ರಾಜಶೇಖರ ಅಂಗಡಿ ಗೆಲವು ಖಚಿತ.

ಕೊಪ್ಪಳ-27- ಕ್ರಿಯಾಶೀಲ ಮತ್ತು ಉತ್ಸಾಹಿ ತರುಣ, ಸಾಹಸಿ ಸಂಘಟಕ ರಾಜಶೇಖರ ಅಂಗಡಿಯವರು ಈ ಸಲ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತ ಎಂದು ಹಿರಿಯ ಸಾಹಿತಿಗಳಾದ ಡಾ. ವಿ.ಬಿ.ರಡ್ಡೇರ ಹೇಳಿದರು.
    ಅವರು ಶುಕ್ರವಾರ ಭಾಗ್ಯನಗರದಲ್ಲಿ ರಾಜಶೇಖರ ಅಂಗಡಿಯವರ  ಪರ  ಮತ ಯಾಚನೆ ಮಾಡಿ ಮಾತನಾಡಿದರು.
    ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡಿ, ರಾಜಶೇಖರ ಅಂಗಡಿಯವರು ಈ ಬಾರಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ಹೇಳಿದರು.
    ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರು ಮಾತನಾಡುತ್ತಾ, ರಾಜಶೇಖರ ಅಂಗಡಿಯವರು ಕಳೆದ ಸಲ ಕೇವಲ ಕೆಲವೇ ಮತಗಳ ಅಂತರರಿಂದ ಪರಾಭವಗೊಂಡಿದ್ದರು. ಈ ಸಲ ರಾಜಶೇಖರ ಅಂಗಡಿಯವರ ಪರವಾಗಿ ಅನುಕಂಪದ ಅಲೆಯಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುದಾನ ಇಲ್ಲದ ಸಂದರ್ಭದಲ್ಲಿ ತಮ್ಮ ಬಂಗಾರ ಅಡವಿಟ್ಟು ರಾಜಶೇಖರ ಅಂಗಡಿಯವರು ಕನ್ನಡಮ್ಮನ ಸೇವೆ ಮಾಡಿದ್ದಾರೆ. ಹೀಗಾಗಿ ಈ ಸಲ ರಾಜಶೇಖರ ಅಂಗಡಿಯವರಿಗೆ ಮತ್ತು ರಾಜ್ಯಕ್ಕೆ ಮನು ಬಳಿಗಾರ ಅವರಿಗೆ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
    ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಯಮನಪ್ಪ ಕಬ್ಬೇರ್, ವಾಣಿಜ್ಯೋಧಮಿಗಳಾದ ಶ್ರೀನಿವಾಸ ಗುಪ್ತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ,   ಶಿಕ್ಷಕರಾದ ಗಂಗಾಧರ ಕಾತರಕಿ,   ಕೋಟ್ರೇಶ ಕವಲೂರು, ಗಿರೀಶ ಪಾನಘಂಟಿ, ಸಾಹಿತಿಗಳಾದ ವೀರಣ್ಣ ಹುರಕಡ್ಲಿ, ಮಂಜುನಾಥ ಡೊಳ್ಳಿನ, ಸಂಘಟಕ ಮಂಜುನಾಥ ಅಂಗಡಿ, ಹಿರಿಯರಾದ ವೀರಣ್ಣ ನಂದ್ಯಾಲ, ಪ್ರಹ್ಲಾದ ಅಗಳಿ, ಶೇಖರಪ್ಪ ಶೆಡ್ಮಿ, ಡಾ|| ಕೊಟ್ರೇಶ ಶೇಡ್ಮಿ, ರವಿಕುಮಾರ ಬೆಟಗೇರಿ, ಯಮನಪ್ಪ ನರಗುಂದ, ಸರೋಜ ಬಾಕಳೆ, ಲಕ್ಷ್ಮಣಸಾ ದಲಬಂಜನ, ಗಂಗಾಧರ ನೆವಾರ್, ಸುಭಾಸ ಪುರದ,ಕೃಷ್ಣ ಇಟ್ಟಂಗಿ, ಮಂಜುನಾಥ ಗಡಾದ, ಪರಶುರಾಮ ಬಣ್ಣದ, ಲಕ್ಷ್ಮಣ ಸಾಲಮನಿ, ಕಾಲೇಶ ಲಕಮಾಪೂರ ಮುಂತಾದವರು ಉಪಸ್ಥಿತರಿದ್ದರು.

Please follow and like us:
error