ಸ್ಕೌಟಿಂಗ್ ಸಮಗ್ರ ಭಾರತ ನಿರ್ಮಾಣಕ್ಕೆ ಸ್ಪೂರ್ತಿ-ಸಿದ್ದರಾಮಸ್ವಾಮಿ

ಕೊಪ್ಪಳ, ಮಾ. ೧೪. ಭಾರತ ಸ್ಕೌಟಿಂಗ್ ಮತ್ತು ಗೈಡಿಂಗ್ ಸಮಗ್ರ ಭಾರತ ನಿರ್ಮಾಣಕ್ಕೆ ಸ್ಪೂರ್ತಿಯಾಗಿದೆ ಎಂದು ಸ್ಕೌಟ್ಸ್ ಜಿಲ್ಲಾ ಆಯುಕ್ತ ಹೆಚ್. ಎಂ. ಸಿದ್ದರಾಮಸ್ವಾಮಿ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಯಲಮಗೇರಿ ಸ. ಹಿ. ಪಾಥಮಿಕ  ಶಾಲೆ ಆವರಣದಲ್ಲಿ ತಾಲೂಕ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ಸ್ಕೌಟರ್‍ಸ್ ಗೈಡರ್‍ಸ್ ರ್‍ಯಾಲಿ                      ಉದ್ದೇಶಿಸಿ ಮಾತನಾಡಿದರು.
ಕೇವಲ ಸಂಖ್ಯಾಬಲ ಶಕ್ತಿಯಲ್ಲ, ಉತ್ತಮ ಹಾಗೂ ಬುದ್ದಿವಂತರ ತಂಡ ಶಕ್ತಿಯುತವಾದದ್ದು. ಶಿಕ್ಷಕರು ರಾಷ್ಟ್ರದ ರಚನಾಕಾರರು ಆದ್ದರಿಂದ ಒಳ್ಳೆಯ ಕೆಲಸಗಳನ್ನು ಮಾಡಿ ಎಂದು ಕರೆ ನೀಡಿದರು. 
ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಲು ಸ್ಕೌಟಿಂಗ್ ಮತ್ತು ಗೈಡಿಂಗ್ ಬಲನೀಡುತ್ತದೆ, ಜಿಲ್ಲೆಯಲ್ಲಿ ಮುಂದಿನ ವರ್ಷ ಹೆಚ್ಚಿನ ಕಾರ್ಯಗಳನ್ನು ಮಾಡಬೇಕು ಎಂದರು.
ರ್‍ಯಾಲಿಯನ್ನು ಉದ್ಘಾಟಿಸಿದ ಗಂಗಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮಾತನಾಡಿ ಶಿಕ್ಷಣ ನಮ್ಮ ಎಲ್ಲಾ ಬೆಳವಣಿಗೆಗೆ ದಾರಿಯಾಗಿದೆ, ನಾವು ಶಿಕ್ಷಣ ರಂಗದಲ್ಲಿ ತುಂಬಾ ಹಿಂದೆ ಉಳಿದಿದ್ದೇವೆ  ಎಂದು ಮಕ್ಕಳ ಮನೋವಿಕಾಸಕ್ಕೆ ಸ್ಕೌಟ್ಸ್ ಉತ್ತಮವಾಗಿದೆ ಎಂದ ಅವರು ಪ್ರತಿಯೊಬ್ಬ ಸ್ಕೌಟ್ ಗೈಡ್ ವಿದ್ಯಾರ್ಥಿಯಲ್ಲಿ ಭಗತ್‌ಸಿಂಗ್, ಭೋಸ್, ಚನ್ನಮ್ಮ ಕಾಣಸಿಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ತಾಲೂಕ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಗೊಂಡಬಾಳ ಮಾತನಾಡಿ, ಬರುವ ಶೈಕ್ಷಣಿಕ ವರ್ಷದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಶಾಲೆಯಲ್ಲಿ ಸ್ಕೌಟ್ಸ ಮತ್ತು ಗೈಡ್ಸ್ ಘಟಕಗಳ ಸ್ಥಾಪನೆ ಮಾಡಬೇಕು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಶ್ರಮಿಸಬೇಕು. ವರ್ಷ  ಪೂರ್ತಿಯಾಗಿ ಬೆಳೆಯಬೇಕು ತಾಲೂಕಿನ ಸ್ಕೌಟ್ಸ್ ಗೈಡ್ಸ್ ಕಾರ್ಯಕ್ರಮಗಳಿಗೆ ತಾಲೂಕಾ ಸಂಸ್ಥೆಯಿಂದ ಸಹಾಯ ಸಹಕಾರ ನೀಡಲಾಗುವದು ಎಂದು ಹೇಳಿದ ಅವರು ಜಿಲ್ಲಾ ಸ್ಕೌಟಿಂಗ್ ಮತ್ತು ಗೈಡಿಂಗ್ ತರಬೇತಿ ಕೇಂದ್ರಕ್ಕೆ ಸರಕಾರ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷ ರಾಮಣ್ಣ ಚೌಡ್ಕಿ ಮಾತನಾಡಿದರು.
ಜಿಲ್ಲಾ ಸಂಘಟನಾ ಆಯುಕ್ತ ಜಯರಾಜ ಬೂಸದ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯೆ ಕಸ್ತೂರೆಮ್ಮ ಬಿ.ಟಿ. ಪಾಟೀಲ, ಜಿಲ್ಲಾ ತರಬೇತಿ ಆಯುಕ್ತ ಎ. ಯರಣ್ಣ, ಗ್ರಾ. ಪಂ. ಅಧ್ಯಕ್ಷೆ ಶಿವವ್ವ ಶೇಖರಪ್ಪ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎ.ಜಿ. ಶರಣಪ್ಪ, ಶಿಕ್ಷನ ಸಂಯೋಜಕ ಸೋಮಶೇಖರ ಹರ್ತಿ, ತಾಲೂಕ ಕಾರ್ಯದರ್ಶಿ ಎಂ. ಕೆ. ಹಿರೇಮಠ, ಹೇಮಚಂದ್ರಪ್ಪ ಸಂಗಟಿ, ವೀರಬಸಪ್ಪ ಶೆಟ್ರ, ಇರಕಲಗಡಾ ಸಹಿಪ್ರಾ ಶಾಲೆ ಮುಖ್ಯ ಗುರು ಭಾಗ್ಯ ಇತರರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ವಿಜಯಲಕ್ಷ್ಮೀ ಪ್ರಾರ್ಥನೆಯನ್ನು ಮಾಡಿದರು, ಶಿಕ್ಷಕಿ ಶಾರದಾ ಸ್ವಾಗತಿಸಿದರು, ಗೈಡ್ಸ್ ಶಿಕ್ಷಕಿ ಸರಸ್ವತಿ ವಂದಿಸಿದರು. ನಂತರ ಜಿಲ್ಲಾ ಸ್ಕೌಟ್ಸ್ ಪ್ರತಿನಿಧಿ ಪ್ರಹ್ಲಾದ ಬಡಿಗೇರ ಮತ್ತು ಸಹ ಕಾರ್ಯದರ್ಶಿ ಹೆಚ್. ಶರಣಪ್ಪ ನೇತೃತ್ವದಲ್ಲಿ ತಾಲೂಕಿನ ವಿವಿದೆಡೆಯಿಂದ ಆಗಮಿಸಿದ ಸ್ಕೌಟ್ಸ್, ಗೈಡ್ಸ್ ಮಕ್ಕಳು, ಶಿಕ್ಷಕ, ಶಿಕ್ಷಕಿಯರು ಗ್ರಾಮದಲ್ಲಿ ಆಕರ್ಷಕ ರ್‍ಯಾಲಿ ನಡೆಸಿದರು. 
Please follow and like us:
error