ಭಾನಾಪೂರದಲ್ಲಿ ರೂಢಿ ಪಾಠ.

ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ೨೦೧೪-೧೫ ನೇ ಸಾಲಿನ ದ್ವಿತೀಯ ಸೆಮಿಷ್ಟರನ ರೂಢಿ ಪಾಠ ಯೋಜನೆಯ ಮುಕ್ತಾಯ ಸಮಾರಂಭವು ಸರಕಾರಿ ಪ್ರೌಢ ಶಾಲೆ ಭಾನಾಪೂರದಲ್ಲಿ ಸೋಮುವಾರ ದಂದು ನಡೆಯಿತು ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಎನ್ ಶರಣಪ್ಪ ನವರು ವಹಿಸಿದ್ದರು, ಮುಖ್ಯ ಅಥಿಗಳಾಗಿ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ  ಡಾ, ಶ್ರಿಮತಿ ಎಸ್.ಎಸ್.ವೀರನಗೌಡರ ವಹಿಸಿದ್ದರು. ಪ್ರಾರ್ಥನೆಯನ್ನು ಪ್ರಶಿಕ್ಷಣಾರ್ಥಿಯಾದ ಬಸಮ್ಮ ಜವಳಿ ಮಾಡಿದರು, ಬಿ.ಬಿ.ಆಯುಷಾ ಸ್ವಾಗತಿಸಿದರು, ಗಾಯತ್ರಿ ಪುಪ್ಪಾರ್ಪಣೆ ನೆರವೇರಿಸಿದರು. ಸಲೀಮಾ ಬೇಗಂ ಬಹುಮಾನ ವಿತರಣಾ ಸಮಾರಂಭವನ್ನು ನಡೆಸಿದರು, ಪ್ರಶಿಕ್ಷಣಾರ್ಥಿಗಳಾದ ಹುಲಿಗೆವ್ವ, ರತ್ನವ್ವ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ಜ್ಯೋತಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು  ಪ್ರಶಿಕ್ಷಣಾರ್ಥಿಯಾದ ರಮೇಶ ನೆರವೇರಿಸಿ ಕೊಟ್ಟರು. ಈ ಸಮಾರಂಭದಲ್ಲಿ ಶಾಲೆಯ ಸಹ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.                   

Please follow and like us:
error