ಆಕಾಶವಾಣಿಯಲ್ಲಿ ಸಂಸದ ಸಂಗಣ್ಣ ಕರಡಿ ಅವರ ಸಂದರ್ಶನ.

ಕೊಪ್ಪಳ ಆ. ೧೭ (ಕ
ವಾ): ಕೇಂದ್ರ ಸರಕಾರದ ಸ್ವಚ್ಛಭಾರತ ಅಭಿಯಾನ, ಜನ-ಧನ, ಸಾಮಾಜಿಕ ಸುರಕ್ಷಾ, ಡಿಜಿಟಲ್
ಇಂಡಿಯಾ, ಸುಕನ್ಯಾ ಸಮೃದ್ಧಿ, ಸಂಸದರ ಆದರ್ಶ ಗ್ರಾಮ ಮತ್ತು ಇತರ ಯೋಜನೆಗಳು ಭಾರತ
ಸರಕಾರದ ಸಾಧನೆಗಳು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ
ಕಾರ್ಯಗಳ ಕುರಿತು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಸಂದರ್ಶನವು ಇಂದು (ಮಂಗಳವಾರ-
ಅ.೧೮) ಬೆಳಿಗ್ಗೆ ೮.೫೫ ಕ್ಕೆ ಹೊಸಪೇಟೆ ಆಕಾಶವಾಣಿ ಎಫ್ ಎಂ. ಕೆಂದ್ರದಿಂದ
ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ೧೦೦.೫ ಮೇಗಾಹರ್ಟ್ಸ್ ಗಳಲ್ಲಿ ಕೇಳಬಹುದು ಎಂದು
ಹೊಸಪೇಟೆ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥೆ ಡಾ||ಅನುರಾಧ ಕಟ್ಟಿ ತಿಳಿಸಿದ್ದಾರೆ.
Please follow and like us:
error