ಸಹಕಾರ ಕ್ಷೇತ್ರದ ಬ್ಯಾಂಕ್‌ನ ಪ್ರಗತಿ ದೇಶದ ಉನ್ನತಿ

  ಕೊಪ್ಪಳ ಪಿಕಾರ್ಡ ಬ್ಯಾಂಕ್ ೪೯ ನೇ ವಾರ್ಷಿಕ ಮಹಾಸಭೆ ದಿ ಕ ೨೪ ರಂದು ಬ್ಯಾಂಕಿನ ಅಧ್ಯಕ್ಷರಾದ ಮಾರುತಿ. ಜಿ. ಅಂಗಡಿಯವರು ವಹಿಸಿದ್ದರು,. ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಕೊಪ್ಪಳ ಕ್ಷೇತ್ರದ ಜನಪ್ರೀಯ ಶಾಸಕರೂ ಆದ ಸನ್ಮಾನ್ಯ ಕರಡಿ ಸಂಗಣ್ಣನವರು ವಿಶೇಷ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಾನು ಶಾಸಕನಾಗುವ ಮೊದಲೇ ಈ ಬ್ಯಾಂಕಿನ ಒಬ್ಬ ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಈ ಅವಧಿ ನನ್ನ ರಾಜಕೀಯ ಜೀವನಕ್ಕೆ ನಾಂದಿಯಾಗಿ ಈಗ ಶಾಸಕನಾಗುವವರೆಗೆ ಆಶೀರ್ವದಿಸಿದೆ. ಇಲ್ಲಿ ನೆರೆದಿರುವ ಎಲ್ಲಾ ರೈತ ಬಾಧವರು ತಮ್ಮದೇ ಆದ ಈ ಬ್ಯಾಂಕನ್ನು ತಾವು ಪಡೆದಿರುವ ಸಾಲದ ಕಂತುಗಳನ್ನು ನಿಗದಿತ ಅವದಿಯೋಳಗೆ ಮರುಪಾವತಿಸಿ ಬ್ಯಾಂಕನ್ನು ಪ್ರಗತಿಯತ್ತ ಕೊಂಡಯ್ಯುಬೇಕೆಂದು ಸಲಹೆ ಮಾಡಿದರು. ಈ ಸಭೆಯಲ್ಲಿ ಗುರನಗೌಡ್ರ ಪಾಟೀಲ, ಮಾಜಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರು, ರಾಮಣ್ಣ ಹಳ್ಳಿಗುಡಿ, ಸಂಗನಗೌಡ ಪಾಟಿಲ್, ಸೋಮಪ್ಪ ಗೆಜ್ಜಿ ಎ.ಪಿ.ಎಂ.ಸಿ. ಉಪಾಧ್ಯಕ್ಷರಾದ ಜಯಪ್ಪ ತಿಗರಿ, ಬಸವರಡ್ಡಿ ಹಳ್ಳಿಕೇರಿ, ಬ್ಯಾಕಿನ ಆಡಳಿತ ಸದಸ್ಯರು ಹಾಗೂ ಬ್ಯಾಂಕಿನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ಥಾಪಕರಾದ ಜಿ. ಬಿ ಶಶಿಮಠ ವಂದನಾರ್ಪಣೆ ಮಾಡಿದರು. ಎಂದು ಪತ್ರಿಕಾ ಪ್ರಕಟಣೆಗೆ ವ್ಯವಸ್ಥಾಪಕರಾದ ಜಿ. ಬಿ ಶಶಿಮಠ ತಿಳಿಸಿದ್ದಾರೆ. ೯೯೦೧೧೩೫೪೨೪,

Leave a Reply