ಯಶಸ್ವಿ ೧೨ನೇ ವರ್ಷದ ಸಾಮೂಹಿಕ ವಿವಾಹ ಕಾರ‍್ಯಕ್ರಮ

ಕೊಪ್ಪಳ : ನಗರದ ಸರದಾರಗಲ್ಲಿಯ ಪಂಚ ಕಮೀಟಿಯವತಿಯಿಂದ  ಪ್ರತಿವರ್ಷ  ಗ್ಯಾರವಿ ಪ್ರಯುಕ್ತ  ಹಮ್ಮಿಕೊಳ್ಳಲಾಗುವ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಈ ವರ್ಷ ಆರು ಜೋಡಿಗಳು ನವಜೀವನಕ್ಕೆ ಕಾಲಿಟ್ಟವು . ಸತತ ೧೨ ವರ್ಷಗಳಿಂದ ಈ ಕಾರ್ಯಕ್ರಮವು ನಡೆದು ಬಂದಿದ್ದು ಈ ಸಲದ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಮಾತನಾಡಿ ಸಾಮೂಹಿಕ ಮದುವೆಯಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಈ ಮೂಲಕ ಬಡ ಕುಟುಂಬಗಳಿಗೆ ಸಮಾಜದಿಂದ ನೆರವು ನೀಡುವಂತಾಗುತ್ತದೆ ಎಂದರು. ಇನ್ನೊರ್ವ ಅತಿಥಿ ನಗರಸಭೆಯ ಮಾಜಿ ಸದಸ್ಯ ಕಾಟನ್ ಪಾಷಾ ಮಾತನಾಡಿ ಇಂದಿನ ದುಬಾರಿ ದಿನಗಳಲ್ಲಿ ಮದುವೆಯೆಂದರೆ ತಮಾಷೆ ಮಾತಲ್ಲ. ಖರ್ಚು ವೆಚ್ಚ ಗಳು ಅಧಿಕ. ಹೀಗಿರುವಾಗ ಸಮಾಜದ ಎಲ್ಲ ಜನ ಸೇರಿ ಅವಶ್ಯಕ ಇರುವಂತವರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ನೆರವಾಗಬೇಕಿದೆ ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶಹಾಬುದ್ದೀನ್‌ಸಾಬ ನೂರಬಾಷಾ ವಹಿಸಿಕೊಂಡಿದ್ದರು. ವೇದಿಕೆ ಮೇಲೆ ಎ.ಪಿ.ಮುಧೋಳ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಸಾಮೂಹಿಕ ವಿವಾಹ ಕಾರ‍್ಯಕ್ರಮಕ್ಕೆ ಸಹಾಯ ಮಾಡಿದ ದಾನಿ ಕೆ.ಎಂ.ಸಯ್ಯದ್ ರಿಗೆ ಸನ್ಮಾನಿಸಲಾಯಿತು. ಕಾರ‍್ಯಕ್ರಮಕ್ಕೆ ಸ್ವಾಗತ ಮತ್ತು ಪ್ರಾಸ್ತಾವಿಕವನ್ನು ಖಾಸಿಂ ಸರ್ದಾರ್ ಮಾಡಿದರೆ, ಗೌಸಸಾಬ ನೀರಲಗಿ ನಿರೂಪಣೆ ಮಾಡಿದರು. ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಷಾ ವಂದನಾರ್ಪಣೆ ಮಾಡಿದರು. ಗೌಸಸಾಬ ಸರ್ದಾರ್, ಖಾದರಸಾಬ ಕುದರಿಮೋತಿ,ಜಾಫರಸಾಬ ತಟ್ಟಿ, ಮೌಲಾಹುಸೇನ ಜಮೇದಾರ,ಇಸ್ಮಾಯಿಲಸಾಬ ಸಿದ್ನೆಕೊಪ್ಪ,ಮುಸ್ತಫಾ ಕುದರಿಮೋತಿ,ಸರ್ದಾರ್ ಗಲ್ಲಿ ನೌಜಾವಾನ್ ಕಮಿಟಿ ದೋಸ್ತ & ಪಾರ್ಟಿ ಬಳಗ, ಸೇರಿದಂತೆ ಸಮಾಜದ ಗಣ್ಯರು ಹಾಗು ಗುರು ಹಿರಿಯರು ಭಾಗವಹಿಸಿದ್ದರು. 
Please follow and like us:
error