ಕಾಲಿಮಿರ್ಚಿ ಬಾಪು ಪಾಪು ಕೃತಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ

ಅಖಿಲ ಭಾರತ ಕನ್ನಡ ಪತ್ರಿಕಾ ಸಂಪಾದಕರ ಒಕ್ಕೂಟ ಹಾಗೂ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದ ಆಶ್ರಯದ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ಅಕ್ಬರ್ ಸಿ. ಕಾಲಿಮಿರ್ಚಿಗೆ ನೀಡಿ ಸನ್ಮಾನಿಸಲಾಯಿತು.

ನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಕಾಲಿಮಿರ್ಚಿರವರ ಬಾಪು ಪಾಪು ಮಕ್ಕಳ ಕವನ ಸಂಕಲನ್ನಕ್ಕೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಮೇಶ ಸುರ್ವೆ, ಜನರು ಮೆಚ್ಚಿಕೊಂಡು ಕೃತಿ ಖರೀದಿಸಿ ಓದಿದರೆ ಅದು ಅತ್ಯಂತ ದೊಡ್ಡ ಪ್ರಶಸ್ತಿ, ನಂತರ ಅದೇ ಕೃತಿಯನ್ನು ಪೂರ್ವಾಗ್ರಹ ಪೀಡಿತರಾಗದೇ ವಿಮರ್ಶಿಸಿ ಸಾಹಿತಿಗೆ ಗೌರವ ಸಿಕ್ಕರೆ ಅದೊಂದು ರೀತಿಯ ಪ್ರಶಸ್ತಿ, ಅವರೆಡನ್ನೂ ಬಿಟ್ಟರೆ ಒಂದು ಸಂಸ್ಥೆಯಾಗಿಯೂ ಕೃತಿಯನ್ನು ಮೆಚ್ಚಿ ನೀಡುವ ಪ್ರಶಸ್ತಿ, ಸಾಹಿತಿಯ ಕಾರ್ಯವನ್ನು ಶ್ಲಾಘಿಸುವ, ಗೌರವಿಸುವ ಕೆಲಸವಷ್ಠೇ, ಅದನ್ನು ಸಂಸ್ಥೆ ಪ್ರಾಮಾಣೀಕವಾಗಿ ಮಾಡುತ್ತಿದೆ. ನಮ್ಮ ಜಿಲ್ಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು, ಜಿಲ್ಲೆಯ ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು, ಅದಕ್ಕೆ ಅನೇಕರು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಕ್ಬರ ಕಾಲಿಮಿರ್ಚಿ, ಬದುಕನ್ನು ಸರಿದಾರಿಗೆ ಸಾಗಿಸಿಕೊಂಡು, ನೆಮ್ಮದಿಗಾಗಿ ಉತ್ತಮ ಜೀವನದ ಆಶಯಕ್ಕಾಗಿ ಓದುವದು ಬರೆಯುವದು ಮಾಡುವ ತಮ್ಮಂಥವರಿಗೆ ಪ್ರಶಸ್ತಿಗಳು ಸ್ವಲ್ಪ ಸಂಕೋಚ ತರಿಸುತ್ತವೆ, ಅದರ ಜೊತೆಗೆ ಭಯವನ್ನೂ ತರಿಸುತ್ತವೆ ಎಂದ ಅವರು, ಪ್ರಶಸ್ತಿಯ ಕೊಂಬಿನಿಂದ ಸಮಾಜಮುಖಿ ಬರವಣಿಗೆ ನಿಲ್ಲಬಾರದು ಮತ್ತು ದಾರಿ ತಪ್ಪಬಾರದು ಎಂದ ಅವರು, ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಆಭಾರಿಯಾಗಿರುವದಾಗಿಯೂ ಎಂದರು. ಒಕ್ಕೂಟದ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಸ್ವಾಗತಿಸಿ, ನಿರೂಪಿಸಿದರು, ಪತ್ರಕರ್ತ ಸಾಧಿಕ ಅಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಜಿ. ಎಸ್. ಗೋನಾಳ, ಹೆಚ್. ಎಸ್. ಹರೀಶ್, ರವಿಕುಮಾರ ನಾಯಕ, ಪವನಕುಮಾರ ದೇಶಪಾಂಡೆ, ಕಸಾಪ ಅಧ್ಯಕ್ಷ ಶಿ. ಕಾ. ಬಡಿಗೇರ, ಬದರಿನಾಥ ಪುರೋಹಿತ ಇತರರಿದ್ದರು.
Please follow and like us:
error