ಹುಟ್ಟುಹಬ್ಬದ ನಿಮಿತ್ಯ ಬಾಲ್ಯೋತ್ಸವ ಕಾರ್ಯಕ್ರಮ

ನಾಳೆ ಅಕ್ಷರಳ ಹುಟ್ಟುಹಬ್ಬದ ನಿಮಿತ್ಯ ಬಾಲ್ಯೋತ್ಸವ ಕಾರ್ಯಕ್ರಮ
ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು
ಕೊಪ್ಪಳ, ಜ. ೨.  ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳರವರ ಮಗಳು ಅಕ್ಷರಳ ಒಂದನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಬಾಲ್ಯೋತ್ಸವ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜನೇವರಿ ೪ ರವಿವಾರದಂದು ನಡೆಯಲಿದೆ.
ಭಾಗ್ಯನಗರದ ಕಿನ್ನಾಳ ರಸ್ತೆ ಎಫ್‌ಸಿಐ ಗೋದಾಮು ಹಿಂದುಗಡೆ ಇರುವ ಗೊಂಡಬಾಳರ ಮನೆಯ ಆವರಣದಲ್ಲಿ ರವಿವಾರ ಬೆಳಿಗ್ಗೆ ೧೦-೩೦ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಲ್ಯೋತ್ಸವದಲ್ಲಿ ಆಯ್ದ ಕವಿಗಳಿಂದ ಮಗು-ಬಾಲ್ಯ ವಿಷಯ ಕುರಿತು ಕವಿಗೋಷ್ಠಿ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಸರಕಾರಿ ಬಾಲಕರ ಬಾಲಮಂದಿರ ಹಾಗೂ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನು ವಿತರಣೆ, ಮಕ್ಕಳಿಗೆ ಉಯಚಿತ ಆರೋಗ್ಯ ತಪಾಸಣಾ ಶಿಬಿರ, ಮಕ್ಕಳಿಗೆ ಹಾಗೂ ತಾಯಂದಿರ ಆರೈಕೆ ಕುರಿತು ತಜ್ಞವೈದ್ಯರು ಮಾಹಿತಿ ನೀಡುವರು, ಸ್ವಚ್ಛತಾ ಜಾಗೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ರಾಮಕೃಷ್ಣಾಶ್ರಮದ ಶ್ರೀ ಚೈತನ್ಯಾನಂದ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾಡುವರು, ಶಾಸಕ ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಇಕ್ಬಾಲ ಅನ್ಸಾರಿ, ದೊಡ್ಡನಗೌಡ ಪಾಟೀಲ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಜಿ. ಪಂ. ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾಹಿತಿಗಳು, ಹೋರಾಟಗಾರರು ಪಾಲ್ಗೊಳ್ಳುವರು.
ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಖ್ಯಾತ ಮಕ್ಕಳ ವೈದ್ಯರಾದ ಡಾ|| ಮಹೇಶ ಭಗವತಿ, ಡಾ|| ಸಿದ್ದರಾಮಯ್ಯ, ರೇಡಿಯೋಲಜಿಷ್ಟ್ ಡಾ|| ಅಶೋಕಕುಮಾರ ಗೊಂಡಬಾಳ, ಡಾ|| ಮನೋಹರ, ಡಾ|| ಎಸ್. ಕೆ. ರಾಜೂರ, ಡಾ|| ಶ್ರೀನಿವಾಸ ಹ್ಯಾಟಿ ಹಾಗೂ ಡಾ|| ಚಂದ್ರಶೇಖರರಡ್ಡಿ ಕರಮುಡಿ ಪಾಲ್ಗೊಳ್ಳುವರು ಆಸಕ್ತರು ತಮ್ಮ ಮಕ್ಕಳನ್ನು ತಪಾಸಣೆಗೆ ಕರೆದುಕೊಂಡು ಬರಲು ಸಂಘಟಕರು ಕೋರಿದ್ದಾರೆ.

Leave a Reply