ಪಂಚಮಸಾಲಿ ಪೀಠಗಳ ಏಕತಾ ಸಮಾರಂಭ

ಕೊಪ್ಪಳ : ಜ.೨೪  ಶನಿವಾರದಂದು ಮದ್ಯಾಹ್ನ ೧೨ ಗಂಟೆಗೆ ಬಾಗಲಕೋಟೆ ಜಿಲ್ಲೆಯ ಮುದೋಳದ ವಿಜಯ ಇಂಟರ್‌ನ್ಯಾಷನ್ ಸ್ಕೂಲ್‌ನಲ್ಲಿ ರಾಜ್ಯದ ೮೦ ಲಕ್ಷದ ಜನರ ಆಸೆಯಂತೆ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಆಯೋಜಿಸಿರುವ ಪಂಚಮಸಾಲಿ ಜಗದ್ಗುರು ಪೀಠದ ಏಕತೆಗಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ೨೦೦೮. ಹರಿಹರ ಹಾಗೂ ಪಂಚಮಸಾಲಿ ಜಗದ್ಗುರು ಪೀಠ ಕೂಡಲಸಂಗಮ ಇವುಗಳ ಏಕತಾ ಸಮಾರಂಭವನ್ನು ಮುಧೋಳ ತಾಲೂಕ ವೀರಶೈವ ಪಂಚಮಸಾಲಿ ಸಂಘದ ಅತಿಥ್ಯದಲ್ಲಿ ಮತ್ತು ಮಾಜಿ ಮಂತ್ರಿಗಳಾದ ಮುರಗೇಶ ನಿರಾಣಿಯರ ಸಂಚಾಲಕತ್ವದಲ್ಲಿ ಏರ್ಪಡಿಸಲಾಗಿದೆ. 
ತಾಲೂಕ, ಜಿಲ್ಲಾ ಹಾಗೂ  ರಾಜ್ಯ ಸಮಿತಿಯ ಪದಾಧಿಕಾರಿಗಳು ಟ್ರಸ್ಟಿಗಳು ಹಾಗೂ ಮಹಿಳಾ ಮತ್ತು ನೌಕರರ, ಯುವಕರು, ಕೃಷಿಕರು, ವಕೀಲರು, ಹರೆಸೈನ ಪದಾಧಿಕಾರಿಗಳು, ಸಮಾಜದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘದ ಅಧ್ಯಕ್ಷರಾದ ಬಸವರಾಜ ದಿಂಡೂರು, ಪ್ರಧಾನ ಧರ್ಮದರ್ಶಿಗಳಾದ ಬಿ.ಸಿ ಉಮಾಪತಿ ಹಾಗೂ ಜಿಲ್ಲಾಧ್ಯಕ್ಷರಾದ ಕಳಕನಗೌಡ ಜಮ್ಮಾಪೂರ, ಜಿಲ್ಲಾ ಯುವ ಘಟಕ ಅಧ್ಯಕ್ಷ ದೇವರಾಜ ಹಾಲಸಮುದ್ರ, ತಾಲೂಕ ಅಧ್ಯಕ್ಷರಾದ ಕರಿಯಪ್ಪ ಮೇಟಿ ವಿನಂತಿಸಿದ್ದಾರೆ.   
Please follow and like us:
error

Related posts

Leave a Comment