಸಲಹೆ-ಮಾರ್ಗದರ್ಶನ ಕೊಟ್ಟು
ದೆಹಲಿಯ ಕಾರ್ಯಾಗಾರದಲ್ಲಿ ಕೊಪ್ಪಳ ಜಿಲ್ಲೆಯ ಮೆರುಗನ್ನು ವ್ಯಕ್ತಪಡಿಸಿದ ಕೀರ್ತಿ
ಅಗಲಕೇರಾ ಪದ್ಮಾವತಿಯವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ
-ಸಂಜೀವಿನಿ ಯೊಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯನ್ನು ಇಂಟೆನ್ಸೀವ್ ಜಿಲ್ಲೆಯನ್ನಾಗಿ
ಆಯ್ಕೆಮಾಡಿಕೊಂಡಿದ್ದು ಜಿಲ್ಲೆಯ  ಗಂಗಾವತಿ ಮತ್ತು ಕೊಪ್ಪಳ ತಾಲ್ಲೂಕಿನ ೨೦  ಗ್ರಾಮ
ಪಂಚಾಯಿತಿಗಳನ್ನು ಕೇರಳ ರಾಜ್ಯದ ಪಂಚಾಯತ್ ರಾಜ್ ಮತ್ತು ಸಮುದಾಯಾಧಾರಿತ ಸಂಸ್ಥೆಗಳ
ಅಭಿವೃದ್ದಿಯ ಮಾದರಿಯಲ್ಲಿ ಅಭಿಗಮನ ಕಾರ್ಯ ಹಮ್ಮಿಕೊಂಡಿದ್ದು , ಇದರಡಿಯಲ್ಲಿ ಅಗಲಕೇರಾ
ಗ್ರಾಮ ಪಂಚಾಯಿತಿ ಪದ್ಮಾವತಿರವರನ್ನು ಇಡೀ ಕರ್ನಾಟಕ ರಾಜ್ಯದ ಪರವಾಗಿ ದೆಹಲಿಯಲ್ಲಿ ನಡೆದ
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಾಗಾರದಲ್ಲಿ  ಭಾಗವಹಿಸಲು
ಹಾಗೂ ಇಲ್ಲಿನ ಸ್ವಸಹಾಯ ಗುಂಪು ಮತ್ತು ಪಂಚಾಯತ್ರಾಜ್ ಸಂಸ್ಥೆಗಳ ಕುರಿತ ಮಾಹಿತಿ
ಹಂಚಿಕೊಳ್ಳಲು ಸಂಜೀವಿನಿ ಮತ್ತು ಕುಡುಂಬಶ್ರೀ ಯೋಜನೆಯ ಅಧಿಕಾರಿಗಳು ಆಯ್ಕೆಮಾಡಿದ್ದು
ಇದರಂತೆ ದೆಹಲಿಯ ಸಭೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆ.  ಈ
ಕುರಿತು ಪದ್ಮಾವತಿರವರು ಹೇಳುವಂತೆ ಸಂಜೀವಿನಿ ಯೋಜನೆ ನನಗೆ ದೆಹಲಿಯ ಸಭೆಗೆ ಆಯ್ಕೆ
ಮಾಡಿದ್ದಕ್ಕೆ ಮೊದಲು ಧನ್ಯವಾದಗಳು. ಈ ಯೋಜನೆ ನಮ್ಮ ಗ್ರಾಮಕ್ಕೆ ಬರುವುದಕ್ಕೆ ಮುಂಚೆ
ನಮ್ಮ ಗ್ರಾಮದಲ್ಲಿ ಯಾರೂ ಸಹ ವಾರ್ಡ್ -ಗ್ರಾಮ ಸಭೆಗಳಲ್ಲಿ ಭಾಗವಹಿಸುತ್ತಿರಲಿಲ್ಲ.
ಸರ್ಕಾರದ ಕಾರ್ಯಕ್ರಮಗಳ ಕುರಿತು ಅಷ್ಟೊಂದು ಮಾಹಿತಿ ಲಭ್ಯವಿರಲಿಲ್ಲ. ಸಮುದಾಯವೇ
ಸಮುದಾಯಕ್ಕೋಸ್ಕರ ಜವಬ್ದಾರಿ ಹೊರುವಂತಹ  ಮಹಿಳಾ ಸಂಘಗಳ ಒಕ್ಕೂಟಗಳನ್ನು ರಚನೆಮಾಡಿ
ಗ್ರಾಮ ಪಂಚಾಯತ್ ನೊಂದಿಗೆ ಉತ್ತಮ ಸಂಪರ್ಕ ಕಲ್ಪಿಸಿದ್ದು, ಈ ಯೋಜನೆ ಮತ್ತು ಎಲ್ಲಾ
ಸಿಬ್ಬಂದಿಗಳ  ಶ್ರಮ ನಿಜಕ್ಕೂ ಶ್ಲಾಘನೀಯ ಎಂದು ನೆನೆಸಿಕೊಳ್ಳುತ್ತರೆ. ಈ ದೆಹಲಿಯ
ಕಾರ್ಯಾಗಾರದಲ್ಲಿ ಭಾಗವಹಿಸಲು  ಸಹಕರಿಸಿದ ಸಂಜೀವಿನಿ- ಮತ್ತು ಕುಡುಂಬಶ್ರೀ ಯೋಜನೆಯ
ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಎಲ್ಲರಿಗೂ ಸಹ
ಧನ್ಯವಾದಗಳನ್ನು ತಿಳಿಸುತ್ತಾ ನಮ್ಮ ಗ್ರಾಮದ ಅಭಿವೃದ್ದಿಗೆ ಸ್ವಚ್ಚತೆ-ಆರೋಗ್ಯ
ಕಾಪಾಡಿಕೊಳ್ಳಲು ಹಾಗೂ ಅಭಿವೃದ್ದಿಗೆ ಶ್ರಮಿಸುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

Please follow and like us:
error