ಅಭಿನಂದನಾ ಗ್ರಂಥಕ್ಕೆ ಲೇಖನ ಆಹ್ವಾನ

ಕೊಪ್ಪಳ :  ನ. ರಾಜ್ಯ ಪಂಚಮಶಾಲಿ ಸಮಾಜದ ಸಂಸ್ಥಾಪಕ ಅಧ್ಯಕ್ಷರು, ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ನಿವೃತ್ತ  ಮುಖ್ಯೋಪಾಧ್ಯಾಯರಾದ ಬಿ.ಎಂ. ಹನುಮನಾಳ, ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಎಂ.ಎಸ್.ಸೌದತ್ತಿ ಹಾಗೂ ಸಾಹಿತಿಗಳು, ಸಂಶೋಧಕರಾಗಿದ್ದ ಬಿ.ಸಿ.ಪಾಟೀಲ ಈ ಮೂವರ ಕುರಿತು ಪ್ರತ್ಯೇಕವಾಗಿ ಅಭಿನಂದನಾ ಗ್ರಂಥಗಳನ್ನು ಹೊರ ತರಲು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಿರ್ಧರಿಸಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಬಿ.ಎಂ.ಹನುಮನಾಳ, ಎಂ.ಎಸ್ ಸೌದತ್ತಿ, ಬಿ.ಸಿ. ಪಾಟೀಲರ ಶಿಷ್ಯರು, ಅವರ ಒಡನಾಡಿಗಳು, ಸಾಹಿತಿಗಳು,  ಸಂಶೋಧಕರು ಈ ಮೂವರ ಕುರಿತು ಲೇಖನಗಳನ್ನು ಮತ್ತು ಈ ಮೂವರ ಅಪರೂಪದ ಭಾವಚಿತ್ರಗಳನ್ನು ನವ್ಹಂಬರ ೨೫ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ  ಸಂಖ್ಯೆ-೩೦ ಕೊಪ್ಪಳ-೫೮೩೨೩೧ ಸನಿಹವಾಣಿ: ೯೦೦೮೯೪೪೨೯೦. 

Leave a Reply