ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ: ಪೂಜಾರ

 ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕೊಪ್ಪಳ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು.
 ನಗರದ ಗವಿಸಿದ್ದೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ವಲಯ ಮಟ್ಟದ ಕ್ರೀಡಾಕೂಟವನ್ನು ಗುಂಡು ಎಸೆಯುವುದರ ಮೂಲಕ  ಚಾಲನೆ ನೀಡಿ ಮಾತನಾಡಿ,ಕ್ರೀಡಾಕೂಟದಲ್ಲಿ ಭಾಗವಹಿಸು ಮಕ್ಕಳೆಲ್ಲರೂ ಕೂಡಾ ವಿಜೇತರಾಗಲು ಸಾಧ್ಯವಿಲ್ಲ.ಒಬ್ಬರೂ ಸೋಲಬೇಕು,ಮತ್ತೊಬ್ಬರೂ ಗೆಲ್ಲಬೇಕಾಗುತ್ತದೆ.ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಕ್ಕಳ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳಿದಂತೆ.ಸೋತ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ದೃತಿಗೆಡಬಾರದು ಅದು ಗೆಲುವಿನ ಮೆಟ್ಟಿಲಾಗಿದೆ.ಕ್ರೀಡಾಕೂಟದಲ್ಲಿ ಭಾಗವಹಸಿರುವ ತೀರ್ಪುಗಾರರು ಯಾವುದೇ ರೀತಿಯಲ್ಲಿ ಭೇದ-ಭಾವವನ್ನು ಮಾಡದೆ ಸಮರ್ಪಕವಾದ ರೀತಿಯಲ್ಲಿ ತೀರ್ಪು ನೀಡಬೇಕು.ಮಕ್ಕಳ ಮಸ್ಸಿಗೆ ನೋವು ಉಂಟುಮಾಡಬಾರದು ಎಂದು ಹೇಳಿದರು.
     ಸಿ.ಪಿ.ಎಸ್.ಶಾಲೆಯ ಮುಖ್ಯೋಪಾದ್ಯಾಯರಾದ ಭರಮಪ್ಪ ಕಟ್ಟಿಮನಿ ಮಾತನಾಡುತ್ತ,ಮಕ್ಕಳು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಅವರ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

  ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕ್ರೀಡಾಕೂಟದಲ್ಲಿ ಸಿ.ಆರ್.ಪಿ.ಗಳಾದ ವೆಂಕಟೇಶ ದೇಶಪಾಂಡೆ,ಪೂರ್ಣಿಮಾ,ದೈಹಿಕ ಶಿಕ್ಷಕರಾದ ಸಂಗಪ್ಪ ಅಂಗಡಿ,ವಿರುಪಾಕ್ಷಪ್ಪ ಬಾಗೋಡಿ,ಶೇಖಪ್ಪ ಮುದೋಳ,ಸಂಗನಗೌಡ ಪಾಟೀಲ,ನಾಗಪ್ಪ ನರಿ,ಗುರುರಾಜ ಕಟ್ಟಿ,ಬಸವರಾಜ ಕಮಲಾಪುರ ಮುಂತಾದವರು ಹಾಜರಿದ್ದರು. ದೈಹಿಕ ಶಿಕ್ಷಕರಾದ ಅಶೋಕ ಸ್ವಾಗತಿಸಿ,ಬಸವರಾಜಸ್ವಾಮಿ ವಂದಿಸಿದರು.

Please follow and like us:

Related posts

Leave a Comment