ಶೀಘ್ರವೇ ಬೆಳವಿನಾಳ ಹತ್ತಿರ ಎ.ಪಿ.ಎಮ್.ಸಿ ಗೆ ಜಮೀನು ಖರೀದಿ- ಹನುಮರೆಡ್ಡಿ ಹಂಗನಕಟ್ಟಿ.

ಕೊಪ್ಪಳ-೦೧, ಕೊಪ್ಪಳದ ಎ.ಪಿ.ಎಮ್.ಸಿ ಯ ಕೊನೆಯ ೬ ತಿಂಗಳದ ಅವದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಹನುಮರೆಡ್ಡಿ ಹಂಗನಕಟ್ಟಿಯವರು ಇವರು ಅಲ್ಪವಧಿಯಲ್ಲಿಯೇ ಹತ್ತಿ, ಹಾಗೂ ತರಕಾರಿ ಮಾರುಕಟ್ಟೆಗೆ ಬೆಳವಿನಾಳ ಹತ್ತಿರ ೩೫ ಎಕರೆ ಜಮೀನನ್ನು ಖರೀದಿ ಮಾಡಲಾಗುವುದು. ಈಗಿರುವ ಟೆಂಡರ್ ಹಾಲ್‌ನ್ನು ತೆರವುಗೊಳಿಸಿ ನೂತನ ವಿನ್ಯಾಸದ ಟೆಂಡರ್ ಹಾಲ್ ನ್ನು ನಿರ್ಮಾಣ ಮಾಡಲಾಗುವುದು. ಕೊಪ್ಪಳ ಕ್ಷೇತ್ರದ ೯ ಗ್ರಾಮಗಳಲ್ಲಿ ಅಂದಾಜು ಮೊತ್ತ ರೂ.೪ ಕೋಟಿಗಳಲ್ಲಿ ಗೋದಾಮುಗಳ ನಿರ್ಮಾಣಮಾಡಲಾಗುವುದು. ಇರುವ ಅವದಿಯಲ್ಲಿಯೇ ನಿಷ್ಟೆಯಿಂದ ಸೇವೆಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭಲದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಬ್ಲಾಕ್ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲುಖಾದ್ರಿ, ಪಕ್ಷದ ಮುಖಂಡರಾದ ಶಾಂತಣ್ಣ ಮುದುಗಲ್, ಮಲ್ಲಪ್ಪ ಕವಲೂರು, ಅಪ್ಸರಸಾಬ್ ಅತ್ತಾರ, ಶ್ರೀಮತಿ ಇಂದಿರಾಭಾವಿ ಕಟ್ಟಿ, ಕಾಟನ್ ಪಾಷಾ, ಶಿವಾನಂದ ಹೂದ್ಲೂರು, ಎ.ಪಿ.ಎಮ್.ಸಿ ಯ ಉಪಾಧ್ಯಕ್ಷರಾದ ಮಾಯಪ್ಪ, ಸರ್ವಸದಸ್ಯರು, ವ್ಯಾಪಾರಿ ಗಣ್ಯರು ಉಪಸ್ಥಿತರಿದ್ದರು.

Related posts

Leave a Comment