fbpx

ರೈಲು ತಪ್ಪಿದ ನಂತರ ಪಶ್ಚಾತ್ತಾಪ

 
ಅರ್ದೆಂಧು ಭೂಷಣ ಬರ್ದನ್. ಈ ಹೆ

ಸರು ಕೇಳಿದವರಿಲ್ಲ. ಆದರೆ ಎ.ಬಿ.ಬರ್ದನ್ ಅಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಭಾರತದ ಕಮ್ಯುನಿಸ್ಟ್ ಚಳವಳಿಯ ಈ ಅಗ್ರಗಣ್ಯ ನೇತಾರನಿಗೆ ಈಗ ತೊಂಬತ್ತರ ಪ್ರಾಯ. ಜ್ಯೋತಿಬಸು, ಸುರ್ಜಿತ್ ನಿರ್ಗಮನದ ನಂತರ ಕುಸಿಯುತ್ತಿರುವ ಕೆಂಪು ಪರಿವಾರಕ್ಕೆ ಬರ್ದನ್ ಈಗ ಉಳಿದ ಏಕೈಕ ಯಜಮಾನ. ಕಾರಟ್, ಯೆಚೂರಿ, ಡಿ.ರಾಜಾ ಇವರೆಲ್ಲ ನಂತರದ ತಲೆಮಾರಿನವರು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಜನಿಸಿ, ಸ್ವತಂತ್ರ ಭಾರತದಲ್ಲಿ ರಾಷ್ಟ್ರ ನಾಯಕನಾಗಿ ಬೆಳೆದ ಬರ್ದನ್ ಈ ದೇಶದ ಎಲ್ಲ ಪ್ರಧಾನಮಂತ್ರಿಗಳನ್ನು ಹತ್ತಿರದಿಂದ ನೋಡಿದವರು. ಕೆಲವರೊಂದಿಗೆ ಒಡನಾಡಿದವರು. ಬಂಗಾಳಿ ಮೂಲದ ಬರ್ದನ್ ಹುಟ್ಟಿ ಬೆಳೆದದ್ದೆಲ್ಲ ಮಹಾರಾಷ್ಟ್ರದ ನಾಗಪುರದಲ್ಲಿ. ಈ ದೇಶದ ್ಯಾಸಿಸ್ಟ್ ಸಂಘಟನೆ ಆರೆಸ್ಸೆಸ್‌ನ ಕೇಂದ್ರ ಕಚೇರಿ ಇರುವುದು ನಾಗಪುರದಲ್ಲಿ. ಹಿಂದುತ್ವದ ಅಮಾನವೀಯ ಬೇಡಿ ಕಳಚಿ ಬಿಸಾಡಿ ಬೌದ್ಧಧರ್ಮದಲ್ಲಿ ಅಂಬೇಡ್ಕರ್ ವಿವೋಚನೆಯ ದಾರಿ ಕಂಡುಕೊಂಡದ್ದು ಇದೇ ನಾಗಪುರದಲ್ಲಿ. ಇಂಥ ನಗರದ ಸಿರಿವಂತ ಮನೆತನದಲ್ಲಿ ಜನಿಸಿದ ಬರ್ದನ್ ಉನ್ನತ ವ್ಯಾಸಂಗ ಮುಗಿಸಿ ಕೆಂಬಾವುಟ ಹಿಡಿದು ಹೋರಾಟದ ಸಾಗರಕ್ಕಿಳಿದ ವರು. ಇನ್ನೂ ಈಜುತ್ತಲೇ ಇದ್ದಾರೆ ಪ್ರವಾಹದ ಎದುರು.

ಇಂದ್ರಜಿತ ಗುಪ್ತ ನಂತರ ಬರ್ದನ್ ಭಾರತ ಕಮ್ಯುನಿಸ್ಟ್ ಪಕ್ಷದ ಸಾರಥ್ಯ ವಹಿಸಿಕೊಂಡಾಗ ರಷ್ಯದ ಕಮ್ಯುನಿಸ್ಟ್ ಕೋಟೆ ಕುಸಿದು ಬಿದ್ದಿತ್ತು. ಜಾಗತೀಕರಣ ಎಲ್ಲೆಡೆ ವಕ್ಕರಿಸಿತ್ತು. ಸಮಸಮಾಜದ ಕನಸು ಭಗ್ನಗೊಂಡಿತ್ತು. ಈ ಸನ್ನಿವೇಶದ ಸವಾಲು ಎದುರಿಸಲು ನೊಗಕ್ಕೆ ಹೆಗಲು ಕೊಟ್ಟ ಬರ್ದನ್ ಇನ್ನೂ ದಣಿದಂತೆ ಕಾಣುವುದಿಲ್ಲ. ನಾನು ಕಳೆದ ನಾಲ್ಕು ದಶಕಗಳಲ್ಲಿ ಅನೇಕ ಬಾರಿ ಅವರನ್ನು ಹತ್ತಿರದಿಂದ, ದೂರದಿಂದ ನೋಡಿದಾಗ ಕಂಡದ್ದು ಅದೇ ಉತ್ಸಾಹ ಜಿಗುಟತನ. ಆದರೆ ಬರೀ ಛಲವಿದ್ದರೆ ಸಾಲದು, ಬಲವಿರಬೇಕಲ್ಲ. ಅದೀಗ ಅವರಲ್ಲೂ ಇಲ್ಲ. ಪಕ್ಷದಲ್ಲೂ ಇಲ್ಲ. ಈ ದೇಶದ ಕಾರ್ಮಿಕ ಚಳವಳಿಗೆ ಅನೇಕ ಕಮ್ಯುನಿಸ್ಟರು ಜೀವ ತೇಯ್ದಂತೆ, ಬರ್ದನ್ ಕೂಡ ತಮ್ಮನ್ನು ಮೇಣದ ಬತ್ತಿಯಂತೆ ಉರಿಸಿಕೊಂಡಿದ್ದಾರೆ. ಅನೇಕ ಸಂಘಟನೆಗಳನ್ನು ಕಟ್ಟಿ ಬೆಳೆಸಿದ್ದಾರೆ. ದುಡಿಯುವ ಜನರ ಬದುಕಿಗೆ ಬೆಳಕು ನೀಡಿದ್ದಾರೆ. ಇಂಥ ಅನೇಕರನ್ನು ನಾನು ನೋಡಿದ್ದೇನೆ. ಕರ್ನಾಟಕದಲ್ಲಿ ಈಗ ನಮ್ಮ ನಡುವಿರುವ ಎಚ್.ವಿ.ಅನಂತಸುಬ್ಬಯ್ಯ ಇದೇ ರೀತಿ ತಮ್ಮನ್ನು ತಾವು ಸುಟ್ಟುಕೊಂಡು ಸಾರಿಗೆ ನೌಕರರ ಬದುಕಿನ ಕತ್ತಲನ್ನು ತೊಲಗಿಸಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ರಾತ್ರಿ ಮನೆಗೆ ಹೋಗದೆ ಎಐಟಿಯುಸಿ ಕಚೇರಿಯಲ್ಲೇ ಪತ್ರಿಕೆ ಜಮಖಾನ ಹಾಸಿಕೊಂಡು ಮಲಗುತ್ತಾರೆ. ಸಿಪಿಎಂ ನಾಯಕ ಸೂರಿ ಸಹ ಹೀಗೆ ಇದ್ದರು. ನಮ್ಮ ದೇಶದ ಸಂಘಟಿತ ಕಾರ್ಮಿಕ ವರ್ಗ ಕಮ್ಯುನಿಸ್ಟ್ ನಾಯಕರನ್ನು ಸಂಬಳ, ಬೋನಸ್ ಕೊಡಿಸುವ ಏಜೆಂಟರಂತೆ ಬಳಸಿಕೊಳ್ಳುತ್ತ ಬಂದಿದೆ. ದೇಶದ ರಾಜಕೀಯ ವಿದ್ಯಮಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಕಮ್ಯುನಿಸ್ಟ್ ನಾಯಕರ ಬದುಕೆಲ್ಲ ಕಾರ್ಮಿಕ ಇಲಾಖೆಯ ಕಚೇರಿಗಳಲ್ಲಿ ಕಳೆದು ಹೋಗುತ್ತಿದೆ. ಇದೇ ಕೆಲಸವನ್ನು ರೈತರು, ದಲಿತರು, ಅಲ್ಪಸಂಖ್ಯಾತರ ನಡುವೆ ಮಾಡಿದ್ದರೆ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಸ್ಥಿತಿ ಈಗಿನಂತಿರುತ್ತಿರಲಿಲ್ಲ. ಆದರೆ ಎಲ್ಲ ಕಾರ್ಮಿಕ ನಾಯಕರು ಬರ್ದನ್, ಅನಂತಸುಬ್ಬಯ್ಯ ಅವರಂತಿಲ್ಲ ಎಂಬುದು ಬೇರೆ ಮಾತು. ಇಂಥ ಕೆಲವರಿಂದ ಕೆಂಪು ಜ್ಯೋತಿ ಇನ್ನು ಉರಿಯುತ್ತಲೇ ಇದೆ. 90ರ ಈ ಇಳಿ ವಯಸ್ಸಿನಲ್ಲಿ ಬರ್ದನ್ ದಿಲ್ಲಿಯ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿ ಅಜಯ ಭವನದ ಒಂದು ಪುಟ್ಟ ಕೊಠಡಿಯಲ್ಲಿ ತಂಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಅವರು ಅಲ್ಲೇ ಉಳಿದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಮುಖ್ಯಸ್ಥರಿಗೆ ಸರಕಾರ ಅಲಾಟ್ ಮಾಡುವ ಐಷಾರಾಮಿ ಬಂಗಲೆ ಮಂಜೂರಾಗಿದ್ದರೂ ಬರ್ದನ್ ಅಲ್ಲಿ ಹೋಗಿಲ್ಲ. ಈಗ ಸಿಪಿಐನ ಏಕೈಕ ಬೌದ್ಧಿಕ ನಾಯಕ ಬರ್ದನ್. ನನಗೆ ತಿಳಿದ ಮಟ್ಟಿಗೆ ಆ ಎತ್ತರದ ಬೌದ್ಧಿಕ ನಾಯಕರ್ಯಾರೂ ಈಗಿಲ್ಲ. ಇಂಥ ಬರ್ದನ್‌ಗೆ ಈಗ ಪಶ್ಚಾತ್ತಾಪ ವಾಗಿದೆ. ಜ್ಯೋತಿ ಬಸು ಅವರನ್ನು ಪ್ರಧಾನಿ ಯನ್ನಾಗಿ ಮಾಡಲು ಪಕ್ಷ ಒಪ್ಪಿದ್ದರೆ ದೇಶ ಹೀಗಾಗುತ್ತಿರಲಿಲ್ಲ. ‘‘ಅದೊಂದು ಚಾರಿತ್ರಿಕ ಪ್ರಮಾದ’’ ಎಂಬ ಜ್ಯೋತಿಬಸು ಮಾತು ಸತ್ಯ ಎಂದು ಬರ್ದನ್ ಇತ್ತೀಚೆಗೆ ಒಪ್ಪಿಕೊಳ್ಳುತ್ತಾರೆ. ‘‘ಜ್ಯೋತಿ ಬಸು ಪ್ರಧಾನಿಯಾಗಿದ್ದರೆ ಜಾಗತೀಕರಣದ ಬಂಡವಾಳಶಾಹಿ ವ್ಯವಸ್ಥೆಯ ಚೌಕಟ್ಟಿನ ಇತಿಮಿತಿಯೊಳಗೆ ಕಮ್ಯುನಿಸ್ಟ್ ರಾಜಕೀಯ ಈಗಿರುವುದಕ್ಕಿಂತ ವಿಭಿನ್ನವಾಗಿರುತ್ತಿತ್ತು. ಈ ಅವಕಾಶ ಕಳೆದುಕೊಂಡೆವು ಎಂದು ಬರ್ದನ್ ಪೇಚಾಡುತ್ತಿದ್ದಾರೆ. ಜ್ಯೋತಿಬಸು ಅವರಿಗೆ ಪ್ರಧಾನಿಯಾಗುವ ಅವಕಾಶವನ್ನು ತಪ್ಪಿಸುವ ಮೂಲಕ ಸಿಪಿಎಂ ಪಾಲಿಟ್ ಬ್ಯೂರೊದ ತೀವ್ರವಾದಿಗಳು ಪಕ್ಷಕ್ಕೆ ದೊರೆತ ಅಪೂರ್ವ ಅವಕಾಶವನ್ನು ಕಳೆದುಕೊಂಡರು ಎಂದು ಹಿರಿಯ ಪತ್ರಕರ್ತ ಕುಲದೀಪ ನಯ್ಯರ್ ತಮ್ಮ ಆತ್ಮಚರಿತ್ರೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಪಾಲಿಟ್ ಬ್ಯೂರೊದ ಬಹುಪಾಲು ಸದಸ್ಯರ ಸಮಸ್ಯೆ ಏನೆಂದರೆ ಅವರಿಗೆ ಹೊರ ಜಗತ್ತಿನ ಸಂಪರ್ಕ ಬಹಳ ಕಡಿಮೆ. ಅವರಿನ್ನೂ 1990ರ ‘ಶೀತಲ ಸಮರ’ಕ್ಕೆ ಮುಂಚಿನ ಜಗತ್ತಿನಲ್ಲಿ ಬದುಕುತ್ತಿದ್ದಾರೆ ಎಂದು ಕುಲದೀಪ್ ಬರೆದಿದ್ದಾರೆ. ಜ್ಯೋತಿ ಬಸು ಪ್ರಧಾನಿಯಾಗು ವುದನ್ನು ತಪ್ಪಿಸಿದ್ದೊಂದೇ ಪ್ರಮಾದವಲ್ಲ. 2008 ರಲ್ಲಿ ಯುಪಿಎ- ಸರಕಾರಕ್ಕೆ ಬೆಂಬಲ ವಾಪಸು ಪಡೆದದ್ದು ನಮ್ಮ ಎರಡನೆ ತಪ್ಪು. ನಾವಿಲ್ಲದ ಈ ನಿರ್ವಾತ ಸ್ಥಿತಿಯಲ್ಲಿ ಬಲಪಂಥೀಯ ್ಯಾಸಿಸ್ಟ್ ಶಕ್ತಿಗಳು ಭಾರತದ ರಾಜಕಾರಣವನ್ನು ಆಕ್ರಮಿಸಿ ಕೊಂಡಿವೆ. ಸರ್ವಾಕಾರಿ ಯೊಬ್ಬನ ನೇತೃತ್ವದಲ್ಲಿ ಶಕ್ತಿ ಸಂಚಯ ಮಾಡಿಕೊಂಡಿವೆ. ಪರಮಾಣು ಒಪ್ಪಂದಕ್ಕೆ ಸಂಬಂಸಿದಂತೆ ಯುಪಿಎ- ಸರಕಾರಕ್ಕೆ ನಾವು ಬೆಂಬಲ ವಾಪಸು ಪಡೆದಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದು ಬರ್ದನ್ ವಿಷಾದಿಸುತ್ತಿದ್ದಾರೆ. ಆದರೆ ಈಗ ಪೇಚಾಡಿ ಪ್ರಯೋಜನವಿಲ್ಲ. ರೈಲು ಮುಂದೆ ಹೋಗಿದೆ. ಕೆಂಪುಸೇನೆ ಹಳೆಯ ನಿಲ್ದಾಣದಲ್ಲೆ ಉಳಿದಿದೆ. ಆರೆಸ್ಸೆಸ್ ಕೇಂದ್ರ ಸರಕಾರವನ್ನು ಸ್ವಾೀನ ಪಡಿಸಿಕೊಳ್ಳುವುದರೊಂದಿಗೆ ತನ್ನ ್ಯಾಸಿಸ್ಟ್ ಕಾರ್ಯಸೂಚಿಯನ್ನು ಜಾರಿಗೆ ತರತೊಡಗಿದೆ. ಬರಲಿರುವ ದಿನಗಳು ಕಮ್ಯುನಿಸ್ಟರಿಗೆ ಮಾತ್ರವಲ್ಲ ಪ್ರಜಾ ಪ್ರಭುತ್ವವಾದಿ ಗಳಿಗೆ, ಗಾಂವಾದಿಗಳಿಗೆ, ಲೋಹಿಯಾ, ಅಂಬೇಡ್ಕರ್‌ವಾದಿಗಳಿಗೆ ಶಾಂತಿಪ್ರಿಯರಿಗೆ ಅತ್ಯಂತ ಘೋರ ದಿನಗಳಾಗಿವೆ. ಎದುರಿಸಲು ಸಿದ್ಧರಾಗಬೇಕಾಗಿದೆಯಷ್ಟೇ!
 ಸಮಕಾಲೀನ ಸನ್ನಿವೇಶಕ್ಕೆ ತಕ್ಕಂತೆ ನೆಲಕ್ಕೆ ಕಾಲೂರಿ ಮುನ್ನಡೆದರೆ ಕಮ್ಯುನಿಸ್ಟರಿಗೆ ಇನ್ನೂ ಅವಕಾಶವಿದೆ. ಬರ್ಲಿನ್‌ನಲ್ಲಿ ಹಿಟ್ಲರ್‌ನ ನಾಝಿ ಪಡೆಯನ್ನು ಹಿಮ್ಮೆಟ್ಟಿಸಿದ ಕೆಂಪುಸೇನೆಗೆ ಕೇಸರಿ ಗ್ಯಾಂಗನ್ನು ಸೋಲಿಸು ವುದು ಅಸಾಧ್ಯವೇನಲ್ಲ. ಆದರೆ ಸ್ಟಾಲಿನ್, ರೂಸ್‌ವೆಲ್ಟ್ ಮತ್ತು ಚರ್ಚಿಲ್ ಜೊತೆ ಮಾಡಿಕೊಂಡ ತಾತ್ಕಾಲಿಕ ಹೊಂದಾಣಿಕೆಯಂತೆ ಇಲ್ಲೂ ಕೆಲ ಹೊಂದಾಣಿಕೆ ಮಾಡಿಕೊಳ್ಳಲು ಮನಸು ಮಾಡಬೇಕು. ಅದಕ್ಕೀಗ ಕಾಲ ಪಕ್ವವಾಗಿದೆ.
Please follow and like us:
error

Leave a Reply

error: Content is protected !!