ನಿರ್ಮಿತಿ ಕೇಂದ್ರದ ಹತ್ತಿರದ ಕಾಲೋನಿಯ ಜನರಿಗೆ ಕುಡಿಯುವ ನೀರು ಅರ್ಪಣೆ

 ಕೊಪ್ಪಳ ಮೇ, ೦೫: ನಗರದ ನಿರ್ಮಿತಿ ಕೇಂದ್ರದ ಹತ್ತಿರವಿರುವ ಬಂಡಿ ಹಮಾಲರ ಕಾಲೋನಿಯಲ್ಲಿ ನಗರಸಭೆಯ ತ್ವರಿತ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ  ಹೊಸದಾಗಿ ಬೋರವೆಲ್ ಕೊರೆಯಿಸಿ ಪೈಪ್‌ಲೈನಿನ ಮೂಖಾಂತರ ಕಾಲೋನಿಯ ಜನತೆಗೆ ನಲ್ಲಿಯಲ್ಲಿನ ನೀರು ತುಂಬುವದರ ಮುಖಾಂತರ ನಗರಸಭೆಯ ಅಧ್ಯಕ್ಷರಾದ ಸುರೇಶ ದೇಸಾಯಿ ಹಾಗೂ ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ಉದ್ಘಾಟನೆ ಮಾಡಿದರು. ಉದ್ಘಾಟನೆ ಮಾಡಿ ಮಾತನಾಡಿದ ಅವರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಕಾಲೋನಿಯ ಜನರಿಗೆ ಅನುಕೂಲವಾಗಿದ್ದು, ಸರಿಯಾದ ರೀತಿಯಲ್ಲಿ ಸದ್ಬಳಿಕೆ ಮಾಡಿಕೊಂಡು, ಬೇಸಿಗೆಯಲ್ಲಿ ಕುಡಿಯುವ ನೀರು ಬಹಳ ಅವಶ್ಯಕವಾಗಿದ್ದು, ನೀರು ಪೊಲಾಗದಂತೆ ಕ್ರಮವಹಿಸಿ, ತಾವೆಲ್ಲರೂ ನಮ್ಮ ಓಣಿ ನಮ್ಮ ನೀರು ನಮ್ಮ ವಾರ್ಡು ಎಂಬ ಭಾವನೆಯಿಂದ ನಲ್ಲಿನ ನೀರೀನ ಸದ್ಬಳಿಕೆ ಮಾಡಿಕೊಂಡಗ ಮಾತ್ರ ನಗರಸಭೆಯಿಂದ ಮಾಡಿದ ನೀರಿನ ಕಾಮಗಾರಿ ಸಾರ್ತಕತೆಯಾಗುತ್ತದೆ. ಅವರು ಮುಂದುವರೆದು ಮಾತನಾಡಿ ವಾರ್ಡಿನ ಸದಸ್ಯರಾದ ಅಮ್ಜದ್ ಪಟೇಲ್ ನಿಮ್ಮ ವಾರ್ಡಿನ ಕುಡಿಯುವ ನೀರಿನ ಸಲುವಾಗಿ ಹಾಗೂ ಇತರ ಮೂಲಭೂತ ಸೌಕರ್ಯದ ಸಲುವಾಗಿ ಹಗರಿಳು ಶ್ರಮಿಸುತ್ತಿದ್ದು, ಅವರಿಗೆ ವಾರ್ಡಿನ ಎಲ್ಲ ಜನರು ಸಹಕಾರ ನೀಡಿದಾಗ ಮಾತ್ರ ಇಂತಹ ಕಾಮಗಾರಿಗಳು ಕೈಗೊಳ್ಳಲು ಸದ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಅಮ್ಜದ್ ಪಟೇಲ್, ಹಾಗೂ ಸಹಾಯಕ ಕಾರ್ಯನಿರ್ವಾಕ ಅಭಿಯಂತರರಾದ ಆರ್.ಆರ್. ಪಾಟೀಲ್, ಸಹಾಯಕ ಅಭಿಯಂತರಾದ ವೀರೇಶ ಓಣಿಯ ಅನೇಕ ಹಿರಿಯರು ಉಪಸ್ಥಿತರಿದ್ದರು. ಪೋಟೋ: ೦೧ & ೦೨
Please follow and like us:
error