ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧ ಆಯ್ಕೆ

ಸಾದಿಕಅಲಿ ಅಧ್ಯಕ್ಷ, ಹಳ್ಳಿಕೇರಿ ಉಪಾಧ್ಯಕ್ಷ,ದೊಡ್ಡಮನಿ ಪ್ರ ಕಾರ್ಯದರ್ಶಿ, ಪವಾರ ಖಜಾಂಚಿಯಾಗಿ ಆಯ್ಕೆ
ಕೊಪ್ಪಳ,ನ.೧೫: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಚುನಾವಣೆ ೨೦೧೪-೧೭ ನೇ ಸಾಲಿನ ಅವಧಿಗಾಗಿ ನಡೆದ ಈ ಚುನಾವಣೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ಚರ್ಚಿಸಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿ ಸರ್ವಾನುಮತದಿಂದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ಅಂಗೀಕರಿಸಲಾಯಿತು. ೨೦೧೪-೧೭ ನೇ ಸಾಲಿನ ಅವಧಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಲೋಕದರ್ಶನ ಕನ್ನಡ ದಿನಪತ್ರಿಕೆ ಜಿಲ್ಲಾ ವರದಿಗಾರ ಎಂ. ಸಾದಿಕಅಲಿ, ಜಿಲ್ಲಾ ಉಪಾಧ್ಯಕ್ಷ(ನಗರ) ಘಟಕಕ್ಕೆ ಈ ನಮ್ಮ ಕನ್ನಡನಾಡು ಪತ್ರಿಕೆ ಜಿಲ್ಲಾವರದಿಗಾರ ಹನುಮಂತ ಹಳ್ಳಿಕೇರಿ, ಉಪಾಧ್ಯಕ್ಷ ಸ್ಥಾನಕ್ಕೆ ( ಗ್ರಾಮೀಣ) ಘಟಕಕ್ಕೆ ಈ ಲೋಕ ಪತ್ರಿಕೆಯ ಜಿಲ್ಲಾವರದಿಗಾರ ಬಸವರಾಜ್ ಗುಡ್ಲಾನೂರ, ರಾಜ್ ಟಿ.ವಿ. ಛಾಯಾಗ್ರಹಕ ಉಮೇಶ ಅಬ್ಬಿಗೇರಿ ಮತ್ತು ಅನ್ಮೋಲ್ ಟೈಮ್ಸ್ ದಿನಪತ್ರಿಕೆಯ ಉಪಸಂಪಾದಕ ನಾಗರಾಜ್ ಇಂಗಳಿಗಿ, ಅವಿರೋಧ ಆಯ್ಕೆ ಗೊಂಡಿದ್ದಾರೆ. 
ಅದರಂತೆ ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ಕೋಟೆ ಕದಂಬ ಪಾಕ್ಷಿಕ ಪತ್ರಿಕೆ ಸಂಪಾದಕ ಎನ್.ಎಂ.ದೊಡ್ಡಮನಿ, ಜಿಲ್ಲಾ ಕಾರ್ಯದರ್ಶಿ (ನಗರ ಘಟಕಕ್ಕೆ) ನಾಡನುಡಿ ಪತ್ರಿಕೆ ಜಿಲ್ಲಾವರದಿಗಾರ ವೀರಣ್ಣ ಕಳ್ಳಿಮನಿ ಮತ್ತು ಕೋಟೆ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ವೈ.ಬಿ.ಜೂಡಿ (ಗ್ರಾಮೀಣ ಘಟಕಕ್ಕೆ) ಹೊಸ ದಿಗಂತ ಪತ್ರಿಕೆ ಕುಷ್ಟಗಿ ತಾಲೂಕ ವರದಿಗಾರ ಬಸವರಾಜ್ ಪಲ್ಲೇದ್ ಮತ್ತು ಬಿ. ಟಿ.ವಿ. ವಾರ್ತೆ ಜಿಲ್ಲಾ ಪ್ರತಿನಿಧಿ ರವಿಕುಮಾರ ನಾಯಕ್ ಆಯ್ಕೆಗೊಂಡಿದ್ದಾರೆ. ಖಜಾಂಚಿ (ಜಿಲ್ಲಾ ಕೋಶಾಧ್ಯಕ್ಷರಾಗಿ) ಈಶಾನ್ಯ ಟೈಮ್ಸ್ ಪತ್ರಿಕೆ ಜಿಲ್ಲಾವರದಿಗಾರ ರಮೇಶ್ ಪವಾರ ಆಯ್ಕೆ ಗೊಂಡಿದ್ದಾರೆ. ಜಿಲ್ಲಾ ಕಾರ್ಯಾಕಾರಿಣಿ ಸಮಿತಿ ಸ್ಥಾನಕ್ಕೂ ೧೫ ಜನ ಪತ್ರಕರ್ತರು ಅವಿರೋಧ ಆಯ್ಕೆಗೊಂಡಿದ್ದಾರೆ ಎಂದು  ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಸೂಪರ್ ಟೈಮ್ಸ್ ದಿನಪತ್ರಿಕೆಯ ಜಿಲ್ಲಾವರದಿಗಾರ ಫಕೀರಪ್ಪ ಗೋಟೂರ್ ತಿಳಿಸಿದ್ದಾರೆ.

Leave a Reply