ಆಕಾಶವಾಣಿಯಲ್ಲಿ ಹಾಡು ಕೋಗಿಲೆ ಕಾರ್ಯಕ್ರಮ.

ಕೊಪ್ಪಳ
ಸೆ. ೨೨ (ಕ ವಾ) ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಹಾಡು ಕೋಗಿಲೆ
ಕಾರ್‍ಯಕ್ರಮವನ್ನು   ಪ್ರಸಾರ ಮಾಡಲಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಸೂಚನೆ
ನೀಡಲಾಗಿದೆ.
     ಆಕಾಶವಾಣಿ ಕೇಂದ್ರವು ನಡೆಸುವ ಕಿರ್ಲೋಸ್ಕರ್ ಫೆರೆಸ್ ಹಾಡು
ಕೋಗಿಲೆ ಕಾರ್ಯಕ್ರಮಕ್ಕೆ ಶಾಸ್ತ್ರೀಯ ಸಂಗೀತ ಬಲ್ಲ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ
೩೦ ವರ್ಷದೊಳಗಿನವರು ಭಾಗವಹಿಸಬಹುದು. ಆಸಕ್ತರು ಆಕಾಶವಾಣಿಗೆ ಸೆಪ್ಟೆಂಬರ್ ೩೦ ರೊಳಗಾಗಿ
ನಿರ್ದೇಶಕರು, ಹಾಡುಕೋಗಿಲೆ ಕಾರ್‍ಯಕ್ರಮ, ಮಕ್ಕಳ ವಿಭಾಗ, ಆಕಾಶವಾಣಿ ಹೊಸಪೇಟೆ. ಈ
ವಿಳಾಸಕ್ಕೆ ಅರ್ಜಿ ಕಳುಹಿಸಬೇಕು ಎಂದು ಹೊಸಪೇಟೆ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ
ಡಾ||ಅನುರಾಧ ಕಟ್ಟಿ ತಿಳಿಸಿದ್ದಾರೆ.

Leave a Reply