ಜೈವಿಕ ಇಂಧನದ ಮಹತ್ವ ಕುರಿತು ಜನ ಜಾಗೃತಿ ಅಗತ್ಯ

  ಭವಿಷ್ಯತ್ತಿನ ಪರ್ಯಾಯ ಇಂಧನವಾದ ಜೈವಿಕ ಇಂಧನದ ಸದ್ಬಬಳಕೆ ಕುರಿತು ಎಲ್ಲೆಡೆ ಜಾಗೃತಿ ಅಗತ್ಯವಿದೆ ಎಂದು ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣ ಮುಖ್ಯಸ್ಥರಾದ ಪ್ರ್ರೊ. ಮೊಹ್ಮದ್ ಇಬ್ರಾಹಿಂ ರವರು ವಿಶೇಷ ಉಪನ್ಯಾಸ ನೀಡಿ ಅಭಿಪ್ರಾಯಪಟ್ಟರು.
ತಾಲೂಕಿನ ಆನೆಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಬೆಂಗಳೂರು, ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ, ಕೃಷಿ ಸಂಶೋಧನಾ ಕೆಂದ್ರ, ಗಂಗಾವತಿ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಕಾಯಕಯೋಗಿ ವಿದ್ಯಾವರ್ಧಕ ಟ್ರಸ್ಟ್ (ರಿ.) ಗಂಗಾವತಿ, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ), ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ”ವಿಶ್ವ ಜೈವಿಕ ಇಂಧನ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಜೈವಿಕ ಇಂಧನವು ಪರಿಸರಕ್ಕೆ ಪೂರಕವಾಗಿದ್ದು, ಇಂಧನದ ಸದ್ಬಳಕೆ ಹಾಗೂ ಅದರಿಂದಾಗುವ ಲಾಭಗಳ ಕುರಿತು ವಿವರಿಸಿದರು.
ತಾಲೂಕ ಪಂಚಾಯತಿ ಸದಸ್ಯೆ ರಾಜೇಶ್ವರಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಾಜೇಶ, ಕಾಯಕಯೋಗಿ ವಿದ್ಯಾವರ್ಧಕ ಟ್ರಸ್ಟ್‌ನ ಜೈವಿಕ ಇಂಧನ ಅಭಿವೃದ್ಧಿ ಯೋಜನಾ ವಿಭಾಗದ ವಿಶೇಷಾಧಿಕಾರಿ ಕೆ.ಎನ್. ಕೋರಿ ಈ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾ ಜ್ಯೆವಿಕ ಇಂಧನ ಮಾಹಿತಿ & ಪ್ರಾತ್ಯಕ್ಷಿಕೆ ಕೆಂದ್ರದ ಸಂಯೋಜಕರಾದ ಡಾ: ಆನಂದ ಎಸ್,ಆರ್ ರವರು ಜೈವಿಕ ಇಂಧನದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಕೆ.ಆಂಜನೇಯ, ಸ್ಥಳೀಯ ಮುಖಂಡರಾದ ವೆಂಕಟೇಶ,ಶ್ರೀನಿವಾಸ ರೆಡ್ಡಿ ಹಾಗೂ ಕಾಯಕಯೋಗಿ ವಿದ್ಯಾವರ್ಧಕ ಟ್ರಸ್ಟ್‌ನ ಕಾರ್ಯದರ್ಶಿ ಸಿ.ಎಂ. ಅಂಗಡಿ ಮತ್ತು ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಎಲ್.ವಿ.ಆರ್. ಪ್ರಸಾದ ಇತರರು ಉಪಸ್ಥಿತರಿದ್ದರು.
  ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯತಿ ಸದಸ್ಯೆ ವಿಜಯಲಕ್ಷ್ಮೀ ರಾಮಕೃಷ್ಣ ಜಾಥಾಗೆ ಚಾಲನೆ ನೀಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಜೈವಿಕ ಇಂಧನದ ಜಾಗೃತಿ ಕುರಿತು ಜಾಥಾದಲ್ಲಿ ಘೋಷಣೆ ಕೂಗಿದರು.  ಕೊನೆಯಲ್ಲಿ ಮಹೇಶ ಪಟ್ಟೇದ ವಂದಿಸಿದರು. ಶಾಲೆಯ ಶಿಕ್ಷಕರಾದ ಶಿವರೆಡ್ಡಿ ರವರು ಕಾರ್ಯಕಮ ನಿರೂಪಿಸಿದರು.

Leave a Reply