You are here
Home > Koppal News > ಸಮುದ್ರದ ನೀರಿನಿಂದ ಉಪ್ಪನ್ನು ತಗೆದ ಭಾರತದ ಪ್ರಥಮ ವಿಜ್ಞಾನಿ ಭಗಿರಥ ಮಹರ್ಷಿ: ಡಾ. ಬಿ.ಎಸ್. ಹನಸಿ.

ಸಮುದ್ರದ ನೀರಿನಿಂದ ಉಪ್ಪನ್ನು ತಗೆದ ಭಾರತದ ಪ್ರಥಮ ವಿಜ್ಞಾನಿ ಭಗಿರಥ ಮಹರ್ಷಿ: ಡಾ. ಬಿ.ಎಸ್. ಹನಸಿ.

ಏ: ೨೫ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಕಾನೂನು ಮಹಾವಿದ್ಯಾಲಯ ಹಾಗು ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲ್ಲಿ ಭಗಿರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಆಚರಣೆಯ  ಪ್ರಯುಕ್ತ  ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ.ಎಸ್. ಹನಸಿ. ಮಾತನಾಡುತ್ತಾ ಸಮುದ್ರದ ನೀರಿನಿಂದ ಉಪ್ಪನ್ನು ತಗೆದ ಪ್ರಥಮ ವಿಜ್ಞಾನಿ ಎಂದು  ಹೇಳಿದರು ಅಷ್ಟೇ ಅಲ್ಲದೆ ಇವರು ಉಪ್ಪಿನ ರಾಷ್ಟೀಕರಣದಿಂದ ಸಾಕಷ್ಟು ತುಳಿತಕ್ಕೆ ಒಳಗಾಗಿದ್ದಾರೆ ಆದ್ದರಿಂದ  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸರ್ಕಾರಿ ಸೌಲಬ್ಯಗಳು ಉಪ್ಪಾರ ಜಾತಿಗೆ ಸಿಗಲಿ ಎಂದು ಹೇಳಿದರು . ಹಿರಿಯ ಉಪನ್ಯಾಸಕರಾದ ಶ್ರೀ ಕೆ.ನಾಗಬಸಯ್ಯ ಮಾತನಾಡುತ್ತಾ ಈ ರೀತಿಯ ದಿನಾಚರಣೆಗಳನ್ನು ಆಚರಿಸುವುದರಿಂದ ಮಹಾಪುರುಷರ ಜೀವನದ ಬಗ್ಗೆ ಅರಿವು ಮೋಡುತ್ತದೆ ಎಂದು ಹೇಳಿದರು. ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿಯಾದ ಶ್ರೀಮತಿ ಉಷಾದೇವಿ ಹೀರೆಮಠ ಮಾತಾನಾಡಿ ಗಂಗೆಯನ್ನು ಭಗಿರಥ ತನ್ನ ಪ್ರಯತ್ನದಿಂದ  ಭೂಮಿಗೆ  ತಂದ ಬಗ್ಗೆ ಪೌರಾಣಿಕ ಹಿನ್ನಲೆಯನ್ನ ಸವಿಸ್ತಾರವಾಗಿ ತಿಳಿಸಿದರು.. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಪ್ರಥಮ ವರ್ಷದ ವಿದ್ಯಾರ್ಥಿ ಬಸವರಾಜ ಮೇಲುಸಕ್ಕರಿ ಮಾತನಾಡಿದರು ಕಾರ್ಯಕ್ರಮದಲ್ಲಿ  ಕಾನೂನು ಸಂಘದ ಪ್ರವರ್ತಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಬಸವರಾಜ್ ಎಸ್.ಎಂ  ಹಾಗೂ ದೈಹಿಕ ನಿರ್ಧೇಶಕರಾದ ಬಸವರಾಜ ಅಳ್ಳಳ್ಳಿ  ಸಿಬ್ಬಂದಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Top