ಹೆಣ್ಣೊಂದು ಕಲಿತರೆ ಕರಾಟೆಯೊಂದು ತೆರೆದಂತೆ- ಪೃಥ್ವಿರಾಜ

ಕೊಪ್ಪಳ: ರಾಷ್ಟ್ರೀಯ ಮಾದ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಹೆಣ್ಣುಮಕ್ಕಳ ಆತ್ಮ ರಕ್ಷಣೆ ಕಲೆಯನ್ನು ಹಿರೇಸಿಂದೋಗಿ ಗ್ರಾಮದಲ್ಲಿ ಇಂದು ಕರಾಟೆ ಹಾಗೂ ಯೋಗ ತರಬೇತಿಯನ್ನು ನೀಡಲಾಯಿತು. ರಾಷ್ಟ್ರೀಯ ಯೋಗ ಪಟು ಬಸಮ್ಮ ಹಳ್ಳಿ ಅವರಿಯಿಂದ ವಿಶೇಷ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. 
ಇದೇ ಸಂದರ್ಭದಲ್ಲಿ ಮಾತನಾಡಿದ ಅಂತರಾಷ್ಟ್ರೀಯ ಕರಾಟೆ ಪಟು ಪೃಥ್ವಿರಾಜ  ವಿದ್ಯಾರ್ಥಿನಿಯರಲ್ಲಿ ಕರಾಟೆ ಕಲೆಯನ್ನು ಜೀವಂತವಾಗಿ ಉಳಿಸಲು ಹಾಗೂ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ವಿಶೇಷ ಮಾರ್ಸಲ್ ಆರ್ಟ್ ಕಲೆಗಳಾದ ಹ್ಯಾಡ್ಸ ಬ್ರೇಕಿಂಗ್ ಪಂಚ್, ಹ್ಯಾಡ್ಸ್ ಸ್ಟ್ರೋಕಿಂಗ್ ಪಂಚ್, ಹಾಗೂ ಹ್ಯಾಂಡ್ಸ್ ಕಟಿಂಗ್ ಪಂಚಗಳ ತರಬೇತಿ ನೀಡುವ ಮುಖಾಂತರ ವಿದ್ಯಾರ್ಥಿನಿಯರಲ್ಲಿ ಸ್ವತಂತ್ರವಾಗಿ ಆತ್ಮ ರಕ್ಷಣೆ ಕಲೆಯನ್ನು ಕರಗತ ಮಾಡಿಕೊಳ್ಳಿ ಎಂದು ವಿದ್ಯಾರ್ಥೀನಿಯರಿಗೆ ತಿಳಿಸಿಕೊಟ್ಟರು. 
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನ್ಯೂ ಸ್ಟಾರ್ ಕರಾಟೆ ಕ್ಲಬ್ ಸಂಸ್ಥೆಯ ರಾಜ್ಯಾಧ್ಯಕ್ಷ ರಾಘವೇಂದ್ರ ಅರಕೇರಿ, ಅಂತರಾಷ್ಟ್ರೀಯ ಕರಾಟೆ ಪಟು ಪೃಥ್ವಿರಾಜ, ರಾಷ್ಟ್ರೀಯ ಯೋಗಾ ಪಟು ಬಸಮ್ಮ ಹಳ್ಳಿ, ತಾಲೂಕಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ವಾಯ್ ಸುದರ್ಶನರಾವ್, ಮುಖ್ಯೋಪಾದ್ಯಾಯ ಸೋಮರಡ್ಡಿ, ದೈಹಿಕ ಶಿಕ್ಷಕ ಸಂಗಪ್ಪ ಗಾಣಿಗೇರ ಉಪಸ್ಥಿತರಿದ್ದರು. 
ಮಂಜುನಾಥ ಬೆಟಗೇರಿ ಸ್ವಾಗತಿಸಿದರು. ಇಮ್ರಾನ್ ಎಮ್. ಹೆಚ್. ಪುಸ್ಪಾರ್ಪಣೆ ಮಾಡಿದರು. ಆಸಿಫ್ ಅಲಿ ಬಿಸರಳ್ಳಿ ವಂದಿಸಿದರು. 

Leave a Reply