You are here
Home > Koppal News > ಹಜರತ್ ಟೀಪ್ಪು ಸುಲ್ತಾನ್‌ರವರ ೨೬೫ನೇ ಜಯಂತಿಗೆ ಶಾಸಕ ರಾಘವೇಂದ್ರ ಹಿಟ್ನಾಳರವರಿಂದ ಚಾಲನೆ

ಹಜರತ್ ಟೀಪ್ಪು ಸುಲ್ತಾನ್‌ರವರ ೨೬೫ನೇ ಜಯಂತಿಗೆ ಶಾಸಕ ರಾಘವೇಂದ್ರ ಹಿಟ್ನಾಳರವರಿಂದ ಚಾಲನೆ

ಕೊಪ್ಪಳ-೨೩, ಮಂಗಳವಾರ ಬೆಳೆಗ್ಗೆ ೧೦.೩೦ಕ್ಕೆ ಕೊಪ್ಪಳದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಟೀಪ್ಪು ಸುಲ್ತಾನ್ ರವರ ಜಯಂತಿಗೆ ಚಾಲನೆ ನೀಡಿ ಟೀಪ್ಪು ಸುಲ್ತಾನ್ ರವರು ರಾಷ್ಟ್ರಕಂಡ ಮಹಾನ್ ಸ್ವತಂತ್ರ್ಯ ಸೇನಾನಿಯಾಗಿದ್ದು, ಬ್ರೀಟಿಷರ ಅಜಾತಾ ಶತ್ರುಯಾಗಿದ್ದರು. ದೇಶದ ಸ್ವತಂತ್ರ್ಯಕ್ಕಾಗಿ ತಮ್ಮ ಮಕ್ಕಳನ್ನೆ ಒತ್ತೆಇಟ್ಟ ಅ-ಪ್ರತೀಮ ಉದಾಹರಣೆ ದೇಶದ ಇತಿಹಾಸದಲ್ಲೇ ಸೂವರ್ಣ ಅಕ್ಷರದಿಂದ ಬರೆದಿಡಲಾಗಿದೆ. ರಾಷ್ಟ್ರಕ್ಕಾಗಿ ಹೋರಾಡಿದ ವೀರ ನಾಯಕ ಟೀಪ್ಪು ಸುಲ್ತಾನ್. ಇವರ ಆದರ್ಶ ಜೀವನವನ್ನು ಹಾಗೂ ಇವರ ದೇಶ ಭಕ್ತಿಯನ್ನು ಪ್ರತಿಯೂಬ್ಬ ಭಾರತಿಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ಕೆ.ಎಮ್ ಸಯ್ಯದ್, ಸುರೇಶ ಬುಮರೆಡ್ಡಿ, ಅಮ್ಜದ್ ಪಟೇಲ್, ಅಮರೇಶ ಕರಡಿ, ಪಾಷಾ ಖಾಟನ್, ಮೌಲಾಹುಸ್ಸೇನ್ ಜಮೇದಾರ, ಚಂದ್ರಶೇಖರ ಕವಲೂರು, ಬಾಳಪ್ಪ ಬಾರಕೇರ, ವೀರಣ್ಣ ಸಂಡೂರು, ಶಿವಾನಂದ ಹೂದ್ಲೂರು, ಖಾಜಾವಲಿ ಬನ್ನಿಕೂಪ್ಪ, ಕತೀಬ್ ಬಾಷು, ಜೀಲಾನ್ ಮೈಲೈಕ್, ಅಬ್ದುಲ್ ಅಜೀಜ್, ಮಹಮ್ಮದ ಸಾಬ್ ಮಂಡಲಗೇರಿ, ಧಾರವಾಡ ರಫಿ, ಮೇಹಬುಬ ಅರಗಂಜಿ,ಇನ್ನೂ ಅನೇಕ ಮುಸ್ಲಿಂ ಸಮಾಜದ ಮುಖಂಡರು ಟೀಪ್ಪು ಸುಲ್ತಾನ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು. 

Leave a Reply

Top