ಮಹರ್ಷಿ ವಾಲ್ಮೀಕಿ ಜಯಂತಿ.

ಕೊಪ್ಪಳ-27- ತಾಲ್ಲೂಕಿನ  ಮುದ್ದಾಬಳ್ಳಿ ಪ್ರಾಥಮಿಕ  ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ವಿನೂತನವಾಗಿ ಜರುಗಿತು,  ಎಸ್‌ಡಿಎಮ್‌ಸಿ ಅಧ್ಯಕ್ಷರಾದ ರಾಮನಗೌಡ ಪೋಲೀಸ್‌ಪಾಟೀಲ್‌ರವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು , ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮುಖ್ಯೋಪಾದ್ಯಾಯರಾದ ಚಂದ್ರಶೇಖರ ಹತ್ತಿಕಟಿಗಿ ಮಾತಾನಾಡುತ್ತ ವಾಲ್ಮೀಕಿಯ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಎಂದು ಹೇಳಿದರು, ಶಿಕ್ಷಕಿ ಕವಿತಾ ಕಟ್ಟಿಮನಿ ವಾಲ್ಮೀಕಿಯ ಜೀವನ ಚಿತ್ರಣವನ್ನು ಸವಿಸ್ತಾರವಾಗಿ ತಿಳಿಸಿದರು,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶರಣಗೌಡ ಪಾಟೀಲ್, ಶರಣಪ್ಪ ನಾಯಕ್,  ವಾಸಪ್ಪ ಮುದಿ, ಹನುಮಗೌಡ ನಾಗನಗೌಡ ಸಣ್ಣ ಹನುಮಪ್ಪ ಹುಳ್ಳಿ, ಗೋವಿಂದರಡ್ಡಿ ಮಾದಿನೂರ ಗ್ರಾ ಪಂ ಸದಸ್ಯರಾದ ಪ್ರಕಾಶ ಹಾಲವರ್ತಿ ನಾಗರಾಜ ಚುಕ್ಕನಕಲ್ಲು ಸಿದ್ಲಿಂಗಪ್ಪ ಚಕ್ರಸಾಲಿ ಸುವಳೆಪ್ಪ ಗೊರ್,ಶಾಲೆಯ ಶಿಕ್ಷಕರಾದ ನಾಗರತ್ನಮ್ಮ ,ರಾಮಣ್ಣ ವಿ, ,ಸತ್ಯಮ್ಮ ಮುದ್ದಿ, ರೇಖಾ ಪಾಟೀಲ್ ,ಉಪಸ್ಥಿತರಿದ್ದರು,
 ಕಾರ್ಯಕ್ರಮದ ಮೊದಲು ಶಿಕ್ಷಕರಾದ ಹನುಮಂತಪ್ಪ ಕೆ ಆರ್ ಸ್ವಾಗತಿಸಿದರು, ರೇಖಾ ಕುಲಕರ್ಣಿ ನಿರೂಪಿಸಿದರು, ಕೊನೆಯಲ್ಲಿ ವೀರೇಂದ್ರ ಪತ್ತಾರ ವಂದಿಸಿದರು,                 
Please follow and like us:
error