ಪ್ರೋ. ಚಂಪಾರವರಿಂದ ಸಮಾಲೋಚನಾ ಸಭೆ

ಪ್ರೋ. ಚಂಪಾರವರಿಂದ ಇಂದು ಪತ್ರಿಕಾಗೋಷ್ಠಿ ಹಾಗೂ ಆಜೀವ ಸದಸ್ಯರೊಂದಿಗೆ ಸಮಾಲೋಚನಾ ಸಭೆ.
ಕೊಪ್ಪಳ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿ ಹಾಗೂ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಪ್ರೋ. ಚಂದ್ರಶೇಖರ ಪಾಟೀಲ (ಚಂಪಾ)ರವರು ನಗರದಲ್ಲಿನ ಪ್ರೆಸ್ ಮೀಡಿಯಾ ಕ್ಲಬ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ದಿನಾಂಕ ೧೮-೦೪-೨೦೧೨ ರ ಬೆಳಿಗ್ಗೆ ೧೧:೩೦ ಹಾಗೂ ೧೨:೦೦ ಗಂಟೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವರು. ನಂತರ ೧೨:೩೦ ಕ್ಕೆ ನಗರದ ಡಾ||ಜ.ಚ.ನಿ. ಜನ್ಮಶತಾಬ್ಧಿ ಭವನ (ಡಾ||ಆರ್.ಎಂ.ಪಾಟೀಲರ ನಿವಾಸದಲ್ಲಿ) ಜಿಲ್ಲೆಯ ಆಜೀವ ಕ.ಸಾ.ಪ ಸದಸ್ಯರು ಹಾಗೂ ಕನ್ನಡ ಅಭಿಮಾನಿಗಳೊಂದಿಗೆ ಮುಕ್ತ ಸಮಾಲೋಚನೆ ಸಭೆ ಜರುಗಿಸುವರು 
ಈ ಸಭೆಯಲ್ಲಿ ಖ್ಯಾತ ಸಾಹಿತಿಗಳಾದ ಹರಿಪ್ರಿಯ, ಶಂಕರ ಹೂಗಾರ, ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ, ಡಾ||ಕೆ.ಬಿ.ಬ್ಯಾಳಿ, ಸಿ.ಎಚ್.ನಾರಿನಾಳ, ಜಿಲ್ಲೆಯ ಅನೇಕ ಹಿರಿಯರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ.
ಸಭೆಗೆ ಜಿಲ್ಲಾ ಕ.ಸಾ.ಪ ಅಭ್ಯರ್ಥಿ ವೀರಣ್ಣ ನಿಂಗೊಜಿ ಹಾಗೂ ಸಂಘಟಿಕರಾದ ಅಕ್ಬರ ಸಿ. ಕಾಲಿಮಿರ್ಚಿ ಸರ್ವರಿಗೂ ಸ್ವಾಗತ ಕೋರಿದ್ದಾರೆ.
Please follow and like us:
error