ತಳಬಾಳದಲ್ಲಿ ಕಲಬುರ್ಗಿ ಶ್ರೀ ಶರಣ ಬಸವೇಶ್ವರ ಪುರಾಣ ಮಹಾ ಮಂಗಲೊತ್ಸವ.

ಕೊಪ್ಪಳ-06- ಯಲಬುರ್ಗಾ ತಾಲೂಕಿನ ತಳಬಾಳ ಗಾಮದ ಶ್ರೀ ಬೀಮಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಮಹಿಮ ಬರಗಾಲ ಬಂಟ ಭವರೋಗ ವೈದ್ಯ ದಾಸೋಹ ಮೂರ್ತಿ ಕಲಬುರ್ಗಿ ಶ್ರೀ ಶರಣ ಬಸವೇಶ್ವರ ಪುರಾಣ ಮಹಾ ಮಂಗಲೊತ್ಸವ ಕಾರ್ಯಕ್ರಮವನ್ನು ದಿನಾಂಕ ೦೭-೦೯-೨೦೧೫ ರಂದು ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷದಂತೆ ಈ ವಷ್ವೂ ದಿನಾಂಕ ೧೫-೦೮-೨೦೧೫ ರಿಂದ ಪುರಾಣ ಪ್ರಾರಂಭವಾಗಿ ಒಂದು ತಿಂಗಳ ಪರ್ಯಂತ ವೈಭವದಿಂದ ಸಾಗುತ್ತಾ ದಿನನಿತ್ಯ ಗ್ರಾಮದಲ್ಲಿ ದಾಸೋಹ ಪ್ರಸಾದ ನಡೆಯುತ್ತಾ ಬಂದಿದೆ. ಇದೇ ದಿನಾಂಕ ೦೭-೦೯-೨೦೧೫ ರಂದು ಮಹಾ ಮಂಗಲ ಕಾಯ್ಕ್ರಮ ಹಮ್ಮಿಕೋಳ್ಳಲಾಗಿದೆ. ಇದೇ ಸಂಧರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು  ಹಮ್ಮಿಕೋಳ್ಳಲಾಗಿದೆ. ತದನಂತರ ಮಹಾಪ್ರಸಾದ ವಿತರಣೆ ನೆರವೇರುವುದು. ಸಾಯಂಕಲ ೬:೦೦ ಗಂಟೆಗೆ ಶ್ರೀ ಶರಣಬಸವೇಶ್ವರ ಹಾಗೂ ಶ್ರೀ ಬೀಮಲಿಂಗೇಶ್ವರ ರಥೋತ್ಸವ ನೆರವೇರುವುದು. ಕಾರಣ ಸುತ್ತಮುತ್ತಲಿನ ಗ್ರಾಂದ ಸದ್ಬಕ್ತರು ಆಗಮಿಸಿ ಸ್ವಾಮಿಯ ಸೇವಾ ಭಾಗ್ಯದೊಂದಿಗೆ ಧನ್ಯರಾಗಬೇಕೆಂದು ಪ್ರಕಟಣೆಯ ಮೂಲಕ ತಳಬಾಳ ಗ್ರಮಸ್ತರು ಕೋರಿದ್ದಾರೆ.
Please follow and like us:
error