ಅ.೨೬ ರಂದು ಕುದರಿಮೋತಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ.

ಯಲಬಯರ್ಗಾ-21- ಕೊಪ್ಪಳ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ, ಗ್ರಾಮ ಪಂಚಾಯತಿ ಕುದರಿಮೋತಿ, ಹುಬ್ಬಳ್ಳಿಯ ಖ್ಯಾತ ನೇತ್ರ ತಜ್ಞೆ ಡಾ. ವರ್ಷಾ ಅಶೋಕ ಪಟ್ಟಣಶೆಟ್ಟರ ಅವರ ಅಶೋಕ ಮಲ್ಟಿ ಸೂಪರ ಸ್ಪೆಷಾಲಿಟಿ ಆಸ್ಪತ್ರೆಯವರ ಸಂಯುಕ್ತಾಶ್ರಯದಲ್ಲಿ ದಸರಾ ಹಾಗೂ ಮೊಹರಂ ಹಬ್ಬದ ಅಂಗವಾಗಿ ಅ.೨೬ ರಂದು ತಾಲೂಕಿನ ಕುದರಿಮೋತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗಾಗಿ ಈ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೋಳ್ಳಬೇಕು.
ಬೆಳಗ್ಗೆ ೮ ರಿಂದ ಮಧ್ಹಾನ ೩ ಗಂಟೆಗೆವರೆಗೂ ಹೆಸರನ್ನು ನೊಂದಾಯಿಸಿಕೋಳ್ಳಲಾಗುವುದು. ಈ ಶಿಬಿರದಲ್ಲಿ ಪೊರೆ ಹೊಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಶಿಬಿರಾರ್ಥಿಗಳನ್ನು ಅ. ೨೭ ರಂದು ಹುಬ್ಬಳ್ಳಿಯ ವಿದ್ಯಾನಗರದ ಅಶೋಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ರಾಷ್ಟ್ರೀಯ ಸಾಸ್ಥ ಭೀಮಾ ಯೋಜನೆ ಹಾಗೂ ಸಹಕಾರ ಇಲಾಖೆಯಿಂದ ಯಶಸ್ವಿನಿ ಪ್ರಮಾಣ ಹೊಂದಿದರೆವರಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ (೯೮೪೫೦೩೪೯೧೭), ಗ್ರಾ. ಪಂ ಅಧ್ಯಕ್ಷ ಬಸವರಾಜ ಗಟ್ಟೆಪ್ಪನವರ (೯೯೧೬೫೮೫೦೯೯),
Please follow and like us:
error