ನಾಡಿಗೆ ಟಿಪ್ಪು ಕೊಡುಗೆ ಅಪಾರ ಃ ಗೋನಾಳ

ಮಿಲ್ಲತ್ ಶಾಲೆಯಲ್ಲಿ ಟಿಪ್ಪು ಸುಲ್ತಾನ ಜಯಂತಿ ಆಚರಣೆ
ಕೊಪ್ಪಳ,ನ.೧೯: ಮೈಸೂರು ಹುಲಿ ಎಂದೆ ಖ್ಯಾತಿ ಪಡೆದಿದ್ದ ಟಿಪ್ಪು ಸುಲ್ತಾನ್ ಬ್ರಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದು ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಥಮ ಸೇನಾನಿಯಾಗಿದ್ದು ಅಪ್ಪಟ ದೇಶ ಪ್ರೇಮಿಯಾಗಿದ್ದ ಅವರು ಈ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಸಂಪಾದಕ ಜಿ.ಎಸ್.ಗೋನಾಳ ಹೇಳಿದರು.
ಅವರು ಗುರುವಾರ ನಗರದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಶಾಲೆಯಲ್ಲಿ ಏರ್ಪಡಿಸಿದ ಹಜರತ್ ಟಿಪ್ಪು ಸುಲ್ತಾನ್‌ರವರ ೨೬೩ ನೇ ಜಯಂತೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಟಿಪ್ಪು ಭಾವಚಿತ್ರಕ್ಕೆ ಮಾರ್ಲಾಪಣೆ ಮಾಡಿ ಗೌರವ ನಮನ ಸಲ್ಲಿಸಿ ಏರ್ಪಡಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡುತ್ತಾ ಟಿಪ್ಪು ಸುಲ್ತಾನ್‌ರವರು ಒಬ್ಬ ಮಹಾನ್ ನಾಯಕರಾಗಿದ್ದು, ಅವರು ಅಪ್ಪಟ ಕನ್ನಡ ಅಭಿಮಾನಿ ಕೂಡ ಆಗಿದ್ದರು. ಅವರ ಜೀವನ ಚರಿತ್ರೆ ಇಂದಿನ ಪೀಳಿಗೆಗೆ ಪರಿಚಯಿಸುವಂತ ಕೆಲಸ ಇಂತಹ ಜಯಂತಿ ಮೂಲಕ ನಡೆಯುತ್ತಿದೆ ಎಂದರು.
ಮುಂದುವರಿದು ಮಾತನಾಡುತ್ತಾ ಶಿಕ್ಷಣದಿಂದಲೇ ಇತರ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗಿದ್ದು ನಾವು ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡಬೇಕಾಗಿದೆ. ಟಿಪ್ಪು ಸುಲ್ತಾನ್‌ರವರ ಆದರ್ಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿದರೆ ಬದುಕು ಸಾರ್ಥಕವಾಗುತ್ತದೆ ಎಂದ ಅವರು ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಕೊಪ್ಪಳ ಜಿಲ್ಲಾ ವಾರ್ತಾ ಪತ್ರಿಕೆಯ ಸಂಪಾದಕ ಜಿ.ಎಸ್.ಗೋನಾಳ ಹೇಳಿದರು. 
ಮುಖ್ಯಅತಿಥಿಗಳಾಗಿ ಎಂದು ಸೈಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಮಾತನಾಡಿ ಟಿಪ್ಪು ಸುಲ್ತಾನರವರ ೨೬೩ ನೇ ಜಯಂತಿ ಆಚರಣೆಗೆ ಅರ್ಥ ಬರಬೇಕಾಗದರೆ ಮತ್ತು ಇದು ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು ಮತ್ತು ಮುಂಬರುವ ದಿನಗಳಲ್ಲಿ ಸರ್ಕಾರದಿಂದಲೇ ಟಿಪ್ಪು ಜಯಂತಿ ಆಚರಣೆ ನಡೆಯಬೇಕು ಎಂದು ಎಂದು  ಸೈಯದ್ ಫೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಹೇಳಿದರು.
ಇನ್ನೋರ್ವ ಮುಖ್ಯಅತಿಥಿ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ ಮಾತನಾಡಿ ಸ್ವಚ್ಛತಾ ಅಭಿಯಾನ ಮತ್ತು ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಏಕಕಾಲಕ್ಕೆ ಆರಂಭಿಸಿರುವ ಶಾಲೆಯ ಕ್ರಮ ಶ್ಲಾಘನೀಯವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಸಲಹೆಗಾರ ಎಂ.ಸಾದಿಕ್ ಅಲಿ ವಹಿಸಿದ್ದರು. 
ಈ ಸಂದರ್ಭದಲ್ಲಿ ವಾತ್ಸಲ್ಯ ಏಜೇನ್ಸಿಯ ವ್ಯವಸ್ಥಾಪಕ ಹನುಮಂತಪ್ಪ, ಸದಸ್ಯ ಅಬ್ದುಲ್ ಅಜೀಜ, ಆಡಳಿತಾಧಿಕಾರಿ ಸೈಯದ್ ಯಜದಾನಿ ಪಾಷಾ ಖಾದ್ರಿ, ಶಾಲೆಯ ಮುಖ್ಯ ಶಿಕ್ಷಕಿ ನೈನಾಜ್ ಬೇಗಂ ಸೇರಿದಂತೆ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರೆ ಸಹಶಿಕ್ಷಕಿ ಅಹ್ಮದೀ ಬೇಗಂ ಸ್ವಾಗತಿಸಿದರೆ. ಸಹ ಶಿಕ್ಷಕ ನಾಸೀರ ಕಂಠಿ ಪ್ರಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕಿ ಪಾತೀಮಾ ಬೇಗಂ ಕಾರ್ಯಕ್ರಮ ನಿರೂಪಿಸಿದರೆ, ಇನ್ನೂರ್ವ ಶಿಕ್ಷಕ ರೂಬಿನಾ ಬೇಗಂ ಕೊನೆಯಲ್ಲಿ ವಂದಿಸಿದರು.

Leave a Reply