fbpx

ಯುವಕರು ಆರ್ಥಿಕವಾಗಿ ಸಬಲಿಕರಣಕ್ಕೆ ಅವರಿಗೆ ಕಾನೂನಿನ ಅರಿವು ಅವಶ್ಯ: ಎನ್. ಎಸ್. ಪಾಟೀಲ

ಯುವಕರು ಆರ್ಥಿಕವಾಗಿ ಸಬಲಿಕರಣವಾಗಬೇಕಾದರೆ ಅವರಿಗೆ ಕಾನೂನಿನ ಅರಿವು, ಸರ್ಕಾರದ ಯೋಜನಗಳ ಸಮಗ್ರ ಮಾಹಿತಿಯ ಜೋತೆಗೆ ಗ್ರಾಮೀಣ ಅಭಿವೃದ್ಧಿಯ ಕನಸನ್ನು ಯುವಕರು ಕಟ್ಟಿಕೊಂಡಾಗ ಮಾತ್ರ ಸಾಧ್ಯ ಎಂದು  ಕೊಪ್ಪಳದ ಯುವ ಸಬಲಿಕರಣ  ಹಾಗೂ ಸಹಾಯಕ ಕ್ರೀಡಾಧಿಕಾರಿ ಎನ್. ಎಸ್. ಪಾಟೀಲ ಹೇಳಿದರು.

ಅವರು ಇಂದು ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರು ಗ್ರಾಮದಲ್ಲಿ ನಡೆದ ಕೊಪ್ಪಳ ಜಿಲ್ಲಾಢಳಿತಹಾಗೂ ಜಿಲ್ಲಾ ಪಂಚಾಯತ್ ಹಾಗೂಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ಕೊಪ್ಪಳ ಮತ್ತು ಗ್ರಾಮ ಪಂಚಾಯತ್ ಕಾತರಕಿ-ಗುಡ್ಲಾನೂರು, ತಾಯಮ್ಮದೇವಿ ಭಜನಾ ಯುವಕ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೊಪ್ಪಳ ಜಿಲ್ಲಾ ಮಟ್ಟದ ಯುವ ಸಮ್ಮೇಳನ ಹಾಗೂ ಜಿಲ್ಲಾ ಯುವ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ. ಯುವಜ ಮತ್ತು ಕ್ರೀಡಾ ಇಲಾಖೆಯಲ್ಲಿರುವ ಯೋಜನೆಗಳ ಸದುಪಯೋಗವಾಗಲು ಯುವಕರ ಸಹಕಾರ ಅವಶ್ಯವಿದೆ. ಅರಣ್ಯ ಸಂರಕ್ಷಣೆ, ಸ್ಮಾರಕಗಳ ರಕ್ಷಣೆ ಸೇರಿದಂತೆ ಜವಳಿ ಮತ್ತು ಗುಡಿಕೈಗಾರಿಕೆಗಳು ಇಂದು ಜೀವಂತವಾಗಿರಲು ಯುವಕರು ಶ್ರಮಿಸಬೇಕು ಜೋತೆಗೆ ಇಲಾಖೆಯೊಂದಿಗೆ ಯುವಕರು ಕೈ ಜೋಡಿಸಿದಾಗ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಯುವಕರು ಹೆಚ್ಚಿನ ಜಾಗೃತಿ ವಹಿಸುವುದು ಅವಶ್ಯವಿದೆ. ಜೋತೆಗೆ ಇಂದಿನ ಯುವಕರು ದುಶ್ಚಟಗಳಿಂದ ದೂರ ಉಳಿದು ತಮ್ಮ ಉತ್ತಮ ಜೀವನ ನಡೆಸುವುದು ಕಷ್ಟವಾದ ಪರಸ್ಥಿತಿ ನಿರ್ಮಾಣವಾಗಿದೆ ಇದನ್ನು ಅರಿತು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗುವುದು ಅವಶ್ಯವಿದೆ ಎಂದು ಎನ್.ಎಸ್. ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗ್ರಾಮದ ಹಿರಿಯರು ಮತ್ತು ನಿವೃತ್ತ ಶಿಕ್ಷಕರಾದ ಚಂದ್ರಾಮಪ್ಪ ಕಣಗಾಲ ಮಾತನಾಡಿ ಇಂದಿನ ಯುವ ಪೀಳಿಗೆ ದೈಹಿಕ ಮತ್ತು ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತೀರುವು ಕಳವಳಕಾರಿಯಾದ ವಿಷಯ ಆದರೆ ಯುವಕರು ಯೋಗ, ವ್ಯಾಯಾಮ, ಮತ್ತು ಅಧ್ಯಾತ್ಮದಂತಹ ವಿಷಯಗಳಲ್ಲಿ ತೊಡಗಿಕೊಂಡು ತಮ್ಮ ಉದ್ದಾರವನ್ನು ತಾವು ಮಾಡಿಕೊಂಡರೆ ನಮ್ಮ ದೇಶದ ಉದ್ದಾರವಾಗುತ್ತದೆ ಇದರ ಕಡೆಗೆ ಯುವಕರು ವಾಲಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾತರಕಿ- ಗುಡ್ಲಾನೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ, ಸುಮತಿ ಹಿರೇಮಠ ಮಾತನಾಡಿ. ಇಂದು ಯುವ ಸಬಲಿಕರಣದ ಜೋತೆಗೆ ಮಹಿಳಾ ಸಬಲಿಕರಣ ಮತ್ತು ಮಹಿಳೆಗೆ ಮುಕ್ತವಾದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡುವುದು ಇಂದಿನ ಆಧುನಿಕ ಭಾರತದ ಭವಿಷ್ಯ ನಿರ್ಮಾಪಕರಾದ ಯುವಕರ ಮುಂದಿದೆ ಎಂದರು.
ಈ ಸಂದರ್ಭದಲ್ಲಿ  ತಾಯಮ್ಮದೇವಿ ಭಜನಾ ಯುವಕ ಮಂಡಳಿಗಳ ಅಧ್ಯಕ್ಷ ಜಗದಯ್ಯ ಸಾಲಿಮಠ, ಗ್ರಾಮದ ಹಿರಿಯರಾದ ಶಿವಪುತ್ರಪ್ಪ ತಳವಾರ, ಬಡಕಪ್ಪ ಮಾಸ್ತಾರ,ಸಿದ್ದನಗೌಡ ಹಿರೇಗೌಡ,   ಮುಖ್ಯೋಪಾಧ್ಯಾಯ ವಾಸುದೇವ ಕುಲಕರ್ಣಿ, ಎಚ್.ಎಚ್.ಜಂತ್ಲಿ, ಪತ್ರಕರ್ತ ಬಸವರಾಜ ಗುಡ್ಲಾನೂರು, ಗೀ ಗೀ ಪದಗಳ ಹಾಡುಗಾರ ವೀರಣ್ಣ ಅಡವಿ ಸೊಂಪೂರ, ಗೌಸುಸಾಬ್, ಸೇರಿದಂತೆ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಅಕ್ಷತಾ ಸಂಘಡಿಗರು ಪ್ರಾರ್ಥನೆ ಮಾಡಿದರೆ. ಜಗದಯ್ಯ ಸಾಲಿಮಠ ಸ್ವಾಗತಿಸಿ ನಿರೂಪಿಸಿ ವಂಧಿಸಿದರು.
Please follow and like us:
error

Leave a Reply

error: Content is protected !!