ಕಲ್ಯಾಣ ಕರ್ನಾಟಕ ಸೇವಾರತ್ನ ಪ್ರಶಸ್ತಿಗೆ ಹನುಮಂತಪ್ಪ ಅಂಡಗಿ ಆಯ್ಕೆ

ಕೊಪ್ಪಳ : ಕಲ್ಯಾಣ ಕರ್ನಾಟಕ ಯುವ ಸೇನೆಯು ತನ್ನ ೪ ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ಸುಗ್ಗಿ ಸಂಭ್ರಮದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರನ್ನು ಕಲ್ಯಾಣ ಕರ್ನಾಟಕ ಸೇವಾರತ್ನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಯುವ ಸೇನೆಯ ರಾಜ್ಯಾಧ್ಯಕ್ಷರಾದ ಅಂಬರೀಷ ಬಿಲ್ಲವ್ ತಿಳಿಸಿದ್ದಾರೆ. 
ದಿನಾಂಕ ೧೧-೦೪-೨೦೧೫ ರಂದು ಶನಿವಾರ ಸಾಯಂಕಾಲ ೫:೦೦ ಗಂಟೆಗೆ ಯಾದಗಿರಿ ಜಿಲ್ಲೆಯ ಶಹಪೂರದ ಸಿ.ಪಿ.ಎಸ್. ಶಾಲಾ ಆವರಣದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಚರಬಸವೇಶ್ವರದ ಸಂಸ್ಥಾನ ಮಠದ ಪೂಜ್ಯ ಶ್ರೀ ವೇದಮೂರ್ತಿ ಬಸವಯ್ಯಸ್ವಾಮಿಗಳು ಸಾನಿಧ್ಯವಹಿಸುವರು. ನಿವೃತ್ತ ಪೊಲೀಸ ಮಹಾನಿರ್ದೇಶಕರಾದ ಶಂಕರ ಬಿದರಿ ಕಾರ್ಯಕ್ರಮ ಉದ್ಘಾಟಿಸುವರು. ಚಲನಚಿತ್ರ ನಟ ರಾಕಿಂಗ್‌ಸ್ಟಾರ್ ಯಶ್, ಹಾಸ್ಯನಟರಾದ ವೈಜನಾಥ ಬಿರಾದಾರ, ಮೈಕಲ್ ಮಧು, ಚಲನಚಿತ್ರ ನಟಿ ರೇಖಾದಾಸ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 
ಶಹಪೂರದ ಶಾಸಕರಾದ ಗುರು ಪಾಟೀಲ, ಮಾಜಿ ಸಚಿವರಾದ ರಾಜುಗೌಡ ನಾಯಕ, ಶಿವನಗೌಡ ನಾಯಕ, ಶರಣಬಸಪ್ಪ ದಶನಾಪೂರ, ಭೀಮರಾಯ ಗುಡಿ ಕಾಡಾ ಅಧಕ್ಷರಾದ ಮರಿಗೌಡ ಹುಲಕಲ್, ಕಲಬುರ್ಗಿ ಕಾಡಾ ಅಧ್ಯಕ್ಷರಾದ ಶ್ರೀನಿವಾಸರಡ್ಡಿ ಕಂದಕೂರ, ಜ್ಯೋತಿ ಬೆಳಗಿಸುವರು. ಕಲ್ಯಾಣ ಕರ್ನಾಟಕ ಯುವ ಸೇನೆಯ ರಾಜ್ಯಾಧ್ಯಕ್ಷರಾದ ಅಂಬರೀಷ ಬಿಲ್ಲವ್ ಅಧ್ಯಕ್ಷತೆ ವಹಿಸುವರು. 

Leave a Reply